ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಮೋದಿಯನ್ನು ಪ್ರಶ್ನಿಸಲು ನಿಮಗೇಕೆ ಆಗಲ್ಲ'' - ಜಗನ್‌, ಪಟ್ನಾಯಕ್‌ಗೆ ಕಾಂಗ್ರೆಸ್‌ ಪ್ರಶ್ನೆ

|
Google Oneindia Kannada News

ನವದೆಹಲಿ, ಜೂ. 04: ಕೇಂದ್ರದ ಲಸಿಕೆ ನೀತಿಯನ್ನು ಟೀಕಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬರೆದಿರುವ ಪತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಅದೇ ಪ್ರಶ್ನೆಯನ್ನು ನೀವು ಕೇಳಲು ಯಾಕೆ ಸಾಧ್ಯವಾಗುತ್ತಿಲ್ಲ'' ಎಂದು ಜಗನ್ ಮೋಹನ್ ರೆಡ್ಡಿ ಮತ್ತು ನವೀನ್ ಪಟ್ನಾಯಕ್ ಇಬ್ಬರಿಗೂ ಪ್ರಶ್ನಿಸಿದ್ದಾರೆ.

ವೈಎಸ್ಆರ್ ಕಾಂಗ್ರೆಸ್‌ನ ಜಗನ್ ಮೋಹನ್ ರೆಡ್ಡಿ ಮತ್ತು ಜನತಾದಳದ ನವೀನ್ ಪಟ್ನಾಯಕ್ ಇಬ್ಬರೂ ಪ್ರತಿಪಕ್ಷ ಮತ್ತು ಆಡಳಿತಾರೂಢ ಬಿಜೆಪಿಯಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ ಎಂದು ಹೇಳಿಕೊಂಡರೂ, ಕೆಲವು ನಿರ್ಣಾಯಕ ವಿಷಯಗಳ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಕಡೆಗೆ ವಾಲುತ್ತಾರೆ.

 ನರೇಂದ್ರ ಮೋದಿಗೆ 'ಗರಿಷ್ಠ ಅಹಂಕಾರ, ಕನಿಷ್ಠ ಅನುಭೂತಿ’: ಜೈರಾಮ್ ರಮೇಶ್ ಕಿಡಿ ನರೇಂದ್ರ ಮೋದಿಗೆ 'ಗರಿಷ್ಠ ಅಹಂಕಾರ, ಕನಿಷ್ಠ ಅನುಭೂತಿ’: ಜೈರಾಮ್ ರಮೇಶ್ ಕಿಡಿ

ಗುರವಾರ ಜಗನ್‌ ಮೋಹನ್‌ ರೆಡ್ಡಿ ಬರೆದ ಪತ್ರದಲ್ಲಿ, ಪರಿಸ್ಥಿತಿ ಕೇಂದ್ರ ಹಾಗೂ ರಾಜ್ಯದ ನಡುವಿನ ಜಗ್ಗಾಟಕ್ಕೆ ಬಂದಿದೆ. ಮುಖ್ಯಮಂತ್ರಿಗಳನ್ನು ಒಂದೇ ರೀತಿ ಮಾತನಾಡುಬೇಕು ಎಂದು ಒತ್ತಾಯಿಸಿದ್ದರು.

Why cant you pose questions to PM, asks Jairam Ramesh to Andhra,Odisha CMs

ಈ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ರಮೆಶ್‌, ನಾನು ಜಗನ್ ಬಳಿ ಕೆಲವು ವಿಚಾರ ಕೇಳಲು ಬಯಸುತ್ತೇನೆ. ಲಸಿಕೆ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯದ ನಡುವಿನ ಕದನವನ್ನಾಗಿ ಮಾಡಿದವರು ಯಾರು? ಕೇಂದ್ರ ಸರ್ಕಾರವು 18-44 ವರ್ಷ ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ನಿಲ್ಲಿಸುತ್ತದೆ ಎಂದು ಏಕಪಕ್ಷೀಯವಾಗಿ ನಿರ್ಧರಿಸಿದವರು ಯಾರು? ಈ ನೀತಿಯನ್ನು ರೂಪಿಸುವ ಮೊದಲು ರಾಜ್ಯಗಳನ್ನು ಏಕೆ ಸಂಪರ್ಕಿಸಿಲ್ಲ? ಈ ಪ್ರಶ್ನೆಗಳನ್ನು ನೀವು ಪ್ರಧಾನಮಂತ್ರಿಯನ್ನು ಏಕೆ ಕೇಳಬಾರದು? ಎಂದು ಪ್ರಶ್ನೆಯ ಮೂಲಕ ಸಲಹೆ ನೀಡಿದ್ದಾರೆ.

ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್ ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್ "ಯು ಟರ್ನ್" ವಾಗ್ಯುದ್ಧ

ಬುಧವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬರೆದಿರುವ ಪತ್ರದಲ್ಲಿ, ಕೇಂದ್ರದ ಪಾತ್ರದ ಬಗ್ಗೆ ಹೆಚ್ಚು ಉಲ್ಲೇಖ ಮಾಡಿದ್ದಾರೆ. "ಭಾರತ ಸರ್ಕಾರವು ಲಸಿಕೆಗಳನ್ನು ಕೇಂದ್ರೀಯವಾಗಿ ಸಂಗ್ರಹಿಸಿ ರಾಜ್ಯಗಳಿಗೆ ವಿತರಿಸುವುದರಿಂದ ನಮಗೆ ನಾಗರಿಕರಿಗೆ ಬೇಗನೆ ಲಸಿಕೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ಎಲ್ಲರೂ ಈ ವಿಷಯದಲ್ಲಿ ಒಮ್ಮತಕ್ಕೆ ಬರಬೇಕು" ಎಂದು ಸಲಹೆ ನೀಡಿದ್ದರು. ಹಾಗೆಯೇ ತಾನು ಮೋದಿಯವರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರಕ್ಕಿಂತ ಭಿನ್ನವಾಗಿರುವ ಪ್ರಧಾನಿ ಮೋದಿಗೆ ಬರೆದಿರುವ ಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ.

ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸಾರ್ವಜನಿಕವಾಗಿ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, "ಒಡಿಶಾ ಮುಖ್ಯಮಂತ್ರಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಒಳ್ಳೆಯ ವಿಚಾರ. ಆದರೆ ಅವರು ಪಿಎಂಗೆ ಏಕೆ ಪತ್ರ ಬರೆದು, ಮನವೊಲಿಸಲು ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕಳೆದ 7 ವರ್ಷಗಳಿಂದ ಸಂಸತ್ತಿನಲ್ಲಿ ಬಿಜೆಡಿ ಯಾವಾಗಲೂ ಬಿಜೆಪಿಯನ್ನು ಬೆಂಬಲಿಸಿದೆ. ಕೇಂದ್ರ ಸರ್ಕಾರದಿಂದ ಲಸಿಕೆಗಳನ್ನು ಖರೀದಿಸಲು ಹಲವಾರು ಸಮಾನ ಮನಸ್ಕ ಪಕ್ಷಗಳು ಈಗಾಗಲೇ ಪ್ರಧಾನ ಮಂತ್ರಿಗೆ ಪತ್ರ ಬರೆದಿವೆ ಎಂದು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Why cant you pose questions to Prime minister Modi asks Congress Senior leader Jairam Ramesh to Andhra Pradesh Chief Minister Jagan Mohan Reddy and Odisha Chief Minister Naveen Patnaik,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X