ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರದಿ: ಆಗಸ್ಟ್.15ರಂದೇ ಸ್ವಾತಂತ್ರ್ಯ ದಿನ ಆಚರಿಸಲು ಕಾರಣವೇನು?

|
Google Oneindia Kannada News

ನವದೆಹಲಿ, ಆಗಸ್ಟ್.15: ಭಾರತದಾದ್ಯಂತ 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದ ದಿನವನ್ನು ದೇಶಾದ್ಯಂತ ಹಬ್ಬದಂತೆ ಆಚರಿಸಲಾಗುತ್ತಿದೆ. ಆಗಸ್ಟ್.15ನೇ ದಿನವನ್ನೇ ಯಾಕೆ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ ಎಂಬ ಪ್ರಶ್ನೆಗೆ ಇಂದಿಗೂ ಅದೆಷ್ಟು ಜನರಿಗೆ ಉತ್ತರವೇ ತಿಳಿಯದು.

ಕಳೆದ 1765 ರಿಂದ 200 ವರ್ಷಗಳ ಕಾಲ ಭಾರತವನ್ನು ಬ್ರಿಟಿಷರು ಆಳ್ವಿಕೆ ನಡೆಸಿದರು. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದವು. ಅಂತಿಮವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವುದಕ್ಕೆ ಬ್ರಿಟಿಷರು ಸಮ್ಮತಿಸಿದರು. ಈ ವೇಳೆಯಲ್ಲೇ ದುರಾದೃಷ್ಟವಶಾತ್ ದೇಶವು ಇಬ್ಭಾಗವಾಯಿತು. ಪಾಕಿಸ್ತಾನವು ಆಗಸ್ಟ್.14ರಂದು ಸ್ವಾತಂತ್ರ್ಯ ದಿನ ಎಂದು ಆಚರಿಸಿದರೆ, ಭಾರತವು ಆಗಸ್ಟ್.15ರಂದು ಸ್ವಾತಂತ್ರ್ಯೋತ್ಸವದ ಹಬ್ಬವನ್ನು ಆಚರಿಸುತ್ತದೆ.

ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವುದಕ್ಕೆ ಬ್ರಿಟಿಷರು ಆಗಸ್ಟ್.15ನ್ನು ಏಕೆ ಆಯ್ಕೆ ಮಾಡಿಕೊಂಡರು. ದೇಶದಲ್ಲಿ ಆಗಸ್ಟ್.15ರಂದೇ ಸ್ವಾತಂತ್ರ್ಯ ದಿನ ಆಚರಿಸುವುದಕ್ಕೆ ಕಾರಣವೇನು. ಇತಿಹಾಸದಲ್ಲಿ ಈ ಬಗ್ಗೆ ಉಲ್ಲೇಖ ಆಗಿರುವುದು ಏನು ಎಂಬ ಪ್ರಶ್ನೆಗೆ ಉತ್ತರವನ್ನು ಇಲ್ಲಿ ಕಂಡುಕೊಳ್ಳೋಣ.

ಭಾರತೀಯ ಸ್ವಾತಂತ್ರ್ಯ ಕಾಯ್ದೆಗೆ 1947ರಲ್ಲಿ ಅಂಗೀಕಾರ

ಭಾರತೀಯ ಸ್ವಾತಂತ್ರ್ಯ ಕಾಯ್ದೆಗೆ 1947ರಲ್ಲಿ ಅಂಗೀಕಾರ

1947ರಲ್ಲಿ, ಇಂಗ್ಲೆಂಡ್ ಸಂಸತ್ತಿನಲ್ಲಿ ಭಾರತೀಯ ಸ್ವಾತಂತ್ರ್ಯ ಕಾಯ್ದೆಯನ್ನು ಅಂಗೀಕರಿಸಲಾಯಿತು. ಶಾಸಕಾಂಗದ ಸಾರ್ವಭೌಮತ್ವವನ್ನು ಭಾರತೀಯ ಸಂವಿಧಾನ ಸಭೆಗೆ ವರ್ಗಾಯಿಸಲಾಗಿತ್ತು. ಇದರ ಹೊರತಾಗಿ ಕಿಂಗ್ ಜಾರ್ಜ್-VI ಭಾರತವು ಸಂಪೂರ್ಣವಾಗಿ ಗಣರಾಜ್ಯ ಸಂವಿಧಾನಕ್ಕೆ ಪರಿವರ್ತನೆ ಆಗುವ ತನಕ ದೇಶದ ಮುಖ್ಯಸ್ಥರಾಗಿದ್ದರು.

ದೇಶದ ಮೊದಲ ಪ್ರಧಾನಿಯಿಂದ ಹಾರಿತು ತ್ರಿವರ್ಣ ಧ್ವಜ

ದೇಶದ ಮೊದಲ ಪ್ರಧಾನಿಯಿಂದ ಹಾರಿತು ತ್ರಿವರ್ಣ ಧ್ವಜ

ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರು, ದೆಹಲಿ ಕೆಂಪು ಕೋಟೆಯ ಲಾಹೋರಿ ಗೇಟ್ ಮೇಲೆ ರಾಷ್ಟ್ರೀಯ ಧ್ವಜ ಹಾರಿಸಿದರು. ಇದೇ ತರುವಾಯ ಒಂದು ರೂಢಿಯಾಗಿದ್ದು, ಈಗ ಪ್ರತಿ ಸ್ವಾತಂತ್ರ್ಯ ದಿನದಂದು ಭಾರತೀಯ ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಆ.15ಕ್ಕೂ ಮೊದಲು ಜ.26ರಂದು ಆಚರಣೆ

ಆ.15ಕ್ಕೂ ಮೊದಲು ಜ.26ರಂದು ಆಚರಣೆ

1947ರಲ್ಲಿ ಸ್ವಾತಂತ್ರ್ಯ ಘೋಷಿಸುವ ಮೊದಲು 1929 ರಲ್ಲೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರೂ ಅವರು ‘ಪೂರ್ಣ ಸ್ವರಾಜ್' ಗೆ ಕರೆ ನೀಡಿದ್ದರು. ಇದರರ್ಥ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಭಾರತವನ್ನು ಸಂಪೂರ್ಣ ಸ್ವಾತಂತ್ರ್ಯಗೊಳಿಸುವುದೇ ಆಗಿತ್ತು. ಇದಕ್ಕೂ ಮೊದಲು ಜನವರಿ.26 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಆಯ್ಕೆ ಮಾಡಲಾಯಿತು. 1930ರ ದಶಕದಿಂದ ಕಾಂಗ್ರೆಸ್ ಪಕ್ಷವು ಜನವರಿ.26 ಅನ್ನು ಭಾರತದ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು. ಭಾರತ ಔಪಚಾರಿಕವಾಗಿ ಸಾರ್ವಭೌಮ ರಾಷ್ಟ್ರವಾಗುತ್ತಿದ್ದಂತೆ 1950ರ ಜನವರಿ,26 ಅನ್ನು ಭಾರತ ಗಣರಾಜ್ಯೋತ್ಸವ ಎಂದು ಆಚರಿಸಲಾಯಿತು.

ಭಾರತೀಯ ನಾಯಕರಿಗೆ ಅಧಿಕಾರ ಹಸ್ತಾಂತರಿಸಿದ ಮೌಂಟ್ ಬ್ಯಾಟನ್

ಭಾರತೀಯ ನಾಯಕರಿಗೆ ಅಧಿಕಾರ ಹಸ್ತಾಂತರಿಸಿದ ಮೌಂಟ್ ಬ್ಯಾಟನ್

1947ರ ಜುಲೈ.04ರಂದು ಭಾರತೀಯ ಸ್ವಾತಂತ್ರ್ಯ ಕಾಯ್ದೆಯನ್ನು ಬ್ರಿಟಿಷ್ ಸಂಸತ್ ನಲ್ಲಿ ಅಂಗೀಕರಿಸಲಾಯಿತು. ನಂತರದಲ್ಲಿ 1948ರ ಜೂನ್.30ರೊಳಗೆ ಆಡಳಿತದ ಅಧಿಕಾರವನ್ನು ಭಾರತೀಯ ನಾಯಕರಿಗೆ ವರ್ಗಾಯಿಸುವಂತೆ ಬ್ರಿಟಿಷ್ ಸಂಸತ್ತು ಅಂದಿನ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ರಿ‌ಗೆ ಆದೇಶಿಸಿತ್ತು. ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಕಾರ್ಯಕರ್ತ ಸಿ.ರಾಜಗೋಪಾಲಾಚಾರಿ ಅವರ ಪ್ರಕಾರ, ಲಾರ್ಡ್ ಮೌಂಟ್ ಬ್ಯಾಟನ್ ಜೂನ್.1948 ರವರೆಗೆ ಕಾದಿದ್ದರೆ, ವರ್ಗಾಯಿಸುವ ಅಧಿಕಾರ ಕಳೆದುಕೊಳ್ಳುತ್ತಿದ್ದರು. ಈ ಹಿನ್ನೆಲೆ ಅಧಿಕಾರ ವರ್ಗಾವಣೆಗೆ 1947ರ ದಿನಾಂಕವನ್ನು ಮೌಂಟ್ ಬ್ಯಾಟನ್ ಆಯ್ಕೆ ಮಾಡಿಕೊಂಡಿದ್ದರು. ಆ ಮೂಲಕ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯು ಅಂತ್ಯಗೊಂಡಿದ್ದು, ಆಗಸ್ಟ್.15ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು. ಇದರ ನಡುವೆ ದೇಶವು ಭಾರತ ಮತ್ತು ಪಾಕಿಸ್ತಾನ ಎಂದು ಇಬ್ಭಾಗವಾಯಿತು.

ಸ್ವಾತಂತ್ರ್ಯ ನೀಡಲು ಆಗಸ್ಟ್.15ನ್ನು ಆಯ್ಕೆ ಮಾಡಿದ್ದು ಏಕೆ?

ಸ್ವಾತಂತ್ರ್ಯ ನೀಡಲು ಆಗಸ್ಟ್.15ನ್ನು ಆಯ್ಕೆ ಮಾಡಿದ್ದು ಏಕೆ?

ಭಾರತಕ್ಕೆ ಸ್ವಾತಂತ್ರ್ಯ ನೀಡಲು ಆಗಸ್ಟ್.15ರ ದಿನಾಂಕವನ್ನು ಏಕೆ ಆಯ್ಕೆ ಮಾಡಿದೆ ಎಂಬ ಅಂಶವನ್ನು ಸ್ವತಃ ವೈಸ್ ರಾಯ್ ಮೌಂಟ್ ಬ್ಯಾಟನ್ ಬಿಚ್ಚಿಟ್ಟಿದ್ದಾರೆ. "ನಾನು ನಿಗದಿಗೊಳಿಸಿದ ದಿನಾಂಕವು ನೀಲಿ ಬಣ್ಣದಿಂದ ಹೊರ ಬರುವಂತಿತ್ತು. ಅವರ ಪ್ರಶ್ನೆಗೆ ಉತ್ತರವಾಗಿ ನಾನು ಆ ದಿನಾಂಕವನ್ನು ಆಯ್ಕೆ ಮಾಡಿದೆನು. ಇಡೀ ಘಟನೆಗೆ ನಾನೇ ಮಾಸ್ಟರ್ ಮೈಂಡ್ ಎನ್ನುವಂತೆ ತೋರಿಸಲು ನಾನು ಅಂದು ತೀರ್ಮಾನಿಸಿದ್ದೆನು. ದಿನಾಂಕ ನಿಗದಿಗೊಳಿಸಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ಆ ದಿನವು ಶೀಘ್ರದಲ್ಲಿರಬೇಕು ಎಂಬುದು ನನ್ನ ಅರಿವಿಗೆ ಬಂದಿತು. ಆಗಸ್ಟ್ ಅಥವಾ ಸಪ್ಟೆಂಬರ್ ತಿಂಗಳಲ್ಲೇ ದಿನಾಂಕ ಆಯ್ಕೆ ಮಾಡುವುದಕ್ಕೆ ತೀರ್ಮಾನಿಸಿದ್ದು, ಬಳಿಕ ಆಗಸ್ಟ್.15ರ ದಿನಾಂಕವನ್ನು ನಿಗದಿಗೊಳಿಸಿದೆನು. ಏಕೆಂದರೆ ಈ ದಿನಾಂಕವು ಜಪಾನ್ ಶರಣಾಗತಿಯ ಎರಡನೇ ವಾರ್ಷಿಕೋತ್ಸವ ಆಗಿತ್ತು" ಎಂದು ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ತಿಳಿಸಿದ್ದಾರೆ.

ಆಗಸ್ಟ್.14ರಂದು ಪಾಕ್ ಸ್ವಾತಂತ್ರ್ಯೋತ್ಸವ ಆಚರಿಸುವುದೇಕೆ?

ಆಗಸ್ಟ್.14ರಂದು ಪಾಕ್ ಸ್ವಾತಂತ್ರ್ಯೋತ್ಸವ ಆಚರಿಸುವುದೇಕೆ?

ಭಾರತವು ಆಗಸ್ಟ್.15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಆದರೆ ಅಂದೇ ಸ್ವಾತಂತ್ರ್ಯವನ್ನು ಪಡೆದ ಪಾಕಿಸ್ತಾನದಲ್ಲಿ ಮಾತ್ರ ಏಕೆ ಆಗಸ್ಟ್.14ರಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಾರೆ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಮೊದಲ ಬಾರಿಗೆ ಅಂದರೆ 1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಹಮ್ಮದ್ ಅಲಿ ಜಿನ್ನಾ ಆಗಸ್ಟ್.15 ಪಾಕಿಸ್ತಾನದ ಸ್ವಾತಂತ್ರ್ಯೋತವದ ದಿನ ಎಂದು ಘೋಷಿಸಿದ್ದರು. ಆಗಸ್ಟ್.15 ಸಾತಂತ್ರ್ಯ ಮತ್ತು ಸಾರ್ವಭೌಮ ಪಾಕಿಸ್ತಾನದ ಹುಟ್ಟುಹಬ್ಬ ಎಂದು ಕರೆದಿದ್ದರು. ಮುಸ್ಲಿಂ ರಾಷ್ಟ್ರ ನಿರ್ಮಾಣಕ್ಕಾಗಿ ಮಾತೃಭೂಮಿಗಾಗಿ ನಡೆಸಿದ ಹಲವು ವರ್ಷಗಳ ಹೋರಾಟ ಫಲಿಸಿದ್ದು, ಗುರಿ ಮುಟ್ಟುವನ್ನು ನಾವೆಲ್ಲರೂ ಸಫಲರಾಗಿದ್ದೀವಿ ಎಂದು ಮಹಮ್ಮದ್ ಅಲಿ ಜಿನ್ನಾ ಹೇಳಿದ್ದರು. ಆದರೆ ಅದಾಗಿ ಮರು ವರ್ಷವೇ ಅಂದರೆ 1948ರಿಂದ ಆಗಸ್ಟ್.14ರ ದಿನವನ್ನು ಪಾಕ್ ಸ್ವಾತಂತ್ರ್ಯ ದಿನ ಎಂದು ಆಚರಿಸಲು ಆರಂಭಿಸಿತು.

ಆಗಸ್ಟ್.14ರಂದೇ ನಡೆದಿತ್ತು ಅಧಿಕಾರ ಹಸ್ತಾಂತರ

ಆಗಸ್ಟ್.14ರಂದೇ ನಡೆದಿತ್ತು ಅಧಿಕಾರ ಹಸ್ತಾಂತರ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲು ಬ್ರಿಟಿಷರು ತೀರ್ಮಾನಿಸಿದ್ದರು. ಅದರ ಅಂಗವಾಗಿ ಆಗಸ್ಟ್.14ರಂದು ಕರಾಚಿಯಲ್ಲಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆಗಳು ನಡೆದವು. ಅದಲ್ಲದೇ 1947ರ ಆಗಸ್ಟ್.14ರ ಆ ದಿನವು ರಂಜಾನ್ ತಿಂಗಳ 27ನೇ ದಿನ ಅಂದರೆ ಮುಸ್ಲಿಮರ ಪಾಲಿನ ಪವಿತ್ರ ದಿನವಾಗಿತ್ತು. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ಆಗಸ್ಟ್.14ರ ದಿನವನ್ನೇ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ.

English summary
Why 15th August Is Celebrated As Independence Day Of India. Here Read Why Did Mountbatten Choose This Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X