ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಅಧಿವೇಶನದಲ್ಲೇ ಮದ್ಯದ ಬಾಟಲಿ ಎತ್ತಿ ಹಿಡಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ!

|
Google Oneindia Kannada News

ನವದೆಹಲಿ, ಡಿಸೆಂಬರ್ 6: ಸಂಸತ್ ಚಳಿಗಾಲ ಅಧಿವೇಶನದ ಆರನೇ ದಿನದ ಕಲಾಪವು ಸಾಕಷ್ಟು ಕದನ ಕೌತಕಗಳಿಗೆ ಸಾಕ್ಷಿಯಾಯಿತು. ಸೋಮವಾರ ನಡೆದ ಅಧಿವೇಶನದಲ್ಲೇ ದೆಹಲಿ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮದ್ಯದ ಬಾಟಲಿಯನ್ನು ಎತ್ತಿ ತೋರಿಸಿದರು. ಆ ಮೂಲಕ ದೆಹಲಿ ಸರ್ಕಾರವು ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುವ ಆರೋಪ ಮಾಡಿದರು.

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ 25,000 ಜನರು ಸೋಂಕಿನಿಂದ ಮೃತಪಟ್ಟಿದ್ದರೆ, ಅಂದು ದೆಹಲಿ ಸರ್ಕಾರವು ಕೇಂದ್ರಾಡಳಿತ ಪ್ರದೇಶದಲ್ಲಿ ಮದ್ಯದ ಬಳಕೆ ಹೆಚ್ಚಿಸುವ ಉದ್ದೇಶದಿಂದ ಹೊಸ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ನಿರತವಾಗಿತ್ತು," ಎಂದು ಪರ್ವೇಶ ವರ್ಮಾ ದೂಷಿಸಿದ್ದಾರೆ.

Winter Session Day 6 Roundup:ಕಲಾಪದ ಪ್ರಮುಖಾಂಶಗಳುWinter Session Day 6 Roundup:ಕಲಾಪದ ಪ್ರಮುಖಾಂಶಗಳು

ರಾಷ್ಟ್ರ ರಾಜಧಾನಿ ನವದೆಹಲಿಯ ಹಲವೆಡೆಗಳಲ್ಲಿ ಒಟ್ಟು 824 ಹೊಸ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಜನರ ವಸತಿ ಪ್ರದೇಶಗಳು, ಕಾಲೋನಿಗಳು, ಗ್ರಾಮಗಳು ಹಾಗೂ ಹಲವು ಪ್ರಮುಖ ವಲಯಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುತ್ತಿದ್ದಾರೆ ಎಂದರು.

Why Delhi BJP MP Parvesh Sahib Singh Verma Showed Up Liquor Bottle at Parliament

ಮಹಿಳೆಯರಿಗೆ ವಿಶೇಷ ರಿಯಾಯತಿ!:

ನವದೆಹಲಿಯಲ್ಲಿ ಮಧ್ಯರಾತ್ರಿ 3 ಗಂಟೆಯವರೆಗೆ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಲ್ಲದೇ ಮಧ್ಯರಾತ್ರಿ 3 ಗಂಟೆವರೆಗೂ ಮಹಿಳೆಯರು ಬಾರ್‌ಗಳಲ್ಲಿ ಕುಳಿತು ಕುಡಿದರೆ ರಿಯಾಯಿತಿ ನೀಡಲಾಗುತ್ತಿದೆ. ಮದ್ಯ ಸೇವನೆ ವಯಸ್ಸಿನ ಮಿತಿಯನ್ನು 25 ರಿಂದ 21ಕ್ಕೆ ಇಳಿಸಲಾಗಿದೆ,'' ಎಂದು ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಆರೋಪಿಸಿದರು.

ಗರಿಷ್ಠ ಆದಾಯ ಗಳಿಕೆ ಉದ್ದೇಶ:

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಪ್ರಚಾರಕ್ಕಾಗಿ ಗರಿಷ್ಠ ಆದಾಯವನ್ನು ಗಳಿಸುವ ಉದ್ದೇಶವನ್ನು ಹೊಂದಿದ್ದಾರೆ. 2022ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅವರು, ಮದ್ಯಪಾನದ ಸಂಸ್ಕೃತಿಯನ್ನು ಅಂತ್ಯಗೊಳಿಸಲಾಗುವುದು ಎಂದು ಪ್ರಚಾರ ಮಾಡುತ್ತಾರೆ. ಆದರೆ ನವದೆಹಲಿಯಲ್ಲಿ ಅವರದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ, ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಮದ್ಯ ಸೇವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಅಬಕಾರಿ ನೀತಿಯನ್ನು ರೂಪಿಸಲಾಗಿದೆ," ಎಂದು ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಹೇಳಿದ್ದಾರೆ.

ಸರ್ಕಾರದ ಹೊಸ ಅಬಕಾರಿ ನೀತಿ:

ನವದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಜಾರಿಗೊಳಿಸಿರುವ ಹೊಸ ಅಬಕಾರಿ ನೀತಿಯ ಪ್ರಕಾರ ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಖಾಸಗಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು, ಆದರೆ ಈಗ ಮತ್ತೆ ಮದ್ಯದ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ಅಬಕಾರಿ ಇಲಾಖೆಯ ದಾಖಲೆಯ ಪ್ರಕಾರ, ನಗರದಲ್ಲಿ ಅನುಮೋದಿತ ಮಾರುಕಟ್ಟೆಗಳ ರೀತಿ ಪ್ರದೇಶಗಳಲ್ಲಿ ಮದ್ಯದ ಮಾರಾಟ ಮಳಿಗೆಗಳನ್ನು ತೆರೆಯಲು ದೆಹಲಿ ಸರ್ಕಾರ ನಿರ್ಧರಿಸಿದೆ. ಈ ಸೂಪರ್-ಪ್ರೀಮಿಯಂ ಚಿಲ್ಲರೆ ಮಾರಾಟದಲ್ಲೂ ಮದ್ಯದ ರುಚಿಸುವಂತಹ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರ ಹೊರತಾಗಿ ಸೋಮವಾರ ಹೊತ್ತಿಗೆ ದೆಹಲಿಯಲ್ಲಿ ಬಹುಪಾಲು ಖಾಸಗಿ ಮದ್ಯದ ಅಂಗಡಿಗಳನ್ನು ತೆಗೆಯುವುದಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಸರ್ಕಾರದ ಹೊಸ ನೀತಿ ಪ್ರಕಾರ, ಕನಿಷ್ಠ 500 ಚದರ ಅಡಿ ವಿಸ್ತೀರ್ಣದಲ್ಲಿ ವಾಕ್-ಇನ್ ಸೌಲಭ್ಯದೊಂದಿಗೆ ಐಷಾರಾಮಿ ಮತ್ತು ಸೊಗಸಾದ ಮದ್ಯದ ಅಂಗಡಿಗಳನ್ನು ನಿರ್ಮಿಸುವುದು. ನಗರದ ಮೂಲೆ ಮೂಲೆಗಳಲ್ಲಿ ಇರುವ ಮದ್ಯದ ಅಂಗಡಿಗಳಿಗೆ ಐಷಾರಾಮಿ ಲುಕ್ ನೀಡುವ ಮೂಲಕ ಗ್ರಾಹಕರಿಗೆ ಕ್ರಾಂತಿಕಾರಕ ಅನುಭವವನ್ನು ನೀಡುವ ಗುರಿಯನ್ನು ಹೊಂದಲಾಗಿದೆ.

ಸರ್ಕಾರಿ ಅಧಿಕಾರಿಗಳ ಪ್ರಕಾರ, ಸುಮಾರು 350 ಅಂಗಡಿಗಳಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲಾಗಿದ್ದು, 10 ಸಗಟು ಪರವಾನಗಿದಾರರೊಂದಿಗೆ 200 ಕ್ಕೂ ಹೆಚ್ಚು ಬ್ರಾಂಡ್‌ಗಳ ನೋಂದಣಿ ಮಾಡಲಾಗಿದೆ. ಸಗಟು ಪರವಾನಗಿದಾರರು ವಿವಿಧ ಬ್ರಾಂಡ್‌ಗಳ 9 ಲಕ್ಷ ಲೀಟರ್ ಮದ್ಯವನ್ನು ಖರೀದಿಸಿದ್ದಾರೆ. ಹೊಸ ಅಬಕಾರಿ ನೀತಿಯು ಇಡೀ ದೆಹಲಿಯಲ್ಲಿ ಐದು ಸೂಪರ್-ಪ್ರೀಮಿಯಂ ಚಿಲ್ಲರೆ ಅಂಗಡಿಗಳನ್ನು ತೆರೆಯಲು ಅನುಮತಿಸುತ್ತದೆ, ಪ್ರತಿಯೊಂದೂ 2500 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುತ್ತದೆ.

Recommended Video

ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕ್ ಅನುಮತಿ | Oneindia Kannada

English summary
Why Delhi BJP MP Parvesh Sahib Singh Verma Showed Up Liquor Bottle at Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X