ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ ಘರ್ ತಿರಂಗಾ: ಆರ್‌ಎಸ್‌ಎಸ್‌ ಕಚೇರಿ ಮೇಲೆ ಯಾಕಿಲ್ಲ? ಪ್ರತಿಪಕ್ಷಗಳ ಪ್ರಶ್ನೆ

|
Google Oneindia Kannada News

ನವದೆಹಲಿ,ಆಗಸ್ಟ್‌. 3: ರಾಷ್ಟ್ರಧ್ವಜದಿಂದ ತಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ಗಳನ್ನು ತುಂಬಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಬೆನ್ನಲ್ಲೇ ಬಿಜೆಪಿ ಪಕ್ಷದ ಸಿದ್ಧಾಂತವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಚೇರಿ ಮೇಲೆ ಯಾಕೆ ತಿರಂಗ ಹಾರಿಸಿಲ್ಲ ಎಂದು ಪ್ರತಿಪಕ್ಷಗಳು ಕೇಳಿವೆ.

ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ತಮ್ಮ ಡಿಪಿ ಪ್ರೊಫೈಲ್‌ಗಳನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸುವಂತೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಒತ್ತಾಯಿಸಿದ್ದರು. ಆದರೆ ಆರ್‌ಎಸ್‌ಎಸ್ ಪ್ರಧಾನ ಮಂತ್ರಿಯ ಮನವಿಯನ್ನು ಪಾಲಿಸಿಲ್ಲ. ಸಂಘಟನೆಯ ಅಧಿಕೃತ ಟ್ವಿಟರ್ ಖಾತೆ ಅಥವಾ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವಾರು ಹಿರಿಯ ಸಂಘದ ನಾಯಕರು ಧ್ವಜವನ್ನು ಬದಲಾಯಿಸಲಿಲ್ಲ. ಆರ್‌ಎಸ್‌ಎಸ್‌ನ ಫೇಸ್‌ಬುಕ್ ಪುಟವೂ ಅದನ್ನು ಬದಲಿಸಿಲ್ಲ.

ಇದಕ್ಕೆ ಹಿರಿಯ ಕಾರ್ಯಕಾರಿ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ನಾವು ಯಾರ ಒತ್ತಡಕ್ಕೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಡಿಪಿ ಚಿತ್ರವನ್ನು ಬದಲಾಯಿಸಬೇಕೆಂದರೆ ಅದು ಸರಿಯಾದ ಸಮಯದಲ್ಲಿ ಆಗುತ್ತದೆ. ಆದಾಗ್ಯೂ, ನಮ್ಮ ಕೆಲವು ನಾಯಕರು ಈಗಾಗಲೇ ತಮ್ಮ ಪ್ರದರ್ಶನ ಫೋಟೋಗಳನ್ನು ಬದಲಾಯಿಸಿದ್ದಾರೆ ಅವರಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಮನಮೋಹನ್ ವೈದ್ಯ, ಅರುಣ್ ಕುಮಾರ್ ಮತ್ತು ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಬದಲಾವಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

 ಪ್ರೊಫೈಲ್ ಫೋಟೋಗಳ ಸ್ಕ್ರೀನ್‌ಶಾಟ್‌

ಪ್ರೊಫೈಲ್ ಫೋಟೋಗಳ ಸ್ಕ್ರೀನ್‌ಶಾಟ್‌

ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಟ್ವಿಟರ್‌ನಲ್ಲಿ ಹಾರಿಹಾಯ್ದು ಆರ್‌ಎಸ್‌ಎಸ್ ಮತ್ತು ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪ್ರೊಫೈಲ್ ಫೋಟೋಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಂಘ್ ವಾಲೋನ್, ಅಬ್ ತೋ ತಿರಂಗ ಕೋ ಅಪ್ನಾ ಲೋ (ಸಂಘದ ಜನರು, ಕನಿಷ್ಠ ಈಗ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಿ. ) ಎಂದು ಅವರು ಬರೆದಿದ್ದಾರೆ.

 ಪ್ರಧಾನಿಯವರ ಸಂದೇಶ ಕುಟುಂಬಕ್ಕೆ ತಲುಪಿಲ್ಲ

ಪ್ರಧಾನಿಯವರ ಸಂದೇಶ ಕುಟುಂಬಕ್ಕೆ ತಲುಪಿಲ್ಲ

ನಮ್ಮ ನಾಯಕ (ಜವಾಹರಲಾಲ್) ನೆಹರು ಅವರ ಡಿಪಿಯನ್ನು ನಾವು ಅವರ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವ ಪೋಟೋ ಹಾಕಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಆದರೆ ಪ್ರಧಾನಿಯವರ ಸಂದೇಶ ಅವರ ಕುಟುಂಬಕ್ಕೆ ತಲುಪಿಲ್ಲವಂತೆ. 52 ವರ್ಷಗಳಿಂದ ನಾಗಪುರದ ತಮ್ಮ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡದವರು ಅವರು ಪ್ರಧಾನಿಯ ಮಾತನ್ನು ಪಾಲಿಸುತ್ತಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

 52 ವರ್ಷಗಳಿಂದ ಆರ್‌ಎಸ್‌ಎಸ್ ತಿರಂಗ ಸ್ವೀಕರಿಸಲಿಲ್ಲ

52 ವರ್ಷಗಳಿಂದ ಆರ್‌ಎಸ್‌ಎಸ್ ತಿರಂಗ ಸ್ವೀಕರಿಸಲಿಲ್ಲ

ಕಾಂಗ್ರೆಸ್ ನಾಯಕರು ಮಾತ್ರವಲ್ಲದೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕೂಡ ಆರ್‌ಎಸ್‌ಎಸ್ ಮತ್ತು ಬಿಜೆಪಿ ದಶಕಗಳಿಂದ ಭಾರತೀಯ ಧ್ವಜದ ಮಹತ್ವವನ್ನು ನಿರ್ಲಕ್ಷಿಸಿದ್ದಕ್ಕಾಗಿ ಕಟುವಾಗಿ ಟೀಕಿಸಿದೆ. 52 ವರ್ಷಗಳಿಂದ ಆರ್‌ಎಸ್‌ಎಸ್ ಭಾರತೀಯ ಧ್ವಜವನ್ನು ಸ್ವೀಕರಿಸಲಿಲ್ಲ ಮತ್ತು 2002 ರವರೆಗೆ ಭಾರತದ ಧ್ವಜವನ್ನು ಹಾರಿಸಲಿಲ್ಲ. ಈಗ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಮಗೆ ಹರ್ ಘರ್ ತಿರಂಗ, ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಕುರಿತು ಉಪನ್ಯಾಸ ನೀಡುತ್ತಿವೆ. #ShameOnBJP" ಎಂದು ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಮತ್ತು ತೆಲಂಗಾಣ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ವೈ ಸತೀಶ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

 ತಿರಂಗಕ್ಕೆ ಗೌರವಿಸುವ ಏಕೈಕ ಪಕ್ಷ ಬಿಜೆಪಿ

ತಿರಂಗಕ್ಕೆ ಗೌರವಿಸುವ ಏಕೈಕ ಪಕ್ಷ ಬಿಜೆಪಿ

ಮತ್ತೊಂದೆಡೆ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಅರ್ಪಿಸಲು ಬುಧವಾರ ಆಯೋಜಿಸಿದ್ದ ತಿರಂಗಾ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸದ ಪ್ರತಿಪಕ್ಷಗಳನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿತು. ಬಿಜೆಪಿ ಪಕ್ಷದ ಐಟಿ ಸೆಲ್ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವಿಯಾ, ಇಂದು ಬೆಳಿಗ್ಗೆ, ಸಂಸದರು ಐತಿಹಾಸಿಕ ಕೆಂಪು ಕೋಟೆಯಿಂದ ತಿರಂಗಾ ಬೈಕ್ ರ‍್ಯಾಲಿ ನಡೆಸಿದರು. ಆದರೆ ಯಾವುದೇ ವಿರೋಧ ಪಕ್ಷದ ಸಂಸದರು ಭಾಗವಹಿಸಲಿಲ್ಲ. ಇದು ನಮ್ಮ ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾದ ತಿರಂಗಕ್ಕೆ ಗೌರವಿಸುವ ಏಕೈಕ ಪಕ್ಷ ಬಿಜೆಪಿ ಎಂದು ನಿಸ್ಸಂದಿಗ್ಧವಾಗಿ ಒಪ್ಪಿಕೊಳ್ಳಲಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

English summary
After Prime Minister Narendra Modi called on them to fill their social media profiles with the national flag, the opposition has asked why the BJP party's ideologue Rashtriya Swayamsevak Sangh (RSS) office has not been flagged off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X