ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಶಾ ಜೋಡಿಗೆ ಜೇಟ್ಲಿ ಅತ್ಯಾಪ್ತರಾಗಿದ್ದು ಹೇಗೆ?

|
Google Oneindia Kannada News

ನವದೆಹಲಿ, ಆಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಅರುಣ್ ಜೇಟ್ಲಿ ನಿಧನ ವೈಯಕ್ತಿಕ ನಷ್ಟವಾಗಿದೆ.

ಗುಜರಾತ್ ರಾಜಕೀಯ ದಿನಗಳಿಂದಲೂ ಮೋದಿ ಹಾಗೂ ಶಾ ಗೆ ಜೇಟ್ಲಿ ಅತ್ಯಾಪ್ತರು ಹಾಗೂ ಅಪ್ತತ್ಕಾಲದಲ್ಲಿ ಬೆನ್ನೆಲುಬಾಗಿ ನಿಂತ ಬಿಜೆಪಿ ಮುಖಂಡ.

LIVE: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಧಿವಶ LIVE: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಧಿವಶ

2002ರ ಗುಜರಾಜ್ ಹಿಂಸಾಚಾರದ ಬಳಿಕ ಮೋದಿಯನ್ನು ಕಟ್ಟಿ ಹಾಕಲು ಬಿಜೆಪಿಯಲ್ಲೇ ಸಾಕಷ್ಟು ಜನ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೋದಿ ಪರವಾಗಿ ನಿಂತು ಮುಖ್ಯಮಂತ್ರಿ ಗಾಧಿಯಲ್ಲೇ ಮುಂದುವರೆಯುವಂತೆ ಕೆಲಸ ಮಾಡಿದವರು ಜೇಟ್ಲಿ, ಆ ಸಂದರ್ಭದಲ್ಲಿ ಜೇಟ್ಲಿ ಗುಜರಾತ್ ಉಸ್ತುವಾರಿ ವಹಿಸಿಕೊಂಡಿದ್ದರು.

Why Arun Jaitley Is So Closed To Modi Shah Team

ನಂತರ ಯುಪಿಎ ಸರ್ಕಾರ ಬಂದ ಮೇಲೆ ಮೋದಿ ವಿರುದ್ಧ ಕಾನೂನು ಹೋರಾಟಗಳು ಆರಂಭವಾದಾಗಲೂ ಜೇಟ್ಲಿ ದೆಹಲಿ ಮಟ್ಟದಲ್ಲಿ ಎಲ್ಲಾ ರೀತಿಯ ನೆರವನ್ನೂ ನೀಡಿದ್ದರು. ಸೊಹರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿಯೂ ಅಮಿತ್ ಶಾ ಜೈಲು ಪಾಲಾದಾಗ ಹಾಗೂ ರಾಜ್ಯದಿಂದ ಗಡಿ ಪಾರಾದಾಗ ಕಾನೂನು ಹೋರಾಟಕ್ಕೆ ಕಾನೂನು ಹೋರಾಟಕ್ಕೆ ನೆರವಾಗಿದ್ದು ಇದೇ ಜೇಟ್ಲಿ.

Breaking News ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ Breaking News ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ

ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮೋದಿ ಶಾ ಜೋಡಿ ಹೆಸರು ಮಾಡುವ ಮುನ್ನವೇ ಅರುಣ್ ಜೇಟ್ಲಿ ಅವರಿಬ್ಬರಿಗೆ ಹತ್ತಿರದವರಾಗಿದ್ದರು.2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಪ್ರಧಾನಿಯಾದ ಬಳಿಕ ಈ ಸಂಬಂಧ ಪ್ರಖರವಾಗಿ ಗೋಚರಿಸಲು ಆರಂಭಿಸಿತು. ಮೋದಿಯ ಮೊದಲ ಅವಧಿಯಲ್ಲಿ ಅರುಣ್ ಜೇಟ್ಲಿ ನಂಬರ್ 2 ಆಗಿದ್ದರು. ಸರ್ಕಾರಕ್ಕೆ ಯಾವುದೇ ಸಂದರ್ಭದಲ್ಲಿ ನೆರವು ಬೇಕಾದಾಗ ಪ್ರತಿಪಕ್ಷಗಳ ಟೀಕೆಯಿಂದ ಬಚಾವಾಗಬೇಕಾದಾಗ ಮೋದಿ, ಅಮಿತ್ ಶಾ ಮುಖಮಾಡುತ್ತಿದ್ದಿದ್ದು ಜೇಟ್ಲಿ ಕಡೆಗೆ.

ಇದನ್ನು ನಿರೀಕ್ಷಿಸಿದ್ದರಿಂದಲೇ ಲೋಕಸಭಾ ಚುನಾವಣೆ ಸೋತಿದ್ದ ಜೇಟ್ಲಿಗೆ ಪ್ರಭಾವಿ ಖಾತೆಯನ್ನು ನೀಡಲಾಗಿತ್ತು. 2019ರಲ್ಲಿ ಅನಾರೋಗ್ಯದ ಕಾರಣದಿಂದ ಸಂಪುಟದಿಂದ ಹೊರಗುಳಿಯುತ್ತೇನೆ ಎಂದು ಖುದ್ದು ಜೇಟ್ಲಿಯೇ ಹೇಳಿದರೂ ಕೂಡ ಖಾತೆರಹಿತರಾಗಿ ಸಚಿವರಾಗಿ ಮುಂದುವರೆಯುರಿ ಎಂದು ಮೋದಿ, ಶಾ ಮನವಿ ಮಾಡಿದ್ದರು.

English summary
From Gujarat days Arun Jaitley , Modi and shah working together and has the special Rapo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X