ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಶ್ವಾಸ ನಿರ್ಣಯವನ್ನು ಬಿಜೆಪಿ ಒಪ್ಪಿಕೊಂಡಿದ್ದೇಕೆ? ಕುತೂಹಲದ ಪ್ರಶ್ನೆಗೆ ಇಲ್ಲಿದೆ ಉತ್ತರ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಬಿಜೆಪಿ ಅವಿಶ್ವಾಸ ನಿರ್ಣಯವನ್ನ ಒಪ್ಪಿಕೊಂಡಿದ್ಯಾಕೆ? | Oneindia Kannada

ಬೆಂಗಳೂರು, ಜುಲೈ 19 : ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಶುಕ್ರವಾರ ಅವಿಶ್ವಾಸ ನಿರ್ಣಯದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಬಿಜೆಪಿ ಈ ಬಗ್ಗೆ ಚರ್ಚೆ ನಡೆಸಲು ಒಪ್ಪಿಗೆ ನೀಡಿರುವುದು ಏಕೆ? ಎಂಬುದು ಕುತೂಹಲದ ಪ್ರಶ್ನೆ.

ಬುಧವಾರ ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಂಗೀಕರಿಸಿದ್ದಾರೆ. ಸದನದಲ್ಲಿ ಬಿಜೆಪಿ ಅವಿಶ್ವಾಸ ನಿರ್ಣಯದಲ್ಲಿ ಜಯಗಳಿಸುವ ಉತ್ಸಾಹದಲ್ಲಿದೆ.

ವಿಶ್ವಾಸ ಮತ ಮತ್ತು ಅವಿಶ್ವಾಸ ನಿರ್ಣಯಕ್ಕೆ ಇರುವ ವ್ಯತ್ಯಾಸವೇನು?ವಿಶ್ವಾಸ ಮತ ಮತ್ತು ಅವಿಶ್ವಾಸ ನಿರ್ಣಯಕ್ಕೆ ಇರುವ ವ್ಯತ್ಯಾಸವೇನು?

ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತು ಪಡಿಸಲು ಮ್ಯಾಜಿಕ್ ನಂಬರ್ 268. 'ಬಿಜೆಪಿ ಕೇವಲ ಎನ್‌ಡಿಎ ಮೈತ್ರಿಕೂಟದ ಮತಗಳು ಮಾತ್ರವಲ್ಲ, ಬೇರೆ ಪಕ್ಷಗಳಿಂದಲೂ ಮತಗಳನ್ನು ಪಡೆಯಲಿದೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Why BJP decided to face No confidence motion

ಬಿಜೆಪಿ ಒಪ್ಪಲು ಕಾರಣಗಳು : ಈ ಬಾರಿಯ ಮುಂಗಾರು ಅಧಿವೇಶದನಲ್ಲಿ ಹಲವು ಮಹತ್ವದ ಮಸೂದೆಗಳು ಅಂಗೀಕಾರವಾಗಬೇಕಿದೆ. ಆದ್ದರಿಂದ, ಬಿಜೆಪಿ ಅವಿಶ್ವಾಸನ ನಿರ್ಣಯದ ಚರ್ಚೆಗೆ ಒಪ್ಪಿಗೆ ನೀಡಿದೆ. ಇದೇ ವಿಚಾರದಕ್ಕೆ ವಿಪಕ್ಷಗಳು ಗದ್ದಲ ಮಾಡಿ ಕಲಾಪದ ಸಮಯ ವ್ಯರ್ಥವಾಗುವುದು ಪಕ್ಷಕ್ಕೆ ಇಷ್ಟವಿಲ್ಲ.

ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಇವುಗಳಿಗೆ ಉತ್ತರ ನೀಡಲು ಬಿಜೆಪಿ ಬಯಸಿದೆ. ಆದ್ದರಿಂದ, ಶುಕ್ರವಾರ ನಡೆಯಲಿರುವ ಕಲಾಪ ಕುತೂಹಲಕ್ಕೆ ಕಾರಣವಾಗಿದೆ.

ವಿರೋಧಿಗಳ ದೌರ್ಬಲ್ಯ ಬಯಲು ಮಾಡಲು ಎನ್‌ಡಿಎ ಸನ್ನದ್ಧ!ವಿರೋಧಿಗಳ ದೌರ್ಬಲ್ಯ ಬಯಲು ಮಾಡಲು ಎನ್‌ಡಿಎ ಸನ್ನದ್ಧ!

ಸಂಖ್ಯಾಬಲ : 535 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಿಜೆಪಿ ಪಕ್ಷವೇ 274 ಸದಸ್ಯರನ್ನು ಹೊಂದಿದೆ. ಬಹುಮತ ಸಾಬೀತು ಮಾಡಲು 268 ಸದಸ್ಯ ಬಲ ಸಾಕು.

ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?

ವಿರೋಧ ಪಕ್ಷ 222 ಸದಸ್ಯ ಬಲ ಹೊಂದಿದೆ. ಇವುಗಳಲ್ಲಿ ಎಐಎಡಿಎಂಕೆಯ 37, ಟಿಎಂಸಿಯ 34, ಬಿಜೆಡಿ 20, ಟಿಡಿಪಿ 16 ಮತ್ತು ಟಿಆರ್‌ಎಸ್ 11 ಸದಸ್ಯರನ್ನು ಹೊಂದಿವೆ.

ಸಂಖ್ಯಾಬಲದ ಪಟ್ಟಿ ಇಲ್ಲಿದೆ ನೋಡಿ...

Sl. No. Party Name No. of Members Percentage (%)
1 Bharatiya Janata Party(BJP) 273 51.03
2 Indian National Congress(INC) 48 8.97
3 All India Anna Dravida Munnetra Kazhagam(AIADMK) 37 6.92
4 All India Trinamool Congress(AITC) 34 6.36
5 Biju Janata Dal(BJD) 20 3.74
6 Shiv Sena(SS) 18 3.36
7 Telugu Desam Party(TDP) 16 2.99
8 Telangana Rashtra Samithi(TRS) 11 2.06
9 Communist Party of India (Marxist)(CPI(M)) 9 1.68
10 Samajwadi Party(SP) 7 1.31
11 Nationalist Congress Party(NCP) 7 1.31
12 Lok Jan Shakti Party(LJSP) 6 1.12
13 Yuvajana Sramika Rythu Congress Party(YSR Congress Party) 4 0.75
14 Rashtriya Janata Dal(RJD) 4 0.75
15 Shiromani Akali Dal(SAD) 4 0.75
16 Aam Aadmi Party(AAP) 4 0.75
17 All India United Democratic Front(AIUDF) 3 0.56
18 Independents(Ind.) 3 0.56
19 Rashtriya Lok Samta Party(RLSP ) 3 0.56
20 Indian National Lok Dal(INLD) 2 0.37
21 Indian Union Muslim League (IUML) 2 0.37
22 Janata Dal (United) (JD(U)) 2 0.37
23 Jharkhand Mukti Morcha(JMM) 2 0.37
24 Apna Dal(Apna Dal) 2 0.37
25 Communist Party of India(CPI) 1 0.19
26 Nationalist Democratic Progressive Party 1 0.19
27 All India Majlis-E-Ittehadul Muslimeen(AIMIM) 1 0.19
28 All India N.R. Congress(AINRC) 1 0.19
29 Kerala Congress (M) (KC(M)) 1 0.19
30 Jammu and Kashmir National Conference(J&KNC) 1 0.19
31 Jammu and Kashmir Peoples Democratic Party(J&KPDP) 1 0.19
32 Janata Dal (Secular)(JD(S)) 1 0.19
33 Revolutionary Socialist Party(RSP) 1 0.19
34 Sikkim Democratic Front(SDF) 1 0.19
35 Rashtriya Lok Dal(RLD) 1 0.19
36 National Peoples Party(NPP) 1 0.19
37 Pattali Makkal Katchi(PMK) 1 0.19
38 Swabhimani Paksha(SWP) 1 0.19

English summary
The BJP faces a crucial test on Friday as Lok Sabha takes up the no-confidence motion. There are several reasons, why the BJP decided to agree to face the trust vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X