ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಗೆ ಪಾಕಿಸ್ತಾನ ಕಾರಣ; ಭಾರತ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 29: "ವಿಶ್ವಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಅದು ಪ್ರೋತ್ಸಾಹಿಸುವ ರೀತಿ ಬಗ್ಗೆ ತಿಳಿದಿದೆ. ಏನನ್ನು ಸಹ ಅವರು ಮುಚ್ಚಿಡಲು ಸಾಧ್ಯವಿಲ್ಲ" ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದರು.

ಪುಲ್ವಾಮಾದಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಸಚಿವ ಫವಾದ್ ಚೌಧರಿ ಸಂಸತ್‌ನ ಚರ್ಚೆಯೊಂದರ ಸಂದರ್ಭದಲ್ಲಿ ನೀಡಿದ ಹೇಳಿಕೆ ಬುಧವಾರ ವೈರಲ್ ಆಗುತ್ತಿದೆ. ಭಾರತ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದೆ.

ಪುಲ್ವಾಮಾ ಉಗ್ರರ ದಾಳಿ ನಡೆಸಿದ್ದು ನಾವೇ: ಬಹಿರಂಗವಾಗಿ ಒಪ್ಪಿಕೊಂಡ ಪಾಕ್ಪುಲ್ವಾಮಾ ಉಗ್ರರ ದಾಳಿ ನಡೆಸಿದ್ದು ನಾವೇ: ಬಹಿರಂಗವಾಗಿ ಒಪ್ಪಿಕೊಂಡ ಪಾಕ್

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ್, "ಪಾಕಿಸ್ತಾನದ ಬಗ್ಗೆ ಉಗ್ರರನ್ನು ಅದು ಪ್ರೋತ್ಸಾಹಿಸುತ್ತಿರುವ ಬಗ್ಗೆ ಸತ್ಯ ಎಲ್ಲಾ ದೇಶಕ್ಕೂ ತಿಳಿದಿದೆ. ಉಗ್ರರಿಗೆ ದೇಶ ಆಶ್ರಯವನ್ನು ನೀಡುತ್ತಿದೆ" ಎಂದು ತಿಳಿಸಿದ್ದಾರೆ.

ಪುಲ್ವಾಮಾ ಮಾದರಿಯ ಮತ್ತೊಂದು ದಾಳಿ ತಡೆದ ಸೇನಾ ಪಡೆ: 52 ಕೆ.ಜಿ. ಸ್ಫೋಟಕ ವಶಪುಲ್ವಾಮಾ ಮಾದರಿಯ ಮತ್ತೊಂದು ದಾಳಿ ತಡೆದ ಸೇನಾ ಪಡೆ: 52 ಕೆ.ಜಿ. ಸ್ಫೋಟಕ ವಶ

Whole World Knows Truth About Pakistan Says MEA

"ಪುಲ್ವಮಾದಲ್ಲಿ ನಡೆದ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಲವಾರು ಸಾಕ್ಷ್ಯಗಳನ್ನು ನೀಡಿದೆ. ಆದರೆ, ಇದುವರೆಗೂ ಅವುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅನುರಾಗ್ ಶ್ರೀವಾಸ್ತವ್ ಆರೋಪಿಸಿದರು.

ಪುಲ್ವಾಮಾ ದಾಳಿಕೋರನಿಗೆ ರೊಟ್ಟಿ ತಟ್ಟಿ ಕೊಟ್ಟಿದ್ದಾಕೆ ಇವಳು! ಪುಲ್ವಾಮಾ ದಾಳಿಕೋರನಿಗೆ ರೊಟ್ಟಿ ತಟ್ಟಿ ಕೊಟ್ಟಿದ್ದಾಕೆ ಇವಳು!

2019ರ ಫೆಬ್ರವರಿ 14ರಂದು ಸಿಆರ್‌ಪಿಎಫ್ ಜವಾನರು ಸಂಚಾರ ನಡೆಸುತ್ತಿದ್ದ ಬಸ್‌ಗೆ ಸ್ಫೋಟಕ ತುಂಬಿದ್ದ ಕಾರನ್ನು ತಂದು ಡಿಕ್ಕಿ ಹೊಡೆಸಲಾಗಿತ್ತು. ಪುಲ್ವಮಾದಲ್ಲಿ ನಡೆದ ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ಸಂಸತ್‌ನ ಚರ್ಚೆ ಸಂದರ್ಭದಲ್ಲಿ ಮಾತನಾಡಿರುವ ಸಚಿವ ಫವಾದ್ ಚೌಧರಿ, "ಭಾರತಕ್ಕೆ ನಾವು ಅದರ ಮನೆಯಲ್ಲಿಯೇ ಹೊಡೆದೆವು. ಪುಲ್ವಾಮಾದಲ್ಲಿನ ನಮ್ಮ ಯಶಸ್ಸು ಇಮ್ರಾನ್ ಖಾನ್ ನೇತೃತ್ವದಲ್ಲಿ ಈ ರಾಷ್ಟ್ರ ಸಾಧಿಸಿದ ಯಶಸ್ಸಾಗಿದೆ" ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಫವಾದ್ ಚೌಧರಿ ಹೇಳಿಕೆ ಪಾಕ್ ಸಂಸತ್‌ನಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಬಳಿಕ ತಮ್ಮ ಹೇಳಿಕೆಯನ್ನು ಸಚಿವರು ಬದಲಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

English summary
Ministry of External Affairs spokesperson Anurag Srivastava said that, the whole world knows the truth about Pakistan and its role in supporting terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X