• search

ಕಾಂಗ್ರೆಸ್ ವಿರುದ್ಧ ಕಟು ಟೀಕೆ, ಹಿಂದುಳಿದ ವರ್ಗದ ದಾಳ ಉರುಳಿಸಿದ ಮೋದಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ | Oneindia Kannada

    "ಒಂದು ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಇಲ್ಲದೆ ಹೋಗಿದ್ದರೆ ಸೋಮನಾಥ್ ದೇವಸ್ಥಾನ ಸಾಕಾರವೇ ಆಗುತ್ತಿರಲಿಲ್ಲ. ಈಗ ಕೆಲವರು ಸೋಮನಾಥ ದೇವಾಲಯವನ್ನು ನೆನಪಿಸಿಕೊಳ್ಳುತ್ತಾರೆ. ನಾನು ಅವರನ್ನು ಕೇಳಲು ಬಯಸುತ್ತೀನಿ: ನಿಮ್ಮ ಇತಿಹಾಸವನ್ನು ಮರೆತುಬಿಟ್ಟರಾ? ನಮ್ಮ ಮೊದಲ ಪ್ರಧಾನಮಂತ್ರಿಗಳಿಗೆ ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವ ಆಲೋಚನೆ ಇಷ್ಟವಿರಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಗುಜರಾತ್, ಗೆಲುವು ಯಾರಿಗೆ? ಬಿಜೆಪಿ Vs ಕಾಂಗ್ರೆಸ್: ಒಂದು ಅವಲೋಕನ

    ಗುಜರಾತ್ ನ ಪ್ರಾಚಿಯಲ್ಲಿ ಬುಧವಾರ ವಿಧಾನಸಭಾ ಚುನಾವಣಾ ಪ್ರಚಾರ ಕೈಗೊಂಡ ಅವರು, ಡಾ ಬಾಬು ರಾಜೇಂದ್ರ ಪ್ರಸಾದ್ ಅವರು ಸೋಮನಾಥ್ ದೇವಾಲಯದ ಉದ್ಘಾಟನೆಗೆ ಬಂದಾಗ ನೆಹರೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ದಾರ್ ಪಟೇಲ್ ಅವರು ನರ್ಮದಾ ನದಿ ಬಗ್ಗೆ ಕನಸು ಕಂಡಿದ್ದರು. ಆದರೆ ನಿಮ್ಮ ಕುಟುಂಬ ಆ ಕನಸು ಪೂರ್ತಿಗೊಳಿಸಲು ಬಿಡಲೇ ಇಲ್ಲ ಎಂದರು.

    ರಾಹುಲ್ ಶಾಯರಿಗೆ ವಾಹ್ ವಾಹ್ ಅನ್ನದೆ ವಿಧಿಯಿಲ್ಲ!

    ಕಾಂಗ್ರೆಸ್ ನವರು ಹಿಂದುಳಿದ ಸಮುದಾಯಗಳ ಮತಗಳನ್ನು ಯಾಚಿಸುತ್ತಿದ್ದಾರೆ. ಆದರೆ ಇಷ್ಟು ವರ್ಷಗಳ ಕಾಲ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ ಸಿಗುವುದಕ್ಕೆ ಏಕೆ ಅವಕಾಶ ಮಾಡಿಕೊಟ್ಟಿಲ್ಲ? ಆದರೆ ನಾವು ಅದನ್ನು ಲೋಕಸಭೆಯಲ್ಲಿ ಮಂಡಿಸಿ, ಒಪ್ಪಿಗೆ ನೀಡಿದೆವು. ಆದರೆ ರಾಜ್ಯಸಭೆಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಕಾಂಗ್ರೆಸ್ ಅದಕ್ಕೆ ತಡೆಯೊಡ್ಡಿತು ಎಂದು ಮೋದಿ ಟೀಕಿಸಿದರು.

    ಹಿಂದುಳಿದ ವರ್ಗದ ಆಯೋಗ ರಚಿಸಿಯೇ ಸಿದ್ಧ

    ಹಿಂದುಳಿದ ವರ್ಗದ ಆಯೋಗ ರಚಿಸಿಯೇ ಸಿದ್ಧ

    ನಾನು ನಿಮಗೆ ಭರವಸೆ ನೀಡುತ್ತೇನೆ, ಕಾಂಗ್ರೆಸ್ ಅದೆಷ್ಟೇ ತಡೆಯೊಡ್ಡಿದರೂ ಆ ಪ್ರಯತ್ನಗಳನ್ನು ವಿಫಲಗೊಳಿಸುತ್ತೇನೆ. ಸದ್ಯದಲ್ಲೇ ಸಂಸತ್ ಅಧಿವೇಶನ ನಡೆಯಲಿದೆ. ಆಗ ಮತ್ತೆ ಆ ವಿಚಾರ ಮಂಡಿಸುತ್ತೇವೆ. ಹಿಂದುಳಿದ ವರ್ಗಗಳಿಗೆ ನಾವು ನೀಡಬೇಕಾದ ಬಾಕಿಯನ್ನು ತೀರಿಸಬೇಕಿದೆ ಎಂದು ಅವರು ಹೇಳಿದರು.

    ನಲವತ್ತು ವರ್ಷದಿಂದ ಬಾಕಿಯಿದ್ದ ಏಕ ಶ್ರೇಣಿ ಏಕ ಪಿಂಚಣಿ

    ನಲವತ್ತು ವರ್ಷದಿಂದ ಬಾಕಿಯಿದ್ದ ಏಕ ಶ್ರೇಣಿ ಏಕ ಪಿಂಚಣಿ

    ಕಾಂಗ್ರೆಸ್ ಬಳಿ ಇನ್ನೂ ಒಂದು ವಿಚಾರ ಕೇಳಬೇಕಿದೆ. ಏತಕ್ಕಾಗಿ ನೀವು ನಮ್ಮ ಸೈನ್ಯದ ವಿರುದ್ಧವಾಗಿ ಇದ್ದೀರಿ? ಏಕ ಶ್ರೇಣಿ ಏಕ ಪಿಂಚಣಿ ಬೇಡಿಕೆ ಕಳೆದ ನಲವತ್ತು ವರ್ಷಗಳಿಂದ ಹಾಗೇ ಇತ್ತು. ಈ ಅವಧಿಯಲ್ಲಿ ಬಂದ ಯಾವುದೇ ಕಾಂಗ್ರೆಸ್ ಸರಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅವರು ಟೀಕಿಸಿದರು.

    ಚುನಾವಣೆ ಬಂದಾಗ ಐನೂರು ಕೋಟಿ ಘೋಷಣೆ

    ಚುನಾವಣೆ ಬಂದಾಗ ಐನೂರು ಕೋಟಿ ಘೋಷಣೆ

    ಆದರೆ, ಯಾವಾಗ ಲೋಕಸಭೆ ಚುನಾವಣೆ ಬಂತೋ ಆಗ ಏಕ ಶ್ರೇಣಿ ಏಕ ಪಿಂಚಣಿಗಾಗಿ ಐನೂರು ಕೋಟಿ ರುಪಾಯಿಯನ್ನು ಘೋಷಿಸಿದರು. ನಿಜವಾದ ಅಗತ್ಯ ಅದಕ್ಕಿಂತ ಎಷ್ಟೋ ಪಾಲು ಹೆಚ್ಚಿತ್ತು. ಆದರೆ ದಾರಿ ತಪ್ಪಿಸುವ ಆದೇಶ ಮಾಡಿದರು ಅಷ್ಟೇ ಎಂದು ಹಿಂದಿನ ಯುಪಿಎ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

    ಮಹಿಳೆಯರ ಆಶೀರ್ವಾದ

    ಮಹಿಳೆಯರ ಆಶೀರ್ವಾದ

    ಇದು ನನ್ನ ಚುನಾವಣೆ ಪ್ರಚಾರದ ಎರಡನೇ ದಿನ. ನಾನು ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್ ನಲ್ಲಿ ಸುತ್ತಾಡಿದೆ. ಅಲ್ಲಿನ ಉತ್ಸಾಹ ಸ್ಮರಣೀಯವಾದುದು. ಹಲವು ಮಹಿಳೆಯರು ನಮ್ಮನ್ನು ಆಶೀರ್ವದಿಸುವ ಸಲುವಾಗಿ ಬರುತ್ತಿದ್ದಾರೆ ಎಂದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Congress is seeking votes of OBC communities but they should answer why they did not allow OBC Commission to get Constitutional Status for all these years. We brought in the move, it was passed by Lok Sabha but stalled in the Rajya Sabha, where Congress has majority, PM Modi in Gujarat election campaign at Prachi.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more