ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಯಾಟ್ ಮಾಹಿತಿಯನ್ನು ಮೋದಿಯೇ ಪ್ರಕಟಿಸಿದ್ದೇಕೆ?: ನಿರ್ಮಲಾ ನೀಡಿದ ವಿವರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 1: ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮಾಡಿದ ಮಹತ್ತರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ನಿಮಿಷದ ಭಾಷಣದಲ್ಲಿ ಬಹಿರಂಗಪಡಿಸಿದ್ದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಇದು ವಿರೋಧಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಚುನಾವಣಾ ಲಾಭಕ್ಕಾಗಿ ಮೋದಿ ಅವರು ಈ ಸಾಧನೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಲಾಗಿತ್ತು. ಇದು ವಿಜ್ಞಾನಿಗಳ ಸಾಧನೆ, ಸರ್ಕಾರದ್ದಲ್ಲ ಎಂದು ಅನೇಕರು ಮೋದಿ ವಿರುದ್ಧ ಹರಿಹಾಯ್ದಿದ್ದರು.

ಮೋದಿ ಭಾಷಣ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಮೋದಿ ಭಾಷಣ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ವಿಜ್ಞಾನಿಗಳು ತಮ್ಮ ಶ್ರಮದಿಂದ ಮಾಡಿರುವ ಸಾಧನೆಯನ್ನು ಡಿಆರ್‌ಡಿಒ ಮುಖ್ಯಸ್ಥರೇ ಹಂಚಿಕೊಳ್ಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜೀ ನ್ಯೂಸ್ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಯೋಜನೆಯ ಯಶಸ್ಸಿನ ಬಗ್ಗೆ ಮೋದಿ ಅವರೇ ಏಕೆ ಮೊದಲು ಹೇಳಿಕೆ ನೀಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.

why Narendra Modi announced ASAT success nirmala sitharaman reveals

'ಎಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ವಿಜ್ಞಾನಿಗಳೇ ಬಹಿರಂಗಪಡಿಸಬಹುದಾಗಿತ್ತು. ಆದರೆ, ಅದು ಬೃಹತ್ ಸಾಧನೆ. ಪ್ರಧಾನಿಯವರ ಹೊರತಾಗಿ ಬೇರೆಯವರು ಅದನ್ನು ಪ್ರಕಟಿಸಿದ್ದರೆ, ಅದಕ್ಕೆ ಅಷ್ಟೇನು ಮಹತ್ವ ಸಿಗುತ್ತಿರಲಿಲ್ಲ. ಇದು ರಕ್ಷಣಾ ತಂತ್ರಜ್ಞಾನ. ಯುದ್ಧಕ್ಕಾಗಿ ಮಾಡಿರುವುದು ಅಲ್ಲ. ಇಂತಹ ಪ್ರಕಟಣೆಗಳು ಪ್ರಧಾನಿ ಅವರಿಂದಲೇ ಬರಬೇಕು' ಎಂದು ತಿಳಿಸಿದ್ದಾರೆ.

ಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿ

'ಬಾಲಕೋಟ್ ವೈಮಾನಿಕ ದಾಳಿ ಅತ್ಯಂತ ಸಾಹಸಮಯವಾದದ್ದು. ಉಗ್ರರ ದಾಳಿ ನಡೆದು ನಮ್ಮ 40 ಮಂದಿ ಸೈನಿಕರು ಮೃತಪಟ್ಟಿದ್ದರು. ಸಿಸಿಎಸ್ ಸಭೆ ನಡೆಯಿತು ಮತ್ತು ಅನೇಕ ಸಂಸ್ಥೆಗಳು ವೈಮಾನಿಕ ದಾಳಿಯಲ್ಲಿ ಪಾಲ್ಗೊಂಡಿದ್ದವು. ವಿಭಿನ್ನ ಸಂಸ್ಥೆಗಳ ಮುಖ್ಯಸ್ಥರು ವೈಮಾನಿಕ ದಾಳಿಯ ಮೇಲೆ ನಿಗಾ ಇರಿಸಿದ್ದರು. ನಮ್ಮ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂಬ ಸಂದೇಶ ಬೆಳಗಿನ ಜಾವ 4 ಗಂಟೆಗೆ ನನಗೆ ಸಿಕ್ಕಿತು. ಅದರ ಬಳಿಕವೇ ನಾನು ನಿರಾಳಳಾಗಿದ್ದು' ಎಂದು ಹೇಳಿದ್ದಾರೆ.

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ? ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

ಆದರೆ, ಬಾಲಕೋಟ್ ಮೇಲೆ ವೈಮಾನಿಕದ ದಾಳಿ ನಡೆಸಿದ ಯೋಧರ ಸಾಹಸಕ್ಕೆ ಸಾಕ್ಷ್ಯ ಕೇಳುತ್ತಿರುವುದಕ್ಕೆ ಅವರು ನೋವು ವ್ಯಕ್ತಪಡಿಸಿದರು.

English summary
Defence Minister Nirmala Sitharaman revealed why Prime Minister Narendra Modi has announced the success of ASAT test and not scientists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X