ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಕೇಳಿದ ಪ್ರಶ್ನೆ ರಾಹುಲ್‌ಗೇಕಿಲ್ಲ: ಪತ್ರಕರ್ತರ ಕಾಲೆಳೆದ ರಮ್ಯಾ

|
Google Oneindia Kannada News

Recommended Video

ಪತ್ರಕರ್ತರ ಕಾಲೆಳೆದ ಕಾಂಗ್ರೆಸ್ ವಕ್ತಾರೆ ರಮ್ಯಾ | Oneindia Kannada

ನವದೆಹಲಿ, ಮೇ 14: ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಮಾಡುವ ಟ್ವೀಟ್, ವಿವಾದವನ್ನೋ ಚರ್ಚೆಯನ್ನೋ ಹುಟ್ಟುಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿಯೂ ಅವರು ರಾಹುಲ್ ಹಾಗೂ ಮೋದಿ ಅವರ ಸಂದರ್ಶನದಲ್ಲಿನ ಭಿನ್ನತೆಯ ಕುರಿತು ಮಾಡಿರುವ ಟ್ವೀಟ್ ಚರ್ಚೆಯಲ್ಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇತ್ತೀಚೆಗಷ್ಟೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂದರ್ಶನವನ್ನು ನ್ಯೂಸ್ ನೇಷನ್ ಎಂಬ ಚಾನೆಲ್ ಒಂದು ಮಾಡಿತ್ತು. ಇದೇ ಚಾನೆಲ್ ಕೆಲವು ದಿನಗಳ ಮುಂಚೆ ಮೋದಿ ಅವರ ಸಂದರ್ಶನವನ್ನೂ ಮಾಡಿತು. ಮೋದಿ ಅವರ ಸಂದರ್ಶನ ಮಾಡಿದ ಪತ್ರಕರ್ತರಲ್ಲಿ ಒಬ್ಬರು ರಾಹುಲ್ ಅವರ ಸಂದರ್ಶನವನ್ನೂ ಮಾಡಿದ್ದಾರೆ. ಪ್ರಶ್ನೆ ಕೇಳಿರುವ ಧಾಟಿಯಲ್ಲಿ ಅಲ್ಪ ಭಿನ್ನತೆ ಇದೆ, ಇದನ್ನು ಸಾಮಾಜಿಕ ಜಾಲತಾಣ ಚತುರೆ ರಮ್ಯಾ ಅವರು ಕಂಡು ಹಿಡಿದು ಪತ್ರಕರ್ತರ ಕಾಲೆಳೆದಿದ್ದಾರೆ.

ಮೊನ್ನೆ ಮೋದಿ ಅವರ ಸಂದರ್ಶನದಲ್ಲಿ ನ್ಯೂಸ್ ನೇಷನ್‌ ಚಾನೆಲ್‌ನ ಸಂದರ್ಶಕ, 'ನಿಮಗೆ ಯಾವ ಆಹಾರ ಇಷ್ಟ, ನೀವು ಪರ್ಸ್‌ ಇಟ್ಟುಕೊಳ್ಳುತ್ತೀರಾ, ಅಡುಗೆ ಮಾಡಲು ಬರುತ್ತದೆಯೇ' ಇತರೆ ತೀರಾ ಸಾಧಾರಣ, ಅರಾಜಕೀಯ, ಪ್ರಸ್ತುತವಲ್ಲದ ಪ್ರಶ್ನೆಗಳನ್ನು ಕೇಳಿದ್ದರು.

ಆದರೆ ರಾಹುಲ್ ಗಾಂಧಿ ಸಂದರ್ಶನದ ವೇಳೆ ಇಂತಹಾ ಯಾವುದೇ ಪ್ರಶ್ನೆಗಳನ್ನು ಕೇಳದೆ, ಸಾಧ್ಯವಾದಷ್ಟು ಕಠಿಣ ಪ್ರಶ್ನೆಗಳನ್ನೇ ಕೇಳಿದರು. ಸಂದರ್ಶನ ನೋಡಿದವರಿಗೆ, ಸಂದರ್ಶಕರು ರಾಹುಲ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆನೋ ಎಂಬ ಅನುಮಾನ ಮೂಡುವಂತಿತ್ತು.

'ರಾಹುಲ್ ಅವರನ್ನು ಈ ಪ್ರಶ್ನೆಗಳೇಕೆ ಕೇಳಲಿಲ್ಲ'

ಇದನ್ನೇ ಮುಂದು ಮಾಡಿ ಟ್ವೀಟ್ ಮಾಡಿರುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ, 'ನಿಮಗೆ ಯಾವ ಆಹಾರ ಇಷ್ಟ? ನೀವು ಪರ್ಸ್ ಇಟ್ಟುಕೊಳ್ಳುತ್ತೀರಾ? ನಿಮಗೆ ಕಿಚಡಿ ಇಷ್ಟವೇ? ನಿಮಗೆ ಫೊಟೊಗ್ರಫಿ ಇಷ್ಟವೇ? ಯಾವ ಸಿಹಿತಿಂಡಿ ಇಷ್ಟ? ಫ್ಯಾಷನ್‌ ಬಗ್ಗೆ ಗಮನ ವಹಿಸುತ್ತೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೀವು ರಾಹುಲ್ ಅವರನ್ನು ಕೇಳಲಿಲ್ಲವೇ? ಓಹ್ ಹೋಗಲಿ ಬಿಡಿ' ಎಂದು ಕಾಲೆಳೆದಿದ್ದಾರೆ.

ರಡಾರ್ ಹೇಳಿಕೆ ನೀಡಿದ್ದು ಇದೇ ಸಂದರ್ಶನದಲ್ಲಿ

ರಡಾರ್ ಹೇಳಿಕೆ ನೀಡಿದ್ದು ಇದೇ ಸಂದರ್ಶನದಲ್ಲಿ

ಮೋದಿ ಅವರು ಇತ್ತೀಚೆಗೆ ನ್ಯೂಸ್ ನೇಷನ್‌ಗೆ ನೀಡಿದ ಸಂದರ್ಶನ ಭಾರಿ ಸುದ್ದಿಯಾಗಿದೆ. ಇದೇ ಸಂದರ್ಶನದಲ್ಲಿಯೇ ಅವರು, ಮೋಡಗಳಿದ್ದಾಗ ನಾವು ವೈಮಾನಿಕ ದಾಳಿ ಮಾಡಿದರೆ ರಡಾರ್‌ಗೆ ಗೊತ್ತಾಗುವುದಿಲ್ಲ, ಹೋಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಎಂದು ಮಿಲಿಟರಿ ಅಧಿಕಾರಿಗಳಿಗೆ ನಾನೇ ಹೇಳಿದ್ದೆ ಎಂದು ಪೆದ್ದು ಹೇಳಿಕೆ ಕೊಟ್ಟಿದ್ದರು.

ಕಠಿಣವಾದ, ಪ್ರಸ್ತುತ ಪ್ರಶ್ನೆಗಳನ್ನೇ ಕೇಳಲಾಗಿತ್ತು

ಕಠಿಣವಾದ, ಪ್ರಸ್ತುತ ಪ್ರಶ್ನೆಗಳನ್ನೇ ಕೇಳಲಾಗಿತ್ತು

ಇದೇ ನ್ಯೂಸ್ ನೇಷನ್ ರಾಹುಲ್ ಗಾಂಧಿ ಅವರ ಸಂದರ್ಶನ ಮಾಡಿದಾಗ, ರಫೇಲ್, ರಾಹುಲ್ ಅವರು ನ್ಯಾಯಾಲಯಕ್ಕೆ ಕ್ಷಮೆ ಕೇಳಿದ ವಿಷಯ, ನ್ಯಾಯ್ ಯೋಜನೆ, ಕುಟುಂಬ ರಾಜಕಾರಣ, ಸಿಖ್ ನರಮೇಧ ಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು, ಸಂದರ್ಶನ ಸಹ ಕೊಠಡಿಗಳಲ್ಲಿ ನಡೆಯದೆ ಸಮಾವೇಶದ ನಡುವೆಯೇ ನಡೆಯಿತು.

ಮೋದಿ-ಅಕ್ಷಯ್ ಸಂದರ್ಶನವೂ ಗೇಲಿಗೊಳಗಾಗಿತ್ತು

ಮೋದಿ-ಅಕ್ಷಯ್ ಸಂದರ್ಶನವೂ ಗೇಲಿಗೊಳಗಾಗಿತ್ತು

ಮೋದಿ ಅವರ ಸಂದರ್ಶನಗಳನ್ನು ರಮ್ಯಾ ಅವರು ಗೇಲಿ ಮಾಡುತ್ತಿರುವುದು ಇದೇ ಮೊದಲೇನಲ್ಲ, ಇತ್ತೀಚೆಗೆ ಅಕ್ಷಯ್‌ ಕುಮಾರ್ ಅವರು ಮೋದಿ ಅವರ ಸಂದರ್ಶನ ಮಾಡಿದಾಗಲೂ ಸಹ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಗೇಲಿ ಮಾಡಿದ್ದರು. ಆ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಅವರು ಮೋದಿ ಅವರನ್ನು 'ನೀವು ಮಾವಿನ ಹಣ್ಣನ್ನು ಹೇಗೆ ತಿನ್ನುತ್ತೀರಿ' ಎಂದು ಕೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವ್ಯಂಗ್ಯಕ್ಕೆ ಕಾರಣವಾಗಿತ್ತು.

English summary
Ramya ask a journalist in twitter that why you did not ask questions Rahul Gandhi which you ask Narendra Modi, like which is favorite food etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X