ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸರಾಂ ಬಾಪು ಪ್ರಕರಣದಲ್ಲಿ ಗುಜರಾತ್ ಸರಕಾರಕ್ಕೆ 'ಸುಪ್ರಿಂ' ತರಾಟೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 28: ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲು ಪಾಲಾಗಿದ್ದಾನೆ. ಆದರೆ ಅದೇ ರೀತಿಯ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಇನ್ನೊರ್ವ ಸ್ವಘೋಷಿತ ದೇವಮಾನವ ಅಸರಾಂ ಬಾಪು ಇನ್ನೂ ಜೈಲು ಶಿಕ್ಷೆಗೆ ಗುರಿಯಾಗಿಲ್ಲ. ಇದಕ್ಕೆ ಕಾರಣ ನಿಧಾನಗತಿಯ ವಿಚಾರಣೆ.

ಬಯಲಿಗೆ ಬಂತು ರಾಮ್ ರಹೀಂ ಬಾಬಾನ ಮತ್ತೊಂದು ರಾಸಲೀಲೆ?ಬಯಲಿಗೆ ಬಂತು ರಾಮ್ ರಹೀಂ ಬಾಬಾನ ಮತ್ತೊಂದು ರಾಸಲೀಲೆ?

ಇದೇ ಕಾರಣಕ್ಕೆ ಸುಪ್ರಿಂ ಕೋರ್ಟ್ ಗುಜರಾತ್ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

Why are you so slow on Asaram Bapu rape trial: SC pulls up Guj govt

ಅಸರಾಂ ಬಾಪು ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ವಿಳಂಬ ಧೋರಣೆ ತಾಳುತ್ತಿರುವ ರಾಜ್ಯ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಾಲಯ, "ಇಲ್ಲಿಯವರೆಗೆ ಸಂತ್ರಸ್ತರನ್ನು ಯಾಕೆ ಪರೀಕ್ಷೆಗೆ ಒಳಪಡಿಸಿಲ್ಲ? ವಿಚಾರಣೆಯಲ್ಲಿ ಯಾಕೆ ತಡವಾಗುತ್ತಿದೆ? ಇಲ್ಲಿಯವರೆಗಿನ ಪ್ರಗತಿ ಏನು ಎಂದು ತಕ್ಷಣ ಅಫಿಡವಿಟ್ ಸಲ್ಲಿಸಿ," ಎಂದು ಗುಜರಾತ್ ಸರಕಾರಕ್ಕೆ ಕಟುವಾಗಿ ಹೇಳಿದೆ.

ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಅಸರಾಂ ಬಾಪು ಗುಜರಾತ್ ನ ಗಾಂಧಿನಗರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ರಾಮ್ ರಹೀಮ್ ತೀರ್ಪು : ಪ್ರಧಾನಿಗೆ ನಾರಿಮನ್ ನೀಡಿದ ಸಲಹೆ ಏನು?ರಾಮ್ ರಹೀಮ್ ತೀರ್ಪು : ಪ್ರಧಾನಿಗೆ ನಾರಿಮನ್ ನೀಡಿದ ಸಲಹೆ ಏನು?

1997 ರಿಂದ 2006ರ ಮಧ್ಯೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸೂರತ್ ಮೂಲದ ಮಹಿಳೆ ದೂರು ನೀಡಿದ್ದರು. ಆಶ್ರಮ ಇರುವ ಅಹಮದಾಬಾದ್ ಹೊರವಲಯದಲ್ಲಿ ತಾವು ವಾಸವಾಗಿದ್ದಾಗ ಈ ದೌರ್ಜನ್ಯ ನಡೆದಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದರು. ಇದೇ ಹಿನ್ನಲೆಯಲ್ಲಿ ಆಗಸ್ಟ್ 3, 2013ರಲ್ಲಿ ಅಸರಾಂ ಬಾಪು ಬಂಧಿತರಾಗಿದ್ದರು. ಸದ್ಯ ಬಾಪು ಜೈಲಿನಲ್ಲಿದ್ದಾರೆ.

English summary
The Supreme Court on Monday pulled up the government for the slow progress in the trial against Asaram Bapu, the self styled godman. Asaram Bapu is facing trial in a rape case in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X