• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಮೌನಕ್ಕೆ ಸಾವಿರ ಅರ್ಥ: ವ್ಯಂಗ್ಯ, ಅಪಹಾಸ್ಯ, ಲೇವಡಿ...

|
   ಮೋದಿ ಮೌನವಾಗಿರೋದ್ಯಾಕೆ? #MaunModi ಟ್ವಿಟ್ಟರ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ | Oneindia Kannada

   ಗಂಟೆಗಟ್ಟಲೆ ನಿರ್ಗಳವಾಗಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಇದ್ದಕ್ಕಿದ್ದಂತೇ ಮೌನವಾಗಿಬಿಟ್ಟಿದ್ದಾರಾ? ಅಸ್ಖಲಿತ ಮಾತಿನ ಮೋಡಿಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಪಡೆದ ಮೋದಿ ಮೌನವಾಗಿದ್ದು ಯಾಕೆ? ನಿಜಕ್ಕೂ ಮೋದಿ ಮೌನವಾಗಿದ್ದು ಹೌದಾ..? 'ಹೌದು' ಎನ್ನುತ್ತಿದ್ದಾರೆ ಕಾಂಗ್ರೆಸ್ಸಿಗರು, ಮೋದಿ ವಿರೋಧಿಗಳು!

   ಅಷ್ಟಕ್ಕೂ ಮೋದಿ ಮೌನವಾಗೋದು ಯಾವಾಗ..? ಲಲಿತ್ ಮೋದಿ, ನೀರವ್ ಮೋದಿ, ರಾಫೆಲ್ ಒಪ್ಪಂದ, ವಿಜಯ ಮಲ್ಯ ಎಂಬಿತ್ಯಾದಿ ಪ್ರಶ್ನೆ ಕೇಳಿದರೆ ಸೈಲೆಂಟ್ ಆಗ್ಬಿಡ್ತಾರಂತೆ ನಮ್ಮ ಪಿಎಂ! ಹಾಗಂತ ಟ್ವಿಟ್ಟರ್ ನಲ್ಲಿ ಮೋದಿ ವಿರೋಧಿಗಳು ವ್ಯಂಗ್ಯವಾಡುತ್ತಿದ್ದಾರೆ.

   ಕಮಿಷನ್ ಸರ್ಕಾರ ಎಂದ ಮೋದಿಗೆ ಕಾರ್ಟೂನ್ ತೋರಿಸಿದ ಸಿದ್ದರಾಮಯ್ಯ

   ಮೌನಮೋದಿ ಎಂಬ ಹ್ಯಾಶ್ ಟ್ಯಾಗ್ ವೊಂದು ಟ್ವಿಟ್ಟರ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ, ಮೋದಿ ಬಗೆಗಿನ ವ್ಯಂಗ್ಯ, ಅಪಹಾಸ್ಯ, ಲೇವಡಿಗಳನ್ನೆಲ್ಲ ಈ ಹ್ಯಾಶ್ ಟ್ಯಾಗ್ ಹೊತ್ತು ಸಾಗುತ್ತಿದೆ!

   56 ಇಂಚಿನ ಎದೆಯ ಮೋದಿ ಮೌನವಾಗಿದ್ದೇಕೆ?

   ಅಪನಗದೀಕರಣದ ದಿನವೇ ನೀರವ್ ಮೋದಿ 90 ಕೋಟಿ ರೂ.ಗಳನ್ನು ಹೊಸ ನೋಟಿಗೆ ಪರಿವರ್ತನೆ ಮಾಡಿಕೊಂಡರು. ನಂತರ ಡಾವೋಸ್ ನಲ್ಲಿ ಮೋದಿಯವರೊಂದಿಗೆ ಪೋಸ್ ಕೊಟ್ಟರು. ನಾವು ಈಗಲೂ ಈ 56 ಇಂಚಿನ ಎದೆಯ ಮೋದಿ ನಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ನಂಬಬೇಕಾ? ಎಂದು ಪ್ರಶ್ನಿಸಿದ್ದಾರೆ ಮಾಧುರಿ ದಾಂತಾಲಾ.

   ದೇಶದ ಗಮನ ಬೇರೆಡೆ ಹರಿಸಲು ಮೌನವಾಗಿದ್ದಾರೆ!

   ಹಗರಣದ ಮೇಲೆ ಹಗರಣ ಬಯಲಿಗೆ ಬರುತ್ತಿದ್ದರೂ ನರೇಮದ್ರ ಮೋದಿ ಮೌನವಾಗಿರುವುದೇಕೆ? ಅವರು ಮೌನವಾಗಿರುವುದರಿಂದ ದೇಶದ ಗಮನ ಬೇರೆಡೆಗೆ ಸೆಳೆಯಬಹುದು ಎಂದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದೆ ಕಾಂಗ್ರೆಸ್ ಪಕ್ಷ.

   ಮ್ಯೂಟ್ ಮೋಡ್ ನಲ್ಲಿದ್ದಾರೆ ಮೋದಿ!

   ಭಾರತದ ಅತ್ಯಂತ ದೊಡ್ಡ ವಂಚನೆ ಪ್ರಕರಣ ಈಗ ಬೆಳಕಿಗೆ ಬಂದಿದೆ. ಆದರೆ ಪ್ರಧಾನಿ ಮೋದಿ ಮಾತ್ರ ಅಗತ್ಯವಿಲ್ಲದ ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಷಯಗಳ ಬಗ್ಗೆ ಪ್ರಶ್ನಿಸಿದರೆ ಮ್ಯೂಟ್ ಮೋಡ್ ನಲ್ಲಿರುತ್ತಾರೆ ಎಂದು ದೇಸೀ ಹಿಂಗ್ಲಿಶ್ ಖಾತೆಯಿಂದ ಕಿಚಾಯಿಸಲಾಗಿದೆ.

   ಚೌಕಿದಾರ ಮೌನವಾಗಿರುವುದೇಕೆ?

   ನೀವ್ಯಾಕೆ ಜಿಎಸ್ ಪಿಸಿ ಹಗರಣದ ಬಗ್ಗೆ ಮೌನವಾಗಿದ್ದೀರಾ? ನೀವ್ಯಾಕೆ ಜಯ್ ಶಾ ಹಗರಣದ ಬಗ್ಗೆ ಮೌನವಾಗಿದ್ದೀರಾ? ನೀವ್ಯಾಕೆ ಲಲಿತ್ ಮೋದಿ ಹಗರಣದ ಬಗ್ಗೆ ಮೌನವಾಗಿದ್ದೀರಾ? ನೀವ್ಯಾಕೆ ವಿಜಯ್ ಮಲ್ಯಾ ಹಗರಣದ ಬಗ್ಗೆ ಮೌನವಾಗಿದ್ದೀರಾ? ನೀವ್ಯಾಗೆ ನ್ಯಾ. ಲೋಯಾ ಹತ್ಯೆ ಕುರಿತು ಮೌನವಾಗಿದ್ದೀರಾ? ನೀವ್ಯಾಕೆ ನೀರವ್ ಮೋದಿ ಹಗರಣದ ಬಗ್ಗೆ ಮೌನವಾಗಿದ್ದೀರಾ?

   ಅಧಿಕಾರಕ್ಕೆ ಬರುವ ಮೊದಲು ನಾನು ಎಲ್ಲರ ಹಣವನ್ನೂ ಕಾಪಾಡುವ ಚೌಕಿದಾರ ಎಂದಿದ್ದಿರಿ. ಚೌಕಿದಾರ ಈಗ ಮೌನವಾಗಿರುವುದೇಕೆ? ಎಂದು 'ಬಿ ಇಂಡಿಯಾ' ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Congress and other anti Modi forces blame Narendra Modi's silence on Nirav Modi, Lalit Modi, Vijaya Malya and other scams. Many people blaming PM Modi through MaunModi hashtag on twitter. Couple of twitters here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more