• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ 20 ಪ್ರಭಾವಿ ವ್ಯಕ್ತಿಗಳಲ್ಲಿ ರಾಷ್ಟ್ರಪತಿಯಾಗಲು ಯಾರು ಸಮರ್ಥರು?

By ಮೈತ್ರೇಯಿ ಬರುವಾ, ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 15 : ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ? ಬಹುಶಃ ಈ ವಿಷಯದ ಕುರಿತು ಈ ಬಾರಿ ನಡೆದಷ್ಟು ಚರ್ಚೆ ಯಾವತ್ತಿಗೂ ನಡೆದಿಲ್ಲ. ರಜನಿಕಾಂತ್ ರಿಂದ ಹಿಡಿದು ಮಿಲ್ಕಾ ಸಿಂಗ್ ವರೆಗೆ ಹಲವಾರು ಹೆಸರುಗಳು ಹರಿದಾಡುತ್ತಲೇ ಇದೆ. ಯಾರಿಗೆ ಒಲಿಯಲಿದೆ ಈ ಪಟ್ಟ? ಅದನ್ನು ನಿರ್ಧರಿಸುವವರು ಪ್ರಧಾನಿ ನರೇಂದ್ರ ಮೋದಿ.

ಇದೇ ಜುಲೈ ತಿಂಗಳಲ್ಲಿ ಪ್ರಸ್ತುತ ರಾಷ್ಟ್ರಪತಿಯಾಗಿರುವ ಡಾ. ಪ್ರಣಬ್ ಮುಖರ್ಜಿ ಅವರು ಅವಧಿ ಮುಗಿಯಲಿದೆ. ನರೇಂದ್ರ ಮೋದಿ ಅವರ ಕೈ ಮೇಲಾಗಬಾರದೆಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತಂತ್ರಗಾರಿಕೆಯನ್ನು ಹೆಣೆಯುತ್ತಲೇ ಇವೆ. ಆದರೆ, ಕಳೆದ ಚುನಾವಣೆಗಳಲ್ಲಿ ಭಾರೀ ಗೆಲುವು ಕಂಡಿರುವ ಭಾರತೀಯ ಜನತಾ ಪಕ್ಷದ ಕೈ ಮೇಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.[ರಾಷ್ಟ್ರಪತಿ ರೇಸ್: ದ್ರೌಪದಿ ಮುರ್ಮು VS ಗೋಪಾಲಕೃಷ್ಣ ಗಾಂಧಿ!?]

ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಅಭೂತಪೂರ್ವ ಗೆಲುವು ಕಂಡಿದ್ದರೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟ (ಎನ್‌ಡಿಎ)ಗೆ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು 25 ಸಾವಿರ ಮತಗಳ ಕೊರತೆಯಿದೆ. ಇದು ಅಂತಹ ಕೊರೆತೆಯಲ್ಲ. ತನ್ನ ಮೈತ್ರಿಕೂಟದ ಬಿಜು ಜನತಾ ದಳ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಗಳನ್ನು ಒಲಿಸಿಕೊಂಡರೆ ಮುಂದಿನ ರಾಷ್ಟ್ರಪತಿ ಆಯ್ಕೆ ಮಾಡುವುದು ಬಿಜೆಪಿಗೆ ಕಷ್ಟವೇನಲ್ಲ. [ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?]

ಯಾರು ರಾಷ್ಟ್ರಪತಿಯಾಗಬೇಕು ಎಂಬ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆ ನಡೆಯುತ್ತಿರುವಾಗ, ಈ ಪಟ್ಟಕ್ಕೆ ಸೂಕ್ತವಾಗಿರುವ, ಸ್ಮಾರ್ಟ್ ಆಗಿರುವ, ಜಾಣ್ಮೆಯಿರುವ ಮತ್ತು ಜನಪ್ರಿಯವಾಗಿರುವ, ವಿಭಿನ್ನ ಹಿನ್ನೆಲೆಯುಳ್ಳ 20 ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನು ಒನ್ಇಂಡಿಯಾ ಸಿದ್ಧಮಾಡಿದೆ. ಈ ಪಟ್ಟಿಯನ್ನು ನೋಡಿ, ನಿಮ್ಮ ವಸ್ತುನಿಷ್ಠ ಅನಿಸಿಕೆಯನ್ನು ಕಾಮೆಂಟ್ ಬಾಕ್ಸಿನಲ್ಲಿ ಹಾಕಿರಿ.[ಸಂಭಾವ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದಷ್ಟು]

ನಂದನ್ ನಿಲೇಕಣಿ

ನಂದನ್ ನಿಲೇಕಣಿ

ಇಂದು ಆಧಾರ್ ಕಾರ್ಡ್ ಜೀವನದ ಪ್ರತಿಯೊಂದು ಕೆಲಸದಲ್ಲಿಯೂ ಅವಿಭಾಜ್ಯ ಅಂಗವಾಗಿರುವ, ದೇಶದ ಪ್ರತಿ ಜನತೆಗೆ ಪ್ರತ್ಯೇಕ ಗುರುತು ನೀಡಿರುವ, ಆಧಾರ್ ಜನಕ ಮತ್ತು ನಿಷ್ಕಳಂಕ ವ್ಯಕ್ತಿತ್ವದ ಕನ್ನಡಿಗ ನಂದನ್ ನಿಲೇಕಣಿ ಏಕೆ ರಾಷ್ಟ್ರಪತಿಯಾಗಬಾರದು? ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಪ್ರಭುತ್ವ ಸಾಧಿಸಲು ಭಾರತ ಹಾತೊರೆಯುತ್ತಿರುವ ಈ ಸಮಯದಲ್ಲಿ ಭಾರತದ ಬೃಹತ್ ಕನಸುಗಳನ್ನು ನನಸು ಮಾಡಲು ಇವರಿಗಿಂತ ಬೇರೆ ವ್ಯಕ್ತಿ ಮತ್ತಾರಿದ್ದಾರೆ?[ಸುದ್ದಿಸ್ವಾರಸ್ಯ : ರಜನಿ ಭಾರತದ ಮುಂದಿನ ರಾಷ್ಟ್ರಪತಿ?]

ಮಹಾವೀರ್ ಸಿಂಗ್ ಫೋಗಟ್

ಮಹಾವೀರ್ ಸಿಂಗ್ ಫೋಗಟ್

ಭಾರತದ ಮಾಜಿ ಕುಸ್ತಿಪಟು, ಓಲಿಂಪಿಕ್ ಕುಸ್ತಿಪಟುಗಳ ಕೋಚ್, ಪ್ರಖ್ಯಾತ ಮಹಿಳಾ ಕುಸ್ತಿಪಟುಗಳಾದ ಫೋಗಟ್ ಸಹೋದರಿಯರ ತಂದೆ ಮಹಾವೀರ್ ಸಿಂಗ್ ಫೋಗಟ್. ಅವರ ಜೀವನ ಕುಸ್ತಿಪಟುಗಳಿಗೆ ಮಾತ್ರವಲ್ಲ, ಯುವಜನತೆಗೆ ಸ್ಫೂರ್ತಿ. ಅವರ ಸಾಹಸಗಾಥೆಯುಳ್ಳ ದಂಗಾಲ್ ಚಿತ್ರ ದೇಶದ ಜನಮನ ಗೆದ್ದಿದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಇನ್ನೂ ಸಾಧಿಸಬೇಕು ಎಂಬ ಕನಸನ್ನು ಮೋದಿ ಬಿತ್ತುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಮಹಾವೀರ್ ಸಿಂಗ್ ಫೋಗಟ್ ಅತ್ಯಂತ ಸೂಕ್ತ ವ್ಯಕ್ತಿ. ಇದು ಸ್ವಲ್ಪ ಅತಿರೇಕವೆನಿಸಬಹುದು. ಆದರೆ, ಏಕೆ ಸಾಧ್ಯವಿಲ್ಲ?

ಕಪಿಲ್ ದೇವ್

ಕಪಿಲ್ ದೇವ್

ನಾವು ಮನಸ್ಸು ಮಾಡಿದರೆ ಗೆದ್ದೇ ಗೆಲ್ಲುತ್ತೇವೆ ಎಂದು ಕ್ರಿಕೆಟ್ ಜಗತ್ತಿಗೆ, ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಮೊದಲ ಬಾರಿ ತೋರಿಸಿಕೊಟ್ಟವರು ಮಾಜಿ ವೇಗದ ಬೌಲರ್ ಕಪಿಲ್ ದೇವ್. ಇಡೀ ಜಗತ್ತು ಕಂಡಿರುವ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಕಪಿಲ್ ಕೂಡ ಒಬ್ಬರು. ಯಾವುದೇ ವಿವಾದಗಳಿಗೆ ಎಡೆಯಾಗದಂತೆ ತಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಮತ್ತು ಅವರಲ್ಲಿ ದೇಶಭಕ್ತಿ ಅತ್ಯಂತ ಉಜ್ವಲವಾಗಿದೆ. ಕ್ರಿಕೆಟ್ ಬಗ್ಗೆ ಅಸಾಧ್ಯ ಕ್ರೇಜ್ ಹೊಂದಿರುವ ಭಾರತದ ರಾಷ್ಟ್ರಪತಿ ಕಪಿಲ್ ಯಾಕಾಗಬಾರದು?

ಎಂಎಸ್ ಸ್ವಾಮಿನಾಥನ್

ಎಂಎಸ್ ಸ್ವಾಮಿನಾಥನ್

ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತರಾಗಿರುವ ಎಂಎಸ್ ಸ್ವಾಮಿನಾಥನ್ ಅವರು ಬಹುತೇಕ ಎಲ್ಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಗಳಿಸಿರುವ ಸ್ವಾಮಿನಾಥನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಟ್ಟಿಕೊಂಡಿರುವ ಕನಸನ್ನು ನನಸಾಗಿಸಬಲ್ಲರು. ಅವರಿಗೆ ಈಗ 91 ವರ್ಷವಾಗಿದ್ದರೂ, ಅಷ್ಟೇ ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ.

ಅರುಣ್ ಶೌರಿ

ಅರುಣ್ ಶೌರಿ

ಮೊದಲಿದ್ದಂತೆ ಭಾರತೀಯ ಪತ್ರಿಕೋದ್ಯಮ ಇಂದು ಸ್ವತಂತ್ರವಾಗಿಲ್ಲ ಮತ್ತು ಯಾವುದಕ್ಕೂ ಬೆದರದ ಕ್ಷೇತ್ರವಾಗಿ ಉಳಿದಿಲ್ಲ. ಭಾರತದ ಪತ್ರಿಕೋದ್ಯಮಕ್ಕೆ ಮತ್ತೆ ಮೊದಲಿನ ಗತ್ತು ತರುವ ಅಗತ್ಯವಿರುವುದರಿಂದ, ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಅರುಣ್ ಶೌರಿಯವರು ರಾಷ್ಟ್ರಪತಿ ಹುದ್ದೆಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಬಲ್ಲರು.

ರಘುರಾಮ್ ರಾಜನ್

ರಘುರಾಮ್ ರಾಜನ್

ಭಾರತದ ಅರ್ಥವ್ಯವಸ್ಥೆಗೆ ತಮ್ಮ ಚಲನಶೀಲತೆ, ನಾವೀನ್ಯತೆಯಿಂದ ಹೊಸರೂಪ ಕೊಟ್ಟವರು, ಅರ್ಥವ್ಯವಸ್ಥೆಗೆ ಉತ್ತೇಜನ ತಂದವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್. ಭಾರತಕ್ಕೆ ಮತ್ತು ನರೇಂದ್ರ ಮೋದಿ ಅವರಿಗೆ ಈಗ ಬೇಕಾಗಿರುವುದು ಅತ್ಯಂತ ಪ್ರಬಲವಾದ ಅರ್ಥವ್ಯವಸ್ಥೆ. ಈ ದೃಷ್ಟಿಯಿಂದ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ರಘುರಾಮ್ ರಾಜನ್ ಅವರು ಸಮರ್ಥವಾಗಿ ಈ ದಿಕ್ಕಿನಲ್ಲಿ ನಡೆಸಬಲ್ಲರು.

ಸೈಯದ್ ಅತಾ ಹುಸೇನ್

ಸೈಯದ್ ಅತಾ ಹುಸೇನ್

ನಿವೃತ್ತ ಲೆ.ಜ. ಸೈಯದ್ ಅತಾ ಹುಸೇನ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಹುದ್ದೆಯ ರೇಸ್ ನಲ್ಲಿದ್ದವರು. ಆ ರಾಜ್ಯದ ಸಮಸ್ಯೆಗಳ ಅರಿವು ಮತ್ತು ಅವುಗಳಿಗೆ ಸೂಕ್ತ ಪರಿಹಾರವನ್ನು ಅವರು ಚಿಟಿಕೆ ಹೊಡೆಯುವಷ್ಟರಲ್ಲಿ ಸೂಚಿಸಬಲ್ಲರು. ಅಲ್ಲಿನ ಗಹನವಾದ ಸಮಸ್ಯೆಯನ್ನು ಅವರು ಅಷ್ಟು ಆಳವಾಗಿ ಅರಿತುಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಕ್ಷೋಬೆಯನ್ನು ಗಮನದಲ್ಲಿಟ್ಟುಕೊಂಡರೆ ಇವರು ರಾಷ್ಟ್ರಪತಿ ಹುದ್ದೆಗೂ ಸೂಕ್ತ ವ್ಯಕ್ತಿಯಾಗಬಲ್ಲರು.

ಎಂಎನ್ ವೆಂಕಟಾಚಲಯ್ಯ

ಎಂಎನ್ ವೆಂಕಟಾಚಲಯ್ಯ

ರಾಷ್ಟ್ರಪತಿ ಹುದ್ದೆ ಬರೀ ಆಡಳಿತ ಪಕ್ಷದ ಕೈಗೊಂಬೆಯಲ್ಲ. ಅದಕ್ಕೆ ತನ್ನದೇ ಆದ ಗೌರವ, ಗತ್ತುಗೈರತ್ತು ಇದೆ. ಈ ದೃಷ್ಟಿಯಿಂದ ಆಲೋಚನೆ ಮಾಡಿದರೆ ಭಾರತ ಕಂಡ ಅತ್ಯಂತ ಸಮರ್ಥ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಎಂಎನ್ ವೆಂಕಟಾಚಲಯ್ಯ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೃದು, ಚಿಂತನಶೀಲ ಮತ್ತು ಅಷ್ಟೇ ಕಠಿಣ ವ್ಯಕ್ತಿತ್ವವನ್ನು ಹೊಂದಿರುವ ವೆಂಕಟಾಚಲಯ್ಯ ಅವರು ರಾಷ್ಟ್ರಪತಿ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು.

ಬಾಬಾ ರಾಮದೇವ್

ಬಾಬಾ ರಾಮದೇವ್

ತಮ್ಮ ಯೋಗದಿಂದ ಮಾತ್ರವಲ್ಲ ಪತಂಜಲಿ ಉತ್ಪನ್ನಗಳಿಂದ ಬಾಬಾ ರಾಮದೇವ್ ಅವರು ಜಾಗತಿಕ ವ್ಯಕ್ತಿಯಾಗಿ ಬೆಳೆದಿದ್ದಾರೆ. ವಿದೇಶಿ ಬ್ಯಾಂಕ್ ಗಳಿಂದ ಕಪ್ಪು ಹಣವನ್ನು ಭಾರತಕ್ಕೆ ತರಬೇಕು ಎಂದು ಕೂಗು ಎಬ್ಬಿಸಿದವರಲ್ಲಿ ಇವರೂ ಪ್ರಮುಖರು. ಭಾರತ ದೇಶೀಯವಾಗಿ ಪ್ರಗತಿ ಹೊಂದಬೇಕು ಎಂದು ಕನಸು ಕಂಡವರು. ಹಾಗೆಯೆ, ಪ್ರಧಾನಿಯ ಮೇಕ್ ಇನ್ ಭಾರತದ ರಾಯಭಾರಿ ಕೂಡ. ಹಿಂದೂತ್ವ ಮತ್ತು ಉದ್ಯಮಿಯ ಸಂಗಮದಂತಿರುವ ಬಾಬಾ ರಾಮದೇವ್ ರಾಷ್ಟ್ರಪತಿ ಹುದ್ದೆಯನ್ನು ತುಂಬಬಲ್ಲರೆ?

ಸೈಯದ್ ಜೈನಿಯುಲ್ ಅಬೆದೀನ್ ಅಲಿ ಖಾನ್

ಸೈಯದ್ ಜೈನಿಯುಲ್ ಅಬೆದೀನ್ ಅಲಿ ಖಾನ್

ಅಜ್ಮೇರ್ ಶರೀಫ್ ದರ್ಗಾದ ಮುಖ್ಯಸ್ಥರಾಗಿರುವ ಇವರು ಭಾರತದ ಸೂಫಿ ವಿಚಾರಧಾರೆಯ ಮುಖವಾಣಿಯಾಗಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದವರಾದ ಖಾನ್ ಅವರು ರಾಷ್ಟ್ರಪತಿ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಬಲ್ಲರು. ಭಾರತದಲ್ಲಿ ಮುಸ್ಲಿಂ ಯುವಕರು ಹೇಗೆ ಉಗ್ರಗಾಮಿಗಳಾಗಿ ಪರಿವರ್ತಿತವಾಗುತ್ತಿದ್ದಾರೆ ಎಂಬ ವಿಷಯದ ಕುರಿತು ಮೋದಿಯವರು ಖಾನ್ ಅವರೊಂದಿಗೆ ಗಹನವಾದ ಚರ್ಚೆ ನಡೆಸಿದ್ದಾರೆ.

ಇರೋಮ್ ಶರ್ಮಿಳಾ

ಇರೋಮ್ ಶರ್ಮಿಳಾ

ಮಣಿಪುರದಲ್ಲಿ ಭಾರತೀಯ ಸೇನೆಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಕಿತ್ತೊಗೆಯಬೇಕು ಎಂದು 16 ವರ್ಷಗಳ ಕಾಲ ಹೋರಾಟ ನಡೆಸಿದವರು ಇರೋಮ್ ಶರ್ಮಿಳಾ. ಅವರ ಭಾರತದ ಮಹಿಳಾ ಶಕ್ತಿಯ ಪ್ರತೀಕವಾಗಿದ್ದಾರೆ. ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಅವರು ಇತ್ತೀಚೆಗೆ ಮಣಿಪುರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇಂಥ ಪ್ರಬಲ ವ್ಯಕ್ತಿತ್ವದ ಮಹಿಳೆಯೊಬ್ಬರು ಭಾರತದ ರಾಷ್ಟ್ರಾಧ್ಯಕ್ಷರಾದರೆ ಭಾರತಕ್ಕೂ ಒಂದು ಘನತೆ.

ಪ್ರೊ. ಸಿಎನ್ಆರ್ ರಾವ್

ಪ್ರೊ. ಸಿಎನ್ಆರ್ ರಾವ್

ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತೆ ಭಾರತ ಕಂಡ ಅತ್ಯುನ್ನತ ವಿಜ್ಞಾನಿಗಳಲ್ಲಿ ಒಬ್ಬರು ಪ್ರೊ. ಸಿಎನ್ಆರ್ ರಾವ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್, ಬೆಂಗಳೂರಿನ ಮಾಜಿ ನಿರ್ದೇಶಕರು ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಇವರು, ವಿಜ್ಞಾನ ಕ್ಷೇತ್ರದಲ್ಲಿ ಭಾರತ ಇನ್ನೂ ಮಹತ್ತರವಾದದ್ದನ್ನು ಸಾಧಿಸಬೇಕು ಎಂದು ಕನಸು ಕಂಡವರಲ್ಲಿ ಒಬ್ಬರು. ಇವರು ಈಗ ಭಾರತದ ರಾಷ್ಟ್ರಪತಿಯಾದರೆ ಭಾರತ ಇನ್ನಷ್ಟು ಉಜ್ವಲವಾಗಿ ಪ್ರಜ್ವಲಿಸಬಲ್ಲದಲ್ಲವೆ?

ಶಬಾನಾ ಅಜ್ಮಿ

ಶಬಾನಾ ಅಜ್ಮಿ

ಖ್ಯಾತ ಸಿನೆತಾರೆಯರಾದ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅವರ ಹೆಸರುಗಳು ರಾಷ್ಟ್ರಪತಿ ಹುದ್ದೆಗೆ ಚಾಲ್ತಿಯಲ್ಲಿರುವಾಗ, ಮಹಿಳಾ ಸಂವೇದನೆಯ ಪ್ರತಿಬಿಂಬವಾಗಿರುವ, ನಿರ್ಭಿಡೆಯ ಮಾತುಗಾರ್ತಿ ಶಬಾನಾ ಅಜ್ಮಿ ಅವರನ್ನು ಒನ್ಇಂಡಿಯಾ ಸೂಚಿಸುತ್ತಿದೆ. ತಮ್ಮ ಅತ್ಯದ್ಭೂತ ಅಭಿನಯದಿಂದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು ಶಬಾನಾ. ಹಲವಾರು ಚಳವಳಿ ನೇತೃತ್ವ ವಹಿಸಿಕೊಂಡಿರುವ ಅವರು ಭಾರತದ ಮುಸ್ಲಿಂ ಮಹಿಳೆಯರ ಪ್ರತಿನಿಧಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ಮಿಲ್ಕಾ ಸಿಂಗ್

ಮಿಲ್ಕಾ ಸಿಂಗ್

ಭಾರತ ನಿಜವಾಗಿಯೂ ಓಟದಲ್ಲಿ ಪ್ರಗತಿ ಸಾಧಿಸಬಯಸಿದ್ದರೆ ಅದಕ್ಕೆ 'ಫ್ಲೈಯಿಂಗ್ ಸಿಖ್' ಎಂದೇ ಖ್ಯಾತಿ ಗಳಿಸಿದ್ದ ಮಿಲ್ಕಾ ಸಿಂಗ್ ಸೂಕ್ತ ವ್ಯಕ್ತಿ. 2010ರಲ್ಲಿ ಕೃಷ್ಣ ಪೂಣಿಯಾ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಪದಕ ಗೆಲ್ಲುವವರೆಗೆ, ಮಿಲ್ಕಾ ಸಿಂಗ್ ಅವರೇ ವೈಯಕ್ತಿಕ ಪದಕ ಗೆದ್ದ ಏಕೈಕ ವ್ಯಕ್ತಿಯಾಗಿದ್ದರು. ಇಂದಿಗೂ ಅವರು ಅಷ್ಟೇ ಜನಪ್ರಿಯತೆ ಗಳಿಸಿದ್ದಾರೆ ಮತ್ತು ಗೌರವ ಸಂಪಾದಿಸಿದ್ದಾರೆ.

ರತನ್ ಟಾಟಾ

ರತನ್ ಟಾಟಾ

ಭಾರತ ಕಂಡ ಅತ್ಯಂತ ಯಶಸ್ವಿ ಉದ್ಯಮಿಯಾಗಿರುವ ಮತ್ತು ಅತ್ಯದ್ಭುತ ಮಾತುಗಾರರಾಗಿರುವ ರತನ್ ಟಾಟಾ ಅವರು ಕೂಡ ರಾಷ್ಟ್ರಪತಿ ಹುದ್ದೆಗೆ ಸಮರ್ಥ ವ್ಯಕ್ತಿ. ಭಾರತ ಮತ್ತು ಜಗತ್ತಿನಾದ್ಯಂತ ಹೆಸರು ಮಾಡಿರುವ ಟಾಟಾ ಬ್ರಾಂಡಿನಂತೆ ಭಾರತದ ಬ್ರಾಂಡ್ ಮೌಲ್ಯ ಹೆಚ್ಚಿಸುವ ಸಾಮರ್ಥ್ಯ, ಸರಳ ವ್ಯಕ್ತಿತ್ವದ ರತನ್ ಟಾಟಾ ಅವರಲ್ಲಿದೆ.

ಅಣ್ಣಾ ಹಜಾರೆ

ಅಣ್ಣಾ ಹಜಾರೆ

ಭ್ರಷ್ಟಾಚಾರದ ವಿರುದ್ಧ ದನಿಯೆತ್ತದೆ ನಿದ್ದೆ ಹೊಡೆಯುತ್ತಿದ್ದ ಭಾರತವನ್ನು 2011ರಲ್ಲಿ ತಮ್ಮ ಚಳವಳಿಯಿಂದ ಬಡಿದೆಬ್ಬಿಸಿದವರು ಗಾಂಧಿವಾದಿ ಅಣ್ಣಾ ಹಜಾರೆ. ತಮ್ಮ ನಿಷ್ಕಲ್ಮಶ ವ್ಯಕ್ತಿತ್ವ ಮತ್ತು ಸರಳ ವಿಚಾರಧಾರೆಯಿಂದ ದೇಶದ ಕೋಟ್ಯಂತರ ಜನರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ ಅಣ್ಣಾ. ಭಾರತೀಯ ಸೇನೆಯಲ್ಲಿ ಜವಾನರಾಗಿಯೂ ಸೇವೆ ಸಲ್ಲಿಸಿರುವ ಅಣ್ಣಾ ಹಜಾರೆಯವರು ರಾಷ್ಟ್ರಪತಿಯಾದರೆ ಆ ಪದವಿಗೂ ಒಂದು ಗೌರವ ಸಿಕ್ಕಂತೆ.

ರಾಮಚಂದ್ರ ಗುಹಾ

ರಾಮಚಂದ್ರ ಗುಹಾ

ಅಪಾರ ಸಾಹಿತ್ಯದ ಪಾಂಡಿತ್ಯವನ್ನು ಹೊಂದಿರುವ ರಾಮಚಂದ್ರ ಗುಹಾ ಈ ಪಟ್ಟಿಯಲ್ಲಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿ. ಭಾರತದ ರಾಜಕಾರಣ, ಕ್ರೀಡಾಲೋಕ, ಸಾಮಾಜಿಕ ಪಲ್ಲಟ, ಇತಿಹಾಸವನ್ನು ಅತ್ಯಂತ ಸಮರ್ಥವಾಗಿ ತಮ್ಮ ಪದಗಳಲ್ಲಿ ಹರಿಯಬಿಡಬಲ್ಲವರಾಗಿದ್ದಾರೆ. ಭಾರತದ ಸಮಸ್ಯೆಗಳನ್ನು ಅರಿತು ಅವುಗಳಿಗೆ ತಕ್ಕ ಪರಿಹಾರ ಸೂಚಿಸಬಲ್ಲ ಸಾಮರ್ಥ್ಯವೂ ಅವರಿಗಿದೆ. ರಾಷ್ಟ್ರಪತಿಯಾಗಿ ದೇಶವನ್ನು ಮುನ್ನಡೆಸಬಲ್ಲ, ಜಾಗತಿಕವಾಗಿ ಪ್ರತಿನಿಧಿಸಬಲ್ಲ ಇಂಥ ವ್ಯಕ್ತಿಯೊಬ್ಬರು ಭಾರತಕ್ಕೆ ಬೇಕಾಗಿದ್ದಾರೆ.

ನಾರಾಯಣ ಮೂರ್ತಿ

ನಾರಾಯಣ ಮೂರ್ತಿ

ಇವರ ಹೆಸರು ರಾಷ್ಟ್ರಪತಿ ಹುದ್ದೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೆಸರು ಹಲವಾರು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಅವರು ರಾಷ್ಟ್ರಪತಿಯಾಗುವುದು ಇಲ್ಲಿಯವರೆಗೂ ನಾನಾ ಕಾರಣಗಳಿಂದಾಗಿ ಸಾಧ್ಯವಾಗಿಲ್ಲ. ಭಾರತದ ಮಾಹಿತಿ ಕ್ಷೇತ್ರದ ಹಿರೇಹುದ್ದರಿಯಂತಿರುವ ನಾರಾಯಣ ಮೂರ್ತಿ ಅವರಿಗೆ ಈ ಬಾರಿಯಾದರೂ ಈ ಪಟ್ಟ ಒಲಿಯಲಿ ಮತ್ತು ಭಾರತ ಐಟಿ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವಂತಾಗಲಿ.

ಫಾಲಿ ನಾರಿಮನ್

ಫಾಲಿ ನಾರಿಮನ್

ರಾಮ್ ಜೇಠ್ಮಲಾನಿ ಮತ್ತು ಸೋಲಿ ಸೋರಾಬ್ಜಿಯಂತೆ ಫಾಲಿ ನಾರಿಮನ್ ಕೂಡ ಭಾರತದ ಪ್ರಮುಖ ನ್ಯಾಯವಾದಿಗಳಲ್ಲೊಬ್ಬರು. ಅವರು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕವನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಇಂಥ ಸಮರ್ಥ ವಾದಿಯೊಬ್ಬರು ಭಾರತವನ್ನು ರಾಷ್ಟ್ರಪತಿಯಾಗಿ ಮುನ್ನಡೆಸುವಂತಾದರೆ ಅದಕ್ಕಿಂತ ಬೇರೆ ಭಾಗ್ಯ ಇನ್ನೇನಿದೆ.

ಶ್ರೀಶ್ರೀ ರವಿ ಶಂಕರ್ ಗುರೂಜಿ

ಶ್ರೀಶ್ರೀ ರವಿ ಶಂಕರ್ ಗುರೂಜಿ

ಭಾರತದಲ್ಲೇ ಆಗಲಿ, ವಿದೇಶದಲ್ಲೇ ಆಗಲಿ ಶಾಂತಿ ಸಂಧಾನ ನಡೆಯಬೇಕಿದ್ದರೆ ಅಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಇರಲೇಬೇಕು. ಬೆಂಗಳೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ವಿಶ್ವದಾದ್ಯಂತ ಕಟ್ಟಿರುವ ಅವರು, ಜಾಗತಿಕವಾಗಿ ಮನ್ನಣೆ ಗಳಿಸಿರುವ ನಾಯಕರಲ್ಲಿ ಒಬ್ಬರು. ನೈತಿಕ ಮತ್ತು ಆಧ್ಯಾತ್ಮಿಕ ಬದಲಾವಣೆಗಳ ಮುಖಾಂತರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತೀಯರಿಗೆ ಅವರು ಶಕ್ತಿಯಾಗಿ ನಿಲ್ಲಬಲ್ಲರು.

English summary
At a time when everyone is coming up with a new name as India’s next President, OneIndia brings together 20 men and women, who all have the qualities to be the country’s most powerful person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X