ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ನಿಯನ್ನೂ ಮಾಧುರಿ, ಶ್ರೀದೇವಿಯವರಂತೆ ನೋಡಿ: ಹಾರ್ದಿಕ್ ಪಟೇಲ್!

|
Google Oneindia Kannada News

ಇಂದೋರ್, ಜೂನ್ 11: "ವಯಸ್ಕ ಚಿತ್ರಗಳ ಮಾಜಿ ನಟಿ ಸನ್ನಿ ಲಿಯೋನ್ ಅವರನ್ನು ನಾವ್ಯಾಕೆ ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್ ರನ್ನು ನೋದಿದಂತೆ ನೋಡುತ್ತಿಲ್ಲ?" ಎಂದು ಕೇಳುವ ಮೂಲಕ ಪಾತೀದಾರ್ ಮುಖಂಡ ಹಾರ್ದಿಕ್ ಪಟೇಲ್ ಹೊಸ ವಿವಾದಕ್ಕೆ ಮುನ್ನುಡಿ ಬರೆದಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ ಪತ್ರಿಗಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಸನ್ನಿ ಲಿಯೋನ್ ಬೆಂಬಲಕ್ಕೆ ನಿಂತಿದ್ದು ವಿಶೇಷವಾಗಿತ್ತು.

ಹಾರ್ದಿಕ್ ಪಟೇಲ್ ಗೆ ಮಧ್ಯ ಪ್ರದೇಶದಲ್ಲಿ ಮೊಟ್ಟೆ, ಕಲ್ಲೇಟಿನ ಸ್ವಾಗತ ಹಾರ್ದಿಕ್ ಪಟೇಲ್ ಗೆ ಮಧ್ಯ ಪ್ರದೇಶದಲ್ಲಿ ಮೊಟ್ಟೆ, ಕಲ್ಲೇಟಿನ ಸ್ವಾಗತ

ಸನ್ನಿ ಲಿಯೋನ್ ತಮ್ಮ ಹಳೆಯ ಬದುಕನ್ನು ಬಿಟ್ಟು, ಇದೀಗ ಬಾಲಿವುಡ್ ನಟಿಯಾಗಿ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಂಡಿದ್ದಾರೆ. ಆದರೆ ನಾವು ಅವರನ್ನು ಇಂದಿಗೂ ಒಬ್ಬ ವಯಸ್ಕ ಚಿತ್ರಗಳ ನಟಿ ಎಂಬಂತೆ ನೋಡುವುದು ಸರಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.

Why can not we look at Sunny Leone the way we look at Sridevi or Madhuri Dixit asks Hardik Patel

ಸನ್ನಿ ಲಿಯೋನ್ ಅವರನ್ನು ಅವರ ಹಳೆಯ ವ್ಯಕ್ತಿತ್ವದಲ್ಲೇ ನೋಡುವುದು ನಮ್ಮ ಮನಸ್ಥಿತಿಯಾದರೆ ಈ ದೇಶ ಎಂದಿಗೂ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ ಬಿಟ್ ಕಾಯ್ನ್ ಹಗರಣದಲ್ಲಿ ಸನ್ನಿ ಲಿಯೋನ್ ಹೆಸರು ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಧ್ಯಪ್ರದೇಶದಲ್ಲಿ ಈ ವರ್ಷ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ 'ಯಾತ್ರೆ'ಯೊಂದನ್ನು ನಡೆಸಲು ಉದ್ದೇಶಿಸಿರುವ ಪಟೇಲ್, ಈ ಕುರಿತು ಇಂದೋರ್ ನಲ್ಲಿ ಘೋಷಣೆ ಮಾಡಿದರು.

ಬಿಜೆಪಿಗೆ ಅಧಿಕಾರದ ದುರಾಸೆ:
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಹರಿಯಾಯ್ದ ಅವರು, ಬಿಜೆಪಿಗೆ ಅಧಿಕಾರದ ದುರಾಸೆ ಇದೆ. ಅಕಸ್ಮಾತ್ 1019 ರಲ್ಲಿಯೂ ನರೇಂದ್ರ ಮೋದಿಯವರೇ ಪ್ರಧಾನಿಯಾದರೆ ಈ ದೇಶದಲ್ಲಿ ಮುಂದೆ ಚುನಾವಣೆಗಳೇ ನಡೆಯುವುದಿಲ್ಲವೇನೋ ಎಂದರು.

ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಕಾಲಾವಕಾಶ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದು ದೇಶದ ಸಂವಿಧಾನ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದರು.

English summary
Patidaar leader Hardik Patel's comment on Sunny Leone seems to become controversy now. Why can't we look at Sunny Leone the way we look at Sridevi or Madhuri Dixit?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X