ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಟ್ಟುಸಿರು ಬಿಟ್ಟ ಗ್ರಾಹಕ, ಈರುಳ್ಳಿ ಸೆಂಚುರಿ ಬಾರಿಸಲ್ಲ

|
Google Oneindia Kannada News

ಬೆಂಗಳೂರು, ಆಗಸ್ಟ್.22: ದರ ಏರಿಕೆಲ್ಲಿ ಸೆಂಚುರಿ ಬಾರಿಸಲು ಮುಂದಾಗಿದ್ದ ಈರುಳ್ಳಿ ಇದೀಗ ಇಳಿಕೆಯ ಹಾದಿ ಹಿಡಿದಿದ್ದು ಗ್ರಾಹಕರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.

ಮಹಾರಾಷ್ಟ್ರದ ಲಾಸಲ್‌ಗಾಂವ್‌ ಸಗಟು ಮಾರುಕಟ್ಟೆಯಲ್ಲಿ 57 ರು. ಗೆ ತಲುಪಿದ್ದ ಈರುಳ್ಳಿ ಕೆಜಿಗೆ 48 ರು. ಗೆ ಇಳಿಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರದದಲ್ಲಿ ಹೊಸ ಈರುಳ್ಳಿ ಕೊಯ್ಲಿಗೆ ಬಂದಿದ್ದು ಇಳಿಕೆ ಮುಂದುವರಿಯಲಿದೆ.[ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?]

Wholesale onion prices fall to Rs 48 at Lasalgaon, Maharastra

ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿಲ್ಲ. ಒಂದೆರಡು ವಾರದಲ್ಲಿ ಈರುಳ್ಳಿ ಸಾಮಾನ್ಯ ದರಕ್ಕೆ ಬರಬಹುದು ಎಂದು ವರ್ತಕರು ಹೇಳುತ್ತಾಕೆಲವೇ ದಿನಗಳಲ್ಲಿ ಸಾಮಾನ್ಯ ದರಕ್ಕೆ ಬರಲಿದೆ ಎನ್ನುತ್ತಾರೆ ಈರುಳ್ಳಿ ಸಗಟು ವರ್ತಕರು.

ಆಮದಿಗೆ ಸೂಚನೆ
ದರ ಏರಿಕೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಕೆಜಿಗೆ 45 ರು. ಲೆಕ್ಕದಲ್ಲಿ ಒಂದು ಸಾವಿರ ಟನ್‌ ಈರುಳ್ಳಿಯನ್ನು ತಕ್ಷಣವೇ ಆಮದು ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿ ಅನುಮತಿಯನ್ನು ನೀಡಿದೆ. ಅಲ್ಲದೇ, 10 ಸಾವಿರ ಟನ್‌ ಈರುಳ್ಳಿ ಆಮದು ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸದಾಗಿ ಟೆಂಡರ್ ಕರೆಯುವಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಂಎಂಟಿಸಿಗೆ ಸೂಚಿಸಲಾಗಿದೆ.

ರಾಜಧಾನಿ ದೆಹಲಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಈರುಳ್ಳಿ ದರ ಏರಿಕೆ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಇದೀಗ ಹೊಸ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಅತಂಕವನ್ನು ಕಡಿಮೆಮಾಡಿದೆ.

English summary
New Delhi: Onion prices in wholesale market at Lasalgaon in Maharasthra have declined further to Rs 48 per kg today from Rs 57 last week due to improvement in supply. The central government decided to import 10 tonnes onion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X