ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ, ಕ್ರಿಶ್ಚಿಯನ್ ಮತಾಂತರ: ಬಾಬಾ ರಾಮದೇವ್ ಗಂಭೀರ ಹೇಳಿಕೆ!

ತಮ್ಮ ಹೇಳಿಕೆಗಳ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುವ ಯೋಗ ಗುರು ಬಾಬಾ ರಾಮ್‌ದೇವ್ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

|
Google Oneindia Kannada News

ಬಾರ್ಮರ್ ಫೆಬ್ರವರಿ 3: ಇಡೀ ಜಗತ್ತನ್ನು ಬಲವಂತವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಸ್ಲಾಮಿಸ್ಟ್ ಮತ್ತು ಕ್ರಿಶ್ಚಿಯನ್ ಧರ್ಮ ಪ್ರಚಾರಕರನ್ನು ಗುರಿಯಾಗಿಸಿಕೊಂಡು ಯೋಗ ಗುರು ಬಾಬಾ ರಾಮ್‌ದೇವ್ ಟೀಕಿಸಿದ್ದಾರೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಗೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಹಿಂದೂ ಆಧ್ಯಾತ್ಮಿಕ ನಾಯಕ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಬಾಬಾ ರಾಮ್‌ದೇವ್ ಅವರು ಮಾತನಾಡಿದರು. ಈ ವೇಳೆ "ಯಾವುದೇ ಮುಸಲ್ಮಾನರನ್ನು ಕೇಳಿ ಅವರ ಧರ್ಮ ಏನು ಹೇಳುತ್ತದೆ? ಎಂದು. ಆಗ ಅವರು ನಿಮಗೆ ಉತ್ತರಿಸುತ್ತಾರೆ- '5 ಬಾರಿ ನಮಾಜ್ ಮಾಡುತ್ತೇವೆ. ನಂತರ ನಿಮಗೆ ಇಷ್ಟವಾದದ್ದನ್ನು ಮಾಡುತ್ತೇವೆ. ಅದು ಹಿಂದೂ ಮಹಿಳೆಯನ್ನು ಅಪಹರಿಸುವುದಾಗಲಿ ಅಥವಾ ಯಾವುದೇ ಪಾಪದ ಕೆಲಸವಾಗಲಿ' ಎಂದು ಅವರು ನಿಮಗೆ ಹೇಳುವರು'' ಎಂದರು.

ದೇವನಹಳ್ಳಿ: ಜ. 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ ಯೋಗ ಸ್ಪರ್ಧೆದೇವನಹಳ್ಳಿ: ಜ. 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ ಯೋಗ ಸ್ಪರ್ಧೆ

'ಅವರು ಇಸ್ಲಾಂನ ಅರ್ಥ ನಮಾಜ್ ಎಂದು ನಂಬುತ್ತಾರೆ. ನಮ್ಮ ಕೆಲವು ಮುಸ್ಲಿಂ ಸಹೋದರರು ಘೋರ ಅಪರಾಧಗಳನ್ನು ಮಾಡುತ್ತಾರೆ. ಆದರೆ ಅವರು ಎಂದಿಗೂ ನಮಾಜ್ ಮಾಡಲು ಮರೆಯುವುದಿಲ್ಲ. ಏಕೆಂದರೆ ಇದು ಅವರಿಗೆ ನಮಾಜ್ ಮಾಡಿ ಮತ್ತು ನಿಮಗೆ ಬೇಕಾದುದನ್ನು ಮಾಡಿ ಎಂದು ಅದು ಕಲಿಸುತ್ತದೆ' ಎಂದರು.

'ಜಗತ್ತು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ'

"ಅವರಲ್ಲಿ ಹಲವರು ಭಯೋತ್ಪಾದಕರಾದರು ಮತ್ತು ಕೆಲವರು ಕಠಿಣ ಅಪರಾಧಿಗಳಾಗಿದ್ದಾರೆ. ಆದರೆ ಅವರ್ಯಾರು ನಮಾಜ್ ಮಾಡಲು ಮರೆಯುವುದಿಲ್ಲ. ಸನಾತನ ಧರ್ಮವು ಈ ರೀತಿ ಕಾರ್ಯನಿರ್ವಹಿಸುವುದಿಲ್ಲ. ಕ್ರಿಶ್ಚಿಯನ್ನರು ಚರ್ಚ್‌ಗೆ ಹೋಗುತ್ತಾರೆ. ಮೇಣದಬತ್ತಿಗಳನ್ನು ಬೆಳಗಿಸುತ್ತಾರೆ ಮತ್ತು ಪಾಪಗಳನ್ನು ತೊಡೆದುಹಾಕಲು ಯೇಸುಕ್ರಿಸ್ತನ ವಿಗ್ರಹದ ಮುಂದೆ ನಿಲ್ಲುತ್ತಾರೆ' ಎಂದು ಬಾಬಾ ರಾಮ್‌ದೇವ್ ಹೇಳಿದರು.

ಬಾಬಾ ರಾಮ್‌ದೇವ್ ಮತ್ತಷ್ಟು ಹೇಳಿತ್ತಾ, "ಮುಸ್ಲಿಮರಿಗೆ ಸ್ವರ್ಗದ ಅರ್ಥ ಪೈಜಾಮಾಗಳನ್ನು ಧರಿಸುವುದು, ಮೀಸೆಗಳನ್ನು ತೆಗೆಯುವುದು ಮತ್ತು ತಲೆಬುರುಡೆಯ ಕ್ಯಾಪ್ (ಟೋಪಿ) ಧರಿಸುವುದಕ್ಕೆ ಸೀಮಿತವಾಗಿದೆ. ಇಸ್ಲಾಂ ಅಥವಾ ಖುರಾನ್ ಇದನ್ನು ಮಾಡಲು ಕೇಳುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ ಅದನ್ನು ಅವರು ಮಾಡುತ್ತಿದ್ದಾರೆ'' ಎಂದರು.

''ಅವರು ಸ್ವರ್ಗದಲ್ಲಿ (ಜನ್ನತ್) ಒಂದು ಸ್ಥಳವನ್ನು ಭದ್ರಪಡಿಸುತ್ತಾರೆ ಎಂದು ಅವರು ನಂಬುತ್ತಾರೆ. ಅಲ್ಲಿ ಅವರು ಮದ್ಯಪಾನ ಮಾಡುವ ಕನ್ಯೆಯರನ್ನು (ಹೂರ್ಸ್) ಭೇಟಿಯಾಗುತ್ತಾರೆ. ಅಂತಹ ಸ್ವರ್ಗದ ಪರಿಕಲ್ಪನೆಯು ನರಕದಲ್ಲಿ ವಾಸಿಸುವುದಕ್ಕಿಂತ ಕೆಟ್ಟದಾಗಿದೆ'' ಎಂದು ಸೂಚಿಸಿದರು.

"ಇದು ಹುಚ್ಚುತನ ... ಅವರು ಇತರ ಜನರನ್ನು ಇಸ್ಲಾಂಗೆ ಪರಿವರ್ತಿಸುವಲ್ಲಿ ನಿರತರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಶಿಲುಬೆಯ ಕ್ರಾಸ್ ಧರಿಸಿರ ಪ್ರಾರ್ಥನೆಗಳನ್ನು ಓದುತ್ತಾರೆ. ಇಂತಹ ಒಂದು ಗುಂಪು ಇಡೀ ಜಗತ್ತನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತ್ತು ಇನ್ನೊಂದು ಗುಂಪು ಇಸ್ಲಾಂಗೆ ಪರಿವರ್ತಿಸಲು ಬಯಸುತ್ತದೆ" ಎಂದು ಅವರು ಕಿಡಿಕಾರಿದ್ದಾರೆ.

ಭಾರತದಲ್ಲಿ ಧಾರ್ಮಿಕ ಭಯೋತ್ಪಾದನೆ ಹೆಚ್ಚಳ- ಬಾಬಾ ರಾಮದೇವ್

ಭಾರತದಲ್ಲಿ ಧಾರ್ಮಿಕ ಭಯೋತ್ಪಾದನೆ ಹೆಚ್ಚಳ- ಬಾಬಾ ರಾಮದೇವ್

ಭಾರತದಲ್ಲಿ ಧಾರ್ಮಿಕ ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಕಳೆದ ತಿಂಗಳು ಬಾಬಾ ರಾಮದೇವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸನಾತನ ಸಂಪ್ರದಾಯದ "ಮಹಾಪುರುಷರ" ಅನುಚಿತ ಟೀಕೆಗಳನ್ನು ಮಾಡುವ ಮತ್ತು ಚಾರಿತ್ರ್ಯಹತ್ಯೆ ಮಾಡುವವರೆಲ್ಲರೂ "ಭಾರತದ ವಿರೋಧಿಗಳು" ಮತ್ತು ಅವರನ್ನು ವಿರೋಧಿಸಬೇಕು ಎಂದು ಅವರು ಹೇಳಿದರು.

"ಸನಾತನ ಸಂಪ್ರದಾಯಕ್ಕೆ ಸಂಬಂಧಿಸಿದ ಮಹಾನ್ ಪುರುಷರ ವಿರುದ್ಧ ಅವಮಾನಕರ ಟೀಕೆಗಳನ್ನು ಅನೇಕ ಜನರು ರವಾನಿಸುತ್ತಿದ್ದಾರೆ. ಅಂತವರೆಲ್ಲರೂ ಭಾರತ ವಿರೋಧಿಗಳು ಮತ್ತು ದೇಶಕ್ಕೆ ಅಗೌರವವನ್ನು ತೋರಿಸುವ ಮೂಲಕ ಅಂತರರಾಷ್ಟ್ರೀಯ ಶಕ್ತಿಗಳ ಆದೇಶದಂತೆ ವರ್ತಿಸುತ್ತಿದ್ದಾರೆ. ಅವರನ್ನು ಬಲವಾಗಿ ವಿರೋಧಿಸಬೇಕು" ಎಂದು ರಾಮ್‌ದೇವ್ ಸುದ್ದಿಗಾರರಿಗೆ ತಿಳಿಸಿದರು. ಭಯೋತ್ಪಾದನೆಯನ್ನು ಧರ್ಮದೊಂದಿಗೆ ಜೋಡಿಸಿದ್ದಕ್ಕಾಗಿ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಅವರ ಕೋಪಕ್ಕೆ ಕಾರಣವಾಯಿತು.

ಬಾಬಾ ರಾಮದೇವ್‌ ವಿವಾವಾತ್ಮಕ ಹೇಳಿಕೆ

''ಮಹಿಳೆಯರು ಸೀರೆ ಉಟ್ಟರೆ ಸುಂದರ, ಸಲ್ವಾರ್‌ ಕಮೀಜ್‌ ಧರಿಸಿದರೆ ಅತಿ ಸುಂದರ, ಏನೂ ಧರಿಸದಿದ್ದರೆ ಇನ್ನೂ ಚೆಂದ ಕಾಣಿಸ್ತಾರೆ,'' ಎಂದು ಹೇಳುವ ಮೂಲಕ ಯೋಗ ಗುರು ಬಾಬಾ ರಾಮದೇವ್‌ ವಿವಾದ ಹುಟ್ಟುಹಾಕಿದ್ದರು.

ಈ ಹಿಂದೆ ಠಾಣೆಯಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಬಾಬಾ ರಾಮದೇವ್‌ ಪಾಲ್ಗೊಂಡಿದ್ದರು. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಪತ್ನಿ ಅಮೃತಾ, ಸಿಎಂ ಏಕನಾಥ್ ಶಿಂಧೆ ಅವರ ಮಗ ಮತ್ತು ಸಂಸದ ಶ್ರೀಕಾಂತ್ ಶಿಂಧೆ ಕೂಡ ಉಪಸ್ಥಿತರಿದ್ದರು. ಇವರ ಹಾಜರಿ ಗಣಿಸದೇ ತಮ್ಮ ಎಂದಿನ ಲಘು ಧಾಟಿಯಲ್ಲಿ ಮಾತು ಶುರು ಮಾಡಿದ ಯೋಗ ಗುರು, ''ಮಹಿಳೆಯರು ಯಾವ ದಿರಸು ಧರಿಸಿದರೂ ಲಕ್ಷಣವಾಗಿ ಕಾಣುತ್ತಾರೆ. ಬಟ್ಟೆ ಅವರಿಗೆ ಭೂಷಣ. ಆದರೆ ಬಟ್ಟೆ ಧರಿಸದೇ ನನ್ನಂತೆ ಇದ್ದರೂ ಸುಂದರವಾಗಿಯೇ ಕಾಣುತ್ತಾರೆ,'' ಎಂದು ಹೇಳಿದ್ದರು. ಈ ಹೇಳಿಕೆಯಿಂದ ರಾಮದೇವ್ ಆಕ್ರೋಶಕ್ಕೆ ಗುರಿಯಾಗಿದ್ದರು.

ಮಹಿಳಾ ಸಂಘಟನೆಗಳಿಂದ ಆಕ್ರೋಶ ವ್ಯಕ್ತ

ಮಹಿಳಾ ಸಂಘಟನೆಗಳಿಂದ ಆಕ್ರೋಶ ವ್ಯಕ್ತ

ಬಾಬಾ ರಾಮದೇವ್‌ ಆಡಿದ ಮಾತಿನ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದ್ದು, ಮಹಿಳಾ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಹೇಳಿಕೆಯ ವಿಡಿಯೊ ಹಂಚಿಕೊಂಡಿರುವ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌, ''ಮಹಿಳೆಯರ ಬಗ್ಗೆ ಹಗುರ ಹೇಳಿಕೆ ನೀಡಿರುವ ರಾಮದೇವ್‌ ಕೂಡಲೇ ಕ್ಷಮೆ ಕೇಳಬೇಕು,'' ಎಂದು ಆಗ್ರಹಿಸಿದ್ದರು. ಬಾಬಾ ರಾಮದೇವ್‌ ಹೇಳಿಕೆ ಖಂಡಿಸಿರುವ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಸಂಜಯ್‌ ರಾವತ್‌, ''ವೇದಿಕೆಯಲ್ಲಿದ್ದ ಡಿಸಿಎಂ ಪತ್ನಿ ಅಮೃತಾ ಫಡ್ನವಿಸ್‌ ಏಕೆ ಮೌನವಾಗಿದ್ದರು,'' ಎಂದು ಪ್ರಶ್ನಿಸಿದ್ದರು.

English summary
Yoga guru Baba Ramdev criticizes Islamist and Christian propagandists saying that the whole world is being forced to convert to Islam and Christianity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X