ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ವಿಳಂಬ ಯಾಕೆ? ಇಲ್ಲಿದೆ ಕಾರಣ

|
Google Oneindia Kannada News

ನವದೆಹಲಿ, ಮಾರ್ಚ್ 07: ಚುನಾವಣಾ ಆಯೋಗವು ಮಾರ್ಚ್ 05 ರಂದು ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಬಹುದು ಎಂಬ ನಿರೀಕ್ಶಃಎ ಸುಳ್ಳಾಗಿದೆ. ಆದರೆ ದಿನಾಂಕ ಘೋಷಣೆಗೆ ವಿಳಂಬವಾಗುತ್ತಿರುದೇಕೆ ಎಂದು ಸ್ವತಃ ಚುನಾವಣಾ ಆಯೋಗವೇ ಕಾರಣಗಳನ್ನು ನೀಡಿದೆ.

ಇನ್ಮುಂದೆ ಎಟಿಎಂ ವಾಹನಕ್ಕೆ ಗೈಡ್‌ಲೈನ್, ಚುನಾವಣಾ ಆಯೋಗ ಸೂಚನೆಇನ್ಮುಂದೆ ಎಟಿಎಂ ವಾಹನಕ್ಕೆ ಗೈಡ್‌ಲೈನ್, ಚುನಾವಣಾ ಆಯೋಗ ಸೂಚನೆ

'ಚುನಾವಣಾ ದಿನಾಂಕ ಘೋಷಣೆಗೆ ವಿಳಂಬವಾಗುತ್ತಿರುವುದೇಕೆ? ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ಹಿನ್ನೆಲೆಯಲ್ಲಿ ಘೋಷಿಸುತ್ತಿರುವ ವಿವಿಧ ಯೋಜನೆಗಳು ಮತ್ತು ಅವರ ಆಫೀಶಿಯಲ್ ಟೂರ್ ಗಳು ಮುಗಿದ ಮೇಲೆ ದಿನಾಂಕ ಘೋಷಿಸುತ್ತೀರೇ?' ಎಂದು ವಿಪಕ್ಷಗಳು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದವು.

Why delay in lok sabha elections date announcement: election commission explains

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚುನಾವಣಾ ಆಯೋಗ, "ನಾವು ಪ್ರಧಾನಿಯವರ ವೇಳಾಪಟ್ಟಿಗೆ ತಕ್ಕಂತೆ ಕೆಲಸ ಮಾಡುವುದಿಲ್ಲ. ನಮಗೆ ನಮ್ಮದೇ ಆದ ವೇಳಾಪಟ್ಟಿ ಇದೆ" ಎಂದು ಪ್ರತ್ಯುತ್ತರ ನೀಡಿದೆ.

ಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರುಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರು

'ನಾವು ಮಾರ್ಚ್ 5 ಕ್ಕೇ ಚುನಾವಣಾ ದಿನಾಂಕ ಘೋಷಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. 2014 ರ ಚುನಾವಣೆಯ ಸಂದರ್ಭದಲ್ಲಿ ಮಾರ್ಚ್ 5 ಕ್ಕೆ ಚುನಾವಣಾ ದಿನಾಂಕ ಘೋಷಿಸಿದ್ದೆವು. ಅದೇ ಆಧಾರದ ಮೇಲೆ ಈಗಲೂ ದಿನಾಂಕ ಘೋಷಿಸುವಂತೆ ಒತ್ತಾಯಿಸಲಾಗುತ್ತಿದೆ' ಎಂದು ಅದು ಹೇಳಿದೆ.

ಫೆ.23, 24ರಂದು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶಫೆ.23, 24ರಂದು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ

2014 ರ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಮೇ 31 ರ ಒಳಗೆ ಆಗಬೇಕಿತ್ತು. ಆದ್ದರಿಂದ ಆಗ ಮಾರ್ಚ್ 05 ಕ್ಕೆ ವೇಳಾಪಟ್ಟಿ ಘೋಷಿಸಿದ್ದೆವು. ಆದರೆ ಈ ಬಾರಿಯ ಚುನಾವಣೆಯ ಫಲಿತಾಂಶವನ್ನು ಜೂನ್ 3 ರವೊಳಗೆ ಘೋಷಿಸಬೇಕಿದೆ. ಆದ್ದ್ರಿಂದ ಸಮಯವಿದೆ ಎಂದು ಆಯೋಗ ಹೇಳಿದೆ.

"ಹಲವು ರಾಜ್ಯಗಳಲ್ಲಿ ಚುನಾವಣೆಯ ಸಿದ್ಧತೆ ನಡೆಯುತ್ತಿದೆ. ಅವೆಲ್ಲವೂ ಆದ ನಂತರ ಘೋಷಿಸುತ್ತೇವೆ" ಎಂದು ಆಯೋಗ ತಿಳಿಸಿದೆ.

English summary
Many expected that election commission will announce Lok Sabha elections 2019 date in this week. But EC gives reasons why it is delaying to announce the poll date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X