ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಪ್ರಧಾನಿ ಶಿಂಜೋ ರಾಜೀನಾಮೆ: ಭಾರತದ ಮರುಕವೇಕೆ?

|
Google Oneindia Kannada News

ಜಪಾನ್, ಆಗಸ್ಟ್ 29: ಜಪಾನ್ ಪ್ರಧಾನಿ ಶಿಂಜೋ ಅಬೆ ಕಾಲದಲ್ಲಿ ಭಾರತ ಹಾಗೂ ಜಪಾನ್ ಸಂಬಂಧದಲ್ಲಿ ಸಾಕಷ್ಟು ವೃದ್ಧಿ ಕಾಣಿಸಿತ್ತು. ಭಾರತದ ಭವಿಷ್ಯ ಬದಲಿಸಬಲ್ಲ ಅಹಮದಾಬಾದ್ ಹಾಗೂ ಮುಂಬೈ ಬುಲೆಟ್ ರೈಲು ಯೋಜನೆಗೆ ಒಪ್ಪಂದ ಅವರ ಕಾಲದಲ್ಲೇ ನಡೆದಿತ್ತು.

ಬುಲೆಟ್ ರೈಲು ಯೋಜನೆಗೆ ಜಪಾನ್ ತಂತ್ರಜ್ಞಾನದ ಜೊತೆಗೆ ಹಣದ ಸಹಾಯವನ್ನೂ ಮಾಡುತ್ತಿದೆ. ಇಬ್ಬರಿಗೂ ಸಮಾನ ಶತ್ರುವಾಗಿರುವ ಚೀನಾ ವಿರುದ್ಧದ ಹೋರಾಟದಲ್ಲೂ ಜಪಾನ್ ಭಾರತಕ್ಕೆ ಬೆಂಬಲವಾಗಿ ನಿಂತಿದೆ. ಇದೆಲ್ಲವನ್ನೂ ಅಬೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಹಲವು ವಿಚಾರದಲ್ಲಿ ಜಪಾನ್ ಭಾರತಕ್ಕೆ ಸಹಕಾರ ನೀಡುತ್ತಿದೆ.ತೀವ್ರ ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ ನೀಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಇದರೊಂದಿಗೆ ಜಗತ್ತಿನ ಮೂರನೇ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶದ ನಾಯಕತ್ವ ಸ್ಪರ್ಧೆಗೆ ಚಾಲನೆ ಕೊಟ್ಟಿರುವ ಬೆಳವಣಗೆಗೆ ಕಾರಣವಾದಂತಾಗಿದೆ.

ಪ್ರಧಾನ ಮಂತ್ರಿ ಹುದ್ದೆಯಿಂದ ನಾನು ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿಂಜೋ ತಿಳಿಸಿದ್ದು, ತೀವ್ರ ಅನಾರೋಗ್ಯದಿಂದ (ದೊಡ್ಡ ಕರುಳಿನ ಕ್ಯಾನ್ಸರ್) ಬಳಲುತ್ತಿದ್ದುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.

ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ

ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಮುಂದಿನ ಪ್ರಧಾನಿ ಯಾರು ಎಂಬುದನ್ನು ಆಯ್ಕೆ ಮಾಡುವವರೆಗೆ ಶಿಂಜೋ ಅಬೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ. ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

ಜಪಾನ್ ವಿತ್ತ ಸಚಿವ ಟಾರೊ ಅಸೋ ಮತ್ತು ಜಪಾನ್ ಸರ್ಕಾರದ ವಕ್ತಾರ ಯೋಶಿಹಿಡೆ ಸುಗಾ ಹೆಸರು ಕೇಳಿಬರುತ್ತಿದೆ. ಜಪಾನ್ ರಾಜಕೀಯ ಇತಿಹಾಸದಲ್ಲಿ ಅತೀ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಶಿಂಜೋ ಅಬೆ ಅವರದ್ದಾಗಿದೆ.

ಜಪಾನ್ ಪ್ರಧಾನಿ ಶಿಂಜೊ ಅಬೆ ಅನಾರೋಗ್ಯಕ್ಕೀಡಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೋವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಜಪಾನ್ ದೇಶಗಳ ನಡುವಣ ಬಲವಾದ ಸದೃಢ ಸಂಬಂಧ ಇರುವಂತೆ ಮಾಡುವಲ್ಲಿ ಶಿಂಜೊ ಅಬೆ ಅವರ ದಿಟ್ಟ ನಾಯಕತ್ವ ಹಾಗೂ ವೈಯಕ್ತಿಕ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ಆಪ್ತ ಸ್ನೇಹಿತ ಶಿಂಜೊ ಅಬೆ ಅನಾರೋಗ್ಯಕ್ಕೀಡಾಗಿರುವುದು ನೋವು ತಂದಿದೆ. ಇತ್ತೀಚಿನ ವರ್ಷಗಳಲ್ಲಿ ಅವರ ದಿಟ್ಟ ನಾಯಕತ್ವ ಮತ್ತು ವೈಯಕ್ತಿಕ ಬದ್ಧತೆಯಿಂದ ಉಭಯ ದೇಶಗಳ ನಡುವಣ ಸಂಬಂಧ ಗಟ್ಟಿಯಾಗಿತ್ತು. ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.

ಶಿಂಜೋ ಭಾರತಕ್ಕೆ ಬಂದಿದ್ದು ಯಾವಾಗ?

ಶಿಂಜೋ ಭಾರತಕ್ಕೆ ಬಂದಿದ್ದು ಯಾವಾಗ?

ಶಿಂಜೋ ಅವರು 2006-07ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು, ಸಂಸತ್‌ನಲ್ಲಿ ಭಾಷಣ ಮಾಡಿದ್ದರು. ಜನವರಿ 2014, ಡಿಸೆಂಬರ್ 2015, ಸೆಪ್ಟೆಂಬರ್ 2017ರಲ್ಲಿ ಭಾರತಕ್ಕೆ ಬಂದಿದ್ದರು. ಅತಿ ಹೆಚ್ಚು ಬಾರಿ ಭಾರತಕ್ಕೆ ಭೇಟಿ ನೀಡಿದ ಜಪಾನ್ ಪ್ರಧಾನಿ ಶಿಂಜೋ ಆಗಿದ್ದರು.

2014ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದರು

2014ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದರು

ಮೊದಲ ಬಾರಿಗೆ ಜಪಾನ್‌ನ ಪ್ರಧಾನಿಯೊಬ್ಬರು 2014ರಲ್ಲಿ ಭಾರತದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದರು.

ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆಕೊರೊನಾ ವೈರಸ್ ಸಂಕಷ್ಟದ ನಡುವೆಯೇ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ

ಭಾರತ-ಜಪಾನ್ ಜಾಗತಿಕ ಸಹಭಾಗಿತ್ವ

ಭಾರತ-ಜಪಾನ್ ಜಾಗತಿಕ ಸಹಭಾಗಿತ್ವ

ಜಪಾನ್ ಮತ್ತು ಭಾರತದ ನಡುವಿನ ಜಾಗತಿಕ ಸಹಭಾಗಿತ್ವಕ್ಕೆ 2001ರಲ್ಲಿ ಅಡಿಪಾಯ ಹಾಕಲಾಯಿತು. ಮತ್ತು 2005ರಲ್ಲಿ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಒಪ್ಪಿಗೆ ನೀಡಲಾಯಿತು. 2012ರಿಂದ ಭಾರತ ಮತ್ತು ಜಪಾನ್ ಸಂಬಂಧ ಗಟ್ಟಿಗೊಂಡಿತು. 2015 ರಲ್ಲಿ ಅಬೆ ಅವರ ಭೇಟಿಯ ಸಮಯದಲ್ಲಿ, ಭಾರತವು 2022 ರಲ್ಲಿ ಪ್ರಾರಂಭವಾಗಲಿರುವ ಶಿಂಕಾನ್ಸೆನ್ ವ್ಯವಸ್ಥೆಯನ್ನು (ಬುಲೆಟ್ ರೈಲು) ಪರಿಚಯಿಸಲು ನಿರ್ಧರಿಸಿತು. ಅಬೆ ಅವರ ನಾಯಕತ್ವದಲ್ಲಿ, ಭಾರತ ಮತ್ತು ಜಪಾನ್ ಸಹ ಆಕ್ಟ್ ಈಸ್ಟ್ ಫೋರಂ ಅನ್ನು ರಚಿಸಿದವು ಮತ್ತು ಈಶಾನ್ಯದಲ್ಲಿ ಯೋಜನೆಗಳಲ್ಲಿ ತೊಡಗಿಕೊಂಡಿವೆ, ಇದನ್ನು ಚೀನಾ ಸೂಕ್ಷ್ಮವಾಗಿ ಗಮನಿಸಿದೆ . ಬೀಜಿಂಗ್ ಪ್ರಭಾವವನ್ನು ಎದುರಿಸಲು ಉಭಯ ದೇಶಗಳು ಮಾಲ್ಡೀವ್ಸ್ ಮತ್ತು ಶ್ರೀಲಂಕಾದಲ್ಲಿ ಜಂಟಿ ಯೋಜನೆಗಳನ್ನು ಯೋಜಿಸಿವೆ.

2007ರಲ್ಲಿ ಪ್ರಧಾನಿಯಾಗಿ ಮೊದಲ ಭೇಟಿ

2007ರಲ್ಲಿ ಪ್ರಧಾನಿಯಾಗಿ ಮೊದಲ ಭೇಟಿ

2007ರಲ್ಲಿ ಶಿಂಜೋ ಅವರು ಪ್ರಧಾನಿಯಾಗಿ ಭಾರತಕ್ಕೆ ಮೊದಲ ಭೇಟಿ ನೀಡಿದರು. ಅವರು ಎರಡನೇ ಅವಧಿಯಲ್ಲಿ ಭಾರತ ಹಾಗೂ ಜಪಾನ್ ಸಂಬಂಧ ವೃದ್ಧಿಗೆ ಶ್ರಮಿಸಿದರು. 2008ರಿಂದ ಭದ್ರತಾ ಒಪ್ಪಂದವು ಜಾರಿಯಲ್ಲಿದೆ. 2019ರಲ್ಲಿ ನವದೆಹಲಿಯಲ್ಲಿ ಮೊದಲ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ಸಭೆ ನಡಯಿತು. ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ವರ್ಗಾವಣೆ ಮಾಡುವ ಒಪ್ಪಂದಕ್ಕೆ 2015ರಲ್ಲಿ ಸಹಿ ಹಾಕಲಾಯಿತು.

English summary
Japan Prime minister Shinzo Abe gave new shape to Japan’s India ties,He announced on Friday that he would step down as a chronic illness has resurfaced. Abe, 65, was due to be in office till September 2021. He will stay on until his party chooses a successor, and will remain an MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X