ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿಗೆ ಗೋಧಿ ರಫ್ತು ಮಾಡಲ್ಲ ಎಂದಿದ್ದೇಕೆ ಭಾರತ; ಅಸಲಿ ಗುಟ್ಟು ರಟ್ಟು?

|
Google Oneindia Kannada News

ನವದೆಹಲಿ, ಮೇ 16: ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಆಕಾಶಕ್ಕೆ ಜಿಗಿಯುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಬೆೆಲೆಯು ಸಾಮಾನ್ಯರ ಜೇಬು ಸುಡುತ್ತಿದೆ. ಇದರ ಮಧ್ಯೆ ತಕ್ಷಣದಿಂದಲೇ ಭಾರತದಿಂದ ಗೋಧಿ ರಫ್ತು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಶನಿವಾರವೇ ಆದೇಶ ಹೊರಡಿಸಿದೆ.

ಜಗತ್ತಿನಲ್ಲಿ ಬೇರೆ ರಾಷ್ಟ್ರಗಳಿಗೆ ಅತಿಹೆಚ್ಚು ಗೋಧಿ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಆದರೆ ಇಂದು ಆಹಾರ ಭದ್ರತೆಯ ಕೊರತೆ ಸೃಷ್ಟಿಯಾಗಿರುವುದರ ಹಿನ್ನಲೆ ವಿದೇಶಗಳಿಗೆ ಗೋಧಿ ರಫ್ತು ಮಾಡುವುದನ್ನು ರದ್ದುಗೊಳಿಸಲಾಗಿದೆ.

ತಟ್ಟಿದ ಬೆಲೆ ಏರಿಕೆ ಬಿಸಿ: ಭಾರತದಿಂದ ಗೋಧಿ ರಫ್ತಿಗೆ ತಕ್ಷಣದಿಂದಲೇ ನಿರ್ಬಂಧ ತಟ್ಟಿದ ಬೆಲೆ ಏರಿಕೆ ಬಿಸಿ: ಭಾರತದಿಂದ ಗೋಧಿ ರಫ್ತಿಗೆ ತಕ್ಷಣದಿಂದಲೇ ನಿರ್ಬಂಧ

ಭಾರತದಲ್ಲಿ ಗೋಧಿ ಬೆಲೆ ಏರಿಕೆ ಹಿಂದಿನ ಕಾರಣವೇನು?. ಗೋಧಿ ರಫ್ತಿನ ನಿರ್ಬಂಧ ವಿಧಿಸುವುದರ ಹಿಂದಿನ ಗುಟ್ಟು ಏನು?. ಸಾಮಾನ್ಯರ ಪಾಲಿಗೆ ದುಬಾರಿ ಆಗಿರುವುದು ಹೇಗೆ ಗೋಧಿ?. ದೇಶದಲ್ಲಿ ಪ್ರಸ್ತುತ ಗೋಧಿ ಬೆಲೆ ಎಷ್ಟಿದೆ?. ಗೋಧಿ ರಫ್ತು ನಿರ್ಬಂಧದಿಂದ ಆಗುವ ಪರಿಣಾಮಗಳೇನು? ಎನ್ನುವುದರ ಕುರಿತು ಒಂದು ವಿವರಣಾತ್ಮಕ ವರದಿ ಇಲ್ಲಿದೆ ಓದಿ.

ಭಾರತದಲ್ಲಿ ಹೊಸ ದಾಖಲೆ ಬರೆದ ಗೋಧಿ ದರ

ಭಾರತದಲ್ಲಿ ಹೊಸ ದಾಖಲೆ ಬರೆದ ಗೋಧಿ ದರ

ದೇಶದಲ್ಲಿ ಗೋಧಿ ಬೆಲೆ 12 ವರ್ಷಗಳಲ್ಲಿ ಅತಿ ಹೆಚ್ಚಿನ ದರವನ್ನು ದಾಖಲಿಸಿತ್ತು. ಆ ಮೂಲಕ ಭಾರತದಲ್ಲಿ ಗೋಧಿ ದರ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಏಪ್ರಿಲ್ ತಿಂಗಳಿನಲ್ಲಿ ಒಂದು ಕೆಜಿ ಗೋಧಿ ಬೆಲೆಯು 32.38 ರೂಪಾಯಿ ಆಗಿತ್ತು. ಈ ವರ್ಷದ ಆರಂಭದಲ್ಲಿ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯು ಶೇ.40ಕ್ಕಿಂತ ಹೆಚ್ಚಾಗಿದೆ. ಏಕೆಂದರೆ ಯುದ್ಧಕ್ಕೂ ಪೂರ್ವದಲ್ಲಿ ಜಗತ್ತಿಗೆ ಮೂರರಲ್ಲಿ ಒಂದು ಭಾಗದಷ್ಟು ಗೋಧಿ ಮತ್ತು ಬಾರ್ಲಿಯನ್ನು ಇದೇ ರಷ್ಯಾ ಹಾಗೂ ಉಕ್ರೇನ್ ನೆಲದಿಂದ ರಫ್ತು ಮಾಡಲಾಗುತ್ತಿತ್ತು. ಆದರೆ ಫೆಬ್ರವರಿ 24ರಂದು ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿನ ನಂತರದಲ್ಲಿ ವಾಸ್ತವದ ಚಿತ್ರಣವೇ ಬದಲಾಗಿದೆ.

ಭಾರತವು ಗೋಧಿ ರಫ್ತಿಗೆ ನಿರ್ಬಂಧ ವಿಧಿಸಿದ್ದು ಏಕೆ?

ಭಾರತವು ಗೋಧಿ ರಫ್ತಿಗೆ ನಿರ್ಬಂಧ ವಿಧಿಸಿದ್ದು ಏಕೆ?

ಭಾರತದಲ್ಲಿ ಈ ವರ್ಷ ಗೋಧಿ ಬೆಳೆಯ ಉತ್ಪಾದನೆ ತೀರಾ ಕಡಿಮೆಯಾಗಿದೆ. ಇನ್ನೊಂದು ಕಡೆಯಲ್ಲಿ ದುರ್ಬಲ ರಾಷ್ಟ್ರಗಳ ಆಹಾರ ಭದ್ರತೆಯು ಅಪಾಯದಲ್ಲಿದೆ. ಇದೇ ವರ್ಷ ಭಾರತದಲ್ಲಿ ಉರಿಯುತ್ತಿರುವ ಬಿಸಿಗಾಳಿಯು ದೇಶದಲ್ಲಿ ಗೋಧಿ ಬೆಳೆಯ ಉತ್ಪಾದನೆಯನ್ನು ಮೊಟಕುಗೊಳಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಭಾರತವು ಸ್ವಲ್ಪ ಮಟ್ಟಿಗೆ ಗೋಧಿ ಕೊರತೆಯನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜಗತ್ತಿಗೆ ಅತಿಹೆಚ್ಚು ಗೋಧಿಯನ್ನು ರಫ್ತು ಮಾಡುವ ಭಾರತವು ಇದೀಗ ಸ್ವದೇಶದಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ. ಏಕೆಂದರೆ ಈಗಾಗಲೇ ಗೋಧಿ ಬೆಲೆಯು 12 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಭಾರತದಲ್ಲಿ 1 ಟನ್ ಗೋಧಿ ಬೆಲೆ 25,000ಕ್ಕೂ ಅಧಿಕ

ಭಾರತದಲ್ಲಿ 1 ಟನ್ ಗೋಧಿ ಬೆಲೆ 25,000ಕ್ಕೂ ಅಧಿಕ

ಕಳೆದ ಏಪ್ರಿಲ್‌ನಲ್ಲಿ ಭಾರತವು ದಾಖಲೆಯ 1.4 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ. ಮೇ ತಿಂಗಳಲ್ಲಿ ಸುಮಾರು 1.5 ಮಿಲಿಯನ್ ಟನ್‌ಗಳನ್ನು ರಫ್ತು ಮಾಡಲು ಈಗಾಗಲೇ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರ ಮಧ್ಯೆ ಗೋಧಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಟನ್‌ಗೆ 25,000 ರೂ.ಗಳನ್ನು ಮುಟ್ಟಿದೆ, ಇದು ಸರ್ಕಾರದ ಕನಿಷ್ಠ ಬೆಂಬಲ ಬೆಲೆ 20,150 ರೂಪಾಯಿಗಿಂತ ಅಧಿಕವಾಗಿದೆ.

ದೇಶದಿಂದ ಗೋಧಿ ರಫ್ತು ನಿಷೇಧವು ಶಾಶ್ವತವೇ?

ದೇಶದಿಂದ ಗೋಧಿ ರಫ್ತು ನಿಷೇಧವು ಶಾಶ್ವತವೇ?

ಕಳೆದ ಮೇ 13, 2022ರಂದು ಭಾರತದ ವಿದೇಶಿ ವ್ಯಾಪಾರ ನಿರ್ದೇಶನಾಲಯವು ವಿದೇಶಗಳಿಗೆ ಗೋಧಿಯನ್ನು ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಘೋಷಣೆ ಹೊರಡಿಸಿತು. ಆದರೆ ಈ ಬಾರಿ ಗೋಧಿ ರಫ್ತು ನಿರ್ಬಂಧವು ಶಾಶ್ವತವಾಗಿ ಇರುವುದಿಲ್ಲ. ಭಾರತದಲ್ಲಿ ಗೋಧಿ ಉತ್ಪಾದನೆಯು ಪಾತಾಳಕ್ಕೆ ಕುಸಿಯುವಷ್ಟೇನೂ ಕಡಿಮೆಯಾಗಿಲ್ಲ. ಆದರೆ ಏರಿಕೆ ಆಗುತ್ತಿರುವ ಬೆಲೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ವಿದೇಶಗಳಿಗೆ ಗೋಧಿ ಮಾರಾಟವನ್ನು ನಿರ್ಬಂಧಿಸಲಾಗುತ್ತಿದೆ. ಗೋಧಿ ರಫ್ತು ನಿಷೇಧವು ಶಾಶ್ವತವಾಗಿರುವುದಿಲ್ಲ. ಇದನ್ನು ಪರಿಷ್ಕರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಿಂದ ಗೋಧಿ ರಫ್ತು ರದ್ದಿಗೆ ಜಗತ್ತಿನ ಪ್ರತಿಕ್ರಿಯೆ ಹೇಗಿದೆ?

ದೇಶದಿಂದ ಗೋಧಿ ರಫ್ತು ರದ್ದಿಗೆ ಜಗತ್ತಿನ ಪ್ರತಿಕ್ರಿಯೆ ಹೇಗಿದೆ?

ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಕಪ್ಪು ಸಮುದ್ರದ ಪ್ರದೇಶದಿಂದ ರಫ್ತು ಕುಸಿತಗೊಂಡ ನಂತರದಲ್ಲಿ ಜಾಗತಿಕ ಮಟ್ಟದ ಖರೀದಿದಾರರು ಪೂರೈಕೆಗಾಗಿ ಭಾರತವನ್ನು ನೆಚ್ಚಿಕೊಂಡರು. ಜಿ7 ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಕೃಷಿ ಮಂತ್ರಿಗಳು ಶನಿವಾರ ಭಾರತದ ನಿರ್ಧಾರವನ್ನು ತಕ್ಷಣವೇ ಖಂಡಿಸಿದರು. "ಪ್ರತಿಯೊಬ್ಬರೂ ರಫ್ತು ನಿರ್ಬಂಧಗಳನ್ನು ವಿಧಿಸಲು ಅಥವಾ ಮಾರುಕಟ್ಟೆಗಳನ್ನು ಮುಚ್ಚಲು ಪ್ರಾರಂಭಿಸಿದರೆ, ಅದು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತದೆ," ಎಂದು ಜರ್ಮನ್ ಕೃಷಿ ಸಚಿವರು ಹೇಳಿದರು.

ಭಾರತದ ನಿಷೇಧವು ಜಾಗತಿಕ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಇದರಿಂದ ಏಷ್ಯಾ ಮತ್ತು ಆಫ್ರಿಕಾದ ಬಡ ಗ್ರಾಹಕರನ್ನು ವಿಶೇಷವಾಗಿ ತೀವ್ರ ಪೆಟ್ಟು ಕೊಡಬಹುದು. ರಷ್ಯಾದ ಆಕ್ರಮಣದ ಮೊದಲು, ಉಕ್ರೇನ್ ತನ್ನ ಬಂದರುಗಳ ಮೂಲಕ ತಿಂಗಳಿಗೆ 4.5 ಮಿಲಿಯನ್ ಟನ್ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿತ್ತಿದ್ದು, ವಿಶ್ವಕ್ಕೆ ಶೇ.12ರಷ್ಟು ಗೋಧಿಯನ್ನು ರವಾನೆ ಮಾಡುತ್ತಿತ್ತು. ಸುಮಾರು 20 ಮಿಲಿಯನ್ ಟನ್ ಗೋಧಿ ಪ್ರಸ್ತುತ ಉಕ್ರೇನಿಯನ್ ಸಿಲೋಸ್‌ನಲ್ಲಿ ಸಂಗ್ರಹವಾಗಿದ್ದು, ತುರ್ತಾಗಿ ಅದನ್ನು ರಫ್ತು ಮಾಡಬೇಕಾಗಿದೆ ಎಂದು ಜರ್ಮನ್ ಸಚಿವ ಓಜ್ಡೆಮಿರ್ ಹೇಳಿದ್ದಾರೆ. ವಿಶ್ವದಲ್ಲಿ ಅತಿಹೆಚ್ಚು ಗೋಧಿ ಆಮದುದಾರರಲ್ಲಿ ಅಗ್ರಸ್ಥಾನದಲ್ಲಿರುವ ಈಜಿಪ್ಟ್, ತನ್ನ ಸರ್ಕಾರದ ಖರೀದಿಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಭಾನುವಾರ ಹೇಳಿದೆ. ಭಾರತದಿಂದ 5,00,000 ಟನ್ ಗೋಧಿಯನ್ನು ಖರೀದಿಸಲು ಒಪ್ಪಿಕೊಂಡಿದೆ.

English summary
Why India prohibited exports of Wheat; Reason and Effects behind Central govt Decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X