ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 3ರ ತನಕ ಲಾಕ್ ಡೌನ್ ವಿಸ್ತರಣೆ ಆಗಿದ್ದು ಏಕೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 14 : ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆ ಆಗುವ ನಿರೀಕ್ಷೆ ಇತ್ತು. ಆದರೆ, ಮೇ 3ರ ತನಕ ವಿಸ್ತರಣೆ ಆಗಿದ್ದು ಏಕೆ?.

ಪ್ರಧಾನಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದಾಗ ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ವಿವಿಧ ರಾಜ್ಯಗಳು ಬೇಡಿಕೆ ಇಟ್ಟಿದ್ದವು. ಆದರೆ, ಮೇ 3ರ ತನಕ ವಿಸ್ತರಣೆ ಮಾಡಲಾಗಿದೆ. ಇದಕ್ಕೆ ಕಾರಣವೂ ಇದೆ.

ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ

ಒನ್ ಇಂಡಿಯಾಕ್ಕೆ ಸಿಕ್ಕಿರುವ ಮಾಹಿತಿಯಂತೆ ಮೂರು ದಿನ ಲಾಕ್ ಡೌನ್ ವಿಸ್ತರಣೆ ಮಾಡಲು ಕಾರಣವೂ ಇದೆ. ಮೇ 1 ಕಾರ್ಮಿಕರ ದಿನ ರಜೆ ಇದೆ, ಮೇ 2 ಮತ್ತು 3 ಶನಿವಾರ ಮತ್ತು ಭಾನುವಾರ ಇದೆ. ಆದ್ದರಿಂದ, ಮೇ 3ರ ತನಕ ವಿಸ್ತರಣೆ ಮಾಡುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್; ಹೆದ್ದಾರಿಯಲ್ಲಿ ನಿಂತಿವೆ 3.5 ಲಕ್ಷ ಲಾರಿಗಳು ಲಾಕ್ ಡೌನ್; ಹೆದ್ದಾರಿಯಲ್ಲಿ ನಿಂತಿವೆ 3.5 ಲಕ್ಷ ಲಾರಿಗಳು

Why Lockdown Extended Till May 3

ಇಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಕೊರೊನಾ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಬುಧವಾರ ಲಾಕ್ ಡೌನ್ ಹೇಗಿರಲಿದೆ? ಎಂಬ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಲಾಕ್ಡೌನ್: ಪ್ರಧಾನಿ ಮೋದಿ ನೀಡಿದ ಕಟ್ಟುನಿಟ್ಟಿನ ಸಪ್ತಸೂತ್ರಗಳು ಲಾಕ್ಡೌನ್: ಪ್ರಧಾನಿ ಮೋದಿ ನೀಡಿದ ಕಟ್ಟುನಿಟ್ಟಿನ ಸಪ್ತಸೂತ್ರಗಳು

ಏಪ್ರಿಲ್ 20ರ ತನಕ ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಯಾವ ರಾಜ್ಯದಲ್ಲಿ ಕೊರೊನಾ ಹಾಟ್ ಸ್ಪಾಟ್‌ಗಳಿಲ್ಲವೋ ಅಲ್ಲಿ ಕೆಲವು ವಿನಾಯಿತಿ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೊನಾ ಹರಡದಂತೆ ನಿಯಂತ್ರಿಸಲು ಲಾಕ್ ಡೌನ್ ಘೋಷಣೆ ಮಾಡಲಾಯಿತು. ಇದರಿಂದಾಗಿ ಜನರು ಹಲವು ಕಷ್ಟಗಳನ್ನು ಎದುರಿಸಿದರು. ಆದರೆ, ಸೈನಿಕನಂತೆ ಪ್ರತಿಯೊಬ್ಬ ಪ್ರಜೆ ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದು ಮೋದಿ ಬಣ್ಣಿಸಿದರು.

ಬುಧವಾರ ಬಿಡುಗಡೆಯಾಗಲಿರುವ ಮಾರ್ಗಸೂಚಿ ಹೇಗಿರಲಿದೆ? ಎಂಬುದರ ಮೇಲೆ ಜನರು ಗಮನ ಕೇಂದ್ರಿಕರಿಸಿದ್ದಾರೆ. ದೇಶದ ಸುಮಾರು 400 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಇಲ್ಲ. ಅಲ್ಲಿ ಯಾವ ವಿನಾಯಿತಿ ಸಿಗಲಿದೆ? ಎಂದು ಕಾದು ನೋಡಬೇಕಿದೆ.

English summary
Prime Minister Narendra Modi extended the lockdown until May 3, 2020. The decision came as a bit of a surprise as all the states had recommended that the lockdown be extended until April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X