ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿ ಸದ್ದಿನಲ್ಲಿ ಮರೆತುಹೋದ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಭಾರತದಲ್ಲಿ ಮಾತ್ರವಲ್ಲ ಇಡೀ ಭೂಮಿಯಲ್ಲಿ ಅತೀಹೆಚ್ಚಿನ ಅಸುರಕ್ಷತೆ ಎದುರಿಸುತ್ತಿರುವುದು ಹೆಣ್ಣುಮಗು. ಒಂದೆಡೆ ಏನೂ ಅರಿಯದ ಹೆಣ್ಣುಮಕ್ಕಳು ಕಾಮುಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ, ಮತ್ತೊಂದೆಡೆ ಅವರಿಗೆ ಸಿಗಬೇಕಾದ ಶಿಕ್ಷಣವೂ ಸಿಗುತ್ತಿಲ್ಲ.

ಹೆಣ್ಣುಮಕ್ಕಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವೆ? ಹೋಗಲಿ, ಹೆಣ್ಣುಮಕ್ಕಳು ಯಾವುದರಲ್ಲಿ ಕಮ್ಮಿಯಿದ್ದಾರೆ? ಕ್ರೀಡೆ, ಉದ್ಯಮ, ರಾಜಕೀಯ, ಸಾಮಾಜಿಕ ವಲಯದಲ್ಲಿಯೂ ಹೆಣ್ಣುಮಕ್ಕಳದ್ದೇ ಪಾರುಪತ್ಯ. ಶೈಕ್ಷಣಿಕವಾಗಿ ಕೂಡ ಗಂಡು ಮಕ್ಕಳಿಗಿಂತ ಮುಂದಿದ್ದರೂ ಅವರಿಗೆ ಸಿಗಬೇಕಾದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಕೂಡ ಅಷ್ಟೇ ನಿಜ.

7 ಗಂಡು ಮಕ್ಕಳ ಪಾಲಕರಿಗೆ ಒಬ್ಬ ಹೆಣ್ಣು ಮಗು ಸಿಕ್ಕರೂ, ಸಾಕುವ ಭಾಗ್ಯವಿಲ್ಲ!7 ಗಂಡು ಮಕ್ಕಳ ಪಾಲಕರಿಗೆ ಒಬ್ಬ ಹೆಣ್ಣು ಮಗು ಸಿಕ್ಕರೂ, ಸಾಕುವ ಭಾಗ್ಯವಿಲ್ಲ!

ಹೆಣ್ಣುಮಕ್ಕಳಿಗೆ ಬೇಕಾದ ಸುರಕ್ಷತೆ, ಬೆಂಬಲ, ಗೌರವ ನೀಡಿ, ಅವರನ್ನು ಎಲ್ಲ ರಂಗಗಳಲ್ಲಿ ಸಬಲೀಕರಣ ಮಾಡುವ ಉದ್ದೇಶದಿಂದ ಅಕ್ಟೋಬರ್ 11ನ್ನು ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನಾಗಿ ವಿಶ್ವಸಂಸ್ಥೆ ಆಚರಿಸುತ್ತಿದೆ. ನಾಳಿನ ಉತ್ತಮ ಸಮಾಜಕ್ಕಾಗಿ ಹೆಣ್ಣುಮಕ್ಕಳನ್ನು ಇಂದು ಕಾಪಾಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಗು ಶಿಕ್ಷಣ, ಪೌಷ್ಟಿಕತೆ, ಕಾನೂನು ಹಕ್ಕು, ವೈದ್ಯಕೀಯ ಆರೈಕೆ, ಬಾಲ್ಯವಿವಾಹ, ಪಕ್ಷಪಾತ, ದೌರ್ಜನ್ಯದ ವಿರುದ್ಧ ಅನುಕ್ಷಣವೂ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಪ್ರತಿದಿನವೂ ಇಪ್ಪತ್ತೆಂಟು ಆಚರಣೆಗಳಿರುತ್ತವೆ, ಆದರೆ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲು ಸಾಧ್ಯವಿಲ್ಲವೆ ?

ಪತಿ, ಮಗುವಿನೆದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ!ಪತಿ, ಮಗುವಿನೆದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ!

ನಿನ್ನೆ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನ ಎಂಬುದು ಹಲವರಿಗೆ ಗೊತ್ತೇ ಇಲ್ಲ! ಪ್ರತಿ ಮನೆಯ ಕಣ್ಣಾದ, ಬೆಳಕಾದ ಹೆಣ್ಣು ನಿಜಕ್ಕೂ ಸುರಕ್ಷಿತಳಾ, ಆಕೆಗೆ ಸಿಗಬೇಕಾದ ಮನ್ನಣೆ ಸಿಗುತ್ತಿದೆಯಾ?

ನಿಂತಿದೆಯಾ ಹೆಣ್ಣು ಭ್ರೂಣ ಹತ್ಯೆ?

ನಿಂತಿದೆಯಾ ಹೆಣ್ಣು ಭ್ರೂಣ ಹತ್ಯೆ?

ಹೆಣ್ಣು ಭ್ರೂಣಹತ್ಯೆ ತಡೆಗೆ ಮತ್ತು ಹೆಣ್ಣು ಮಕ್ಕಳ ಉಳಿವಿಗಾಗಿ ಸರ್ಕಾರದ ಬೇಟಿ ಬಚಾವೋ, ಬೇಟಿ ಪಢಾವೋ, ಸುಕನ್ಯಾ ಸಮೃದ್ಧಿ ಮುಂತಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂದಿಗೂ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ. ಮಗು ಹುಟ್ಟುತ್ತಿದ್ದಂತೆಯೇ ಹೆಣ್ಣು ಎಂದು ತಿಳಿದು ಸಾಯಿಸುವ ವಿಕೃತಿಯೂ ನಿಂತಿಲ್ಲ. ಎರಡು ದಶಕಗಳೀಚೆಗೆ ಈ ಪ್ರಮಾಣ ಕಡಿಮೆಯಾಗಿರಬಹುದು, ಆದರೆ ನಿಂತಿಲ್ಲ!

ಬಾಲ್ಯ ವಿವಾಹದ ಅಸ್ತಿತ್ವ

ಬಾಲ್ಯ ವಿವಾಹದ ಅಸ್ತಿತ್ವ

ಉತ್ತರ ಭಾರತದ ಹಲವು ಹಿಂದುಳಿದ ರಾಜ್ಯಗಳಲ್ಲಿ ಇಂದಿಗೂ ಬಾಲ್ಯವಿವಾಹವಿದೆ. ಅದಿಲ್ಲವೆಂದಿದ್ದರೆ "18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಮಾಡುವುದು ಅತ್ಯಾಚಾರಕ್ಕೆ ಸಮ" ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಅಗತ್ಯ ಬರುತ್ತಲೇ ಇರಲಿಲ್ಲ! ಬಾಲ್ಯ ವಿವಾಹ ತಡೆಗಾಗಿಯೇ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಪ್ರಕಟಿಸಿದೆ. ಜವಾಬ್ದಾರಿಯಿಂದ ನುಣಿಚಿಕೊಳ್ಳುವುದಕ್ಕೋ, ಇನ್ಯಾವುದೋ ಕಾರಣಕ್ಕೋ ಇಂದಿಗೂ ಬಾಲ್ಯ ವಿವಾಹ ಅಸ್ತಿತ್ವದಲ್ಲಿರುವುದು ಶೋಚನೀಯ ಸಂಗತಿ!

ಮಹಿಳೆಯರ ಶಿಕ್ಷಣದ ಹಕ್ಕು

ಮಹಿಳೆಯರ ಶಿಕ್ಷಣದ ಹಕ್ಕು

ಇಂದು ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುತ್ತಿದ್ದರೂ, ಹಿಂದುಳಿದ ರಾಜ್ಯಗಳು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವ ಧೈರ್ಯ ಮಾಡುತ್ತಿಲ್ಲ! ಕುಗ್ರಾಮಗಳಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ ಕೆಲವೇ ಕೆಲವು ಮಹಿಳೆಯರು ಶಿಕ್ಷಣ ತಮ್ಮ ಹಕ್ಕು ಎಂಬುದನ್ನು ಸಾಬೀತುಪಡಿಸಿದ್ದು ಬಿಟ್ಟರೆ ಎಷ್ಟೋ ಹೆಣ್ಣು ಮಕ್ಕಳು ಇಂದಿಗೂ ಶಿಕ್ಷಣ ವಂಚಿತರೇ!

ಮಹಿಳಾ ಸುರಕ್ಷತೆ ಎಂಬ ಮರೀಚಿಕೆ

ಮಹಿಳಾ ಸುರಕ್ಷತೆ ಎಂಬ ಮರೀಚಿಕೆ

ಮಹಿಳೆಯರಿಗೆ ಭದ್ರತೆ ನೀಡುವ ವಿಷಯವಂತೂ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಡು ಹಗಲಲ್ಲೇ ನಂಬಿದ್ದ ಸ್ನೇಹಿತರೇ ಅತ್ಯಾಚಾರದಂಥ ಹೇಯ ಕೃತ್ಯದಲ್ಲಿ ಪಾಲಗೊಳ್ಳುತ್ತಿರುವಾಗ ಸುರಕ್ಷತೆ ಎಂಬುದು ಮರೀಚಿಕೆಯಲ್ಲದೆ ಇನ್ನೇನು?

ಮಹಿಳೆಯರಿಗೆ ಸಲಾಂ!

ಮಹಿಳೆಯರಿಗೆ ಸಲಾಂ!

ಇಷ್ಟೆಲ್ಲ ಅಡ್ಡಿ ಆತಂಕಗಳನ್ನೂ ಮೀರಿ, ತಮ್ಮದೇ ಆದ ನೆಲೆ ಕಂಡುಕೊಳ್ಳುವ, ಹೋರಾಡುತ್ತಲೇ ಶಿಕ್ಷಣ ಪಡೆದು, ಕುಟುಂಬದ ವಿರೋಧದ ಹೊರತಾಗಿಯೂ ಉದ್ಯೋಗ ಹಿಡಿದು, ಸ್ವಾವಲಂಬಿಯಾಗಿ ಇಡಿ ಸಮಾಜಕ್ಕೂ ಆದರ್ಶವಾಗುವ ನೂರಾರು ಹೆಣ್ಣು ಮಕ್ಕಳು ನಮ್ಮ ಮುಂದಿದ್ದಾರೆ. ಅವರೆಲ್ಲರಿಂದಾಗಿಯೇ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಕ್ಕೆ ಅರ್ಥಬಂದಿದೆ.

English summary
Whole world was celebrating international girl child day on Oct 11th. The day is an attempt to eradicate girl child death, child marriage, rape, illiteracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X