ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಲ್ಮೀಕಿ ಜಯಂತಿ: ಟ್ವಿಟ್ಟರ್ ನಲ್ಲಿ ಶುಭಹಾರೈಸಿದ ಗಣ್ಯರು

|
Google Oneindia Kannada News

ರತ್ನಾಕರನೆಂಬ ದರೋಡೆಕೋರನಿಗೆ ನಾರದರಿಂದ ಜ್ಞಾನೋದಯವಾಗಿ ನಂತರ ವಾಲ್ಮೀಕಯಾಗಿ ಬದಲಾದ ಕತೆ ಜನಜನಿತ. ಮಹಾಕವಿ ವಾಲ್ಮೀಕಿ ನಂತರದಲ್ಲಿ ರಾಮಾಯಣವೆಂಬ ಸಾರ್ವಕಾಲಿಕ ಮಹಾಗ್ರಂಥವನ್ನು ಬರೆದು ಮಹರ್ಷಿಯಾದರು.

ವಾಲ್ಮೀಕಿ ವಿರಚಿತ ರಾಮಾಯಣ ಅಂದಿಗೂ-ಇಂದಿಗೂ ಪ್ರಸ್ತುತ ವಾಲ್ಮೀಕಿ ವಿರಚಿತ ರಾಮಾಯಣ ಅಂದಿಗೂ-ಇಂದಿಗೂ ಪ್ರಸ್ತುತ

ನಾರದರ ಮಾತಿನಂತೆ ರಾಮನಾಮಸ್ಮರಣೆ ಮಾಡುತ್ತ ಬಹುವರ್ಷ ಜಪ ಮಾಡಿದ್ದರಿಂದ ಅವರ ಸುತ್ತ ಹುತ್ತ ಬೆಳೆದು, ಸಂಸ್ಕೃತದ ವಲ್ಮೀಕ(ಹುತ್ತ)ವೇ ವಾಲ್ಮೀಕಿ ಎಂಬ ಹೆಸರನ್ನು ನೀಡಿತು ಎಂಬ ಮಾತೂ ಪ್ರಚಲಿತವಾಗಿದೆ.

ಎಲ್ಲ ಜಿಲ್ಲಾ, ತಾಲ್ಲೂಕುಗಳಲ್ಲಿ ವಾಲ್ಮೀಕಿ ಜಯಂತಿ ಎಲ್ಲ ಜಿಲ್ಲಾ, ತಾಲ್ಲೂಕುಗಳಲ್ಲಿ ವಾಲ್ಮೀಕಿ ಜಯಂತಿ

ಇಂದು(ಅ.5) ವಾಲ್ಮೀಕಿ ಜಯಂತಿ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶದ ಹಲವು ಗಣ್ಯರು ಮಹರ್ಷಿ ವಾಲ್ಮೀಕಿ ಜಯಂತಿಗೆ ಶುಭಕೋರಿದ್ದಾರೆ. ಅತ್ಯುನ್ನತ ಮಹಾಕಾವ್ಯ ನೀಡಿದ ಮಹಾನ್ ಕವಿಗೆ ನಮನಸಲ್ಲಿಸಿದ್ದಾರೆ.

ತಲೆಮಾರುಗಳಿಗೆ ಮಾರ್ಗದರ್ಶಿ

ವಾಲ್ಮೀಕಿ ಜಯಂತಿಯ ಶುಭಾಶಯಗಳು. ಅವರೊಬ್ಬ ಮಹಾನ್ ಋಷಿ ಮತ್ತು ಪರಿಣಿತ ಸಾಹಿತಿ. ಅವರ ಆದರ್ಶಶಗಳು ಮತ್ತು ಕೆಲಸಗಳು ಹಲವು ತಲೆಮಾರುಗಳಿಗೆ ಮಾರ್ಗದರ್ಶಿಯಾಗಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಶುಭಾಶಯಗಳು. ಈ ಶುಭ ದಿನದಂದು ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ತಲೆಬಾಗಿ ವಂದಿಸುವೆ

ರಾಮಾಯಣದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಅವರಿಗೆ ನಾನು ತಲೆಬಾಗಿ ವಂದಿಸುತ್ತೇನೆ. ದೇವರ ಕಾರ್ಯದಲ್ಲೇ ಸಾರ್ಥಕತೆ ಹುಡುಕಿದ ಅವರು ಮಾನವೀಯತೆಯ ದಾರಿದೀಪವೂ ಹೌದು ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಹೇಳಿದ್ದಾರೆ.

ಅವರ ಆದರ್ಶ ಪಾಲಿಸೋಣ

ವಾಲ್ಮೀಕಿ ಜಯಂತಿಯ ಶುಭಾಶಯಗಳು. ಈ ಸಂಭ್ರಮದ ದಿನದಂದು ಮಹಾನ್ ಋಷಿಯ ಆದರ್ಶಗಳನ್ನು ಅನುಸರಿಸುವ ಸಂಕಲ್ಪ ಮಾಡೋಣ ಎಂದು ಶಿರೋಮಣಿ ಸಕಾಲಿ ದಳದ ಅಧ್ಯಕ್ಷ ಸುಖ್ಬಿರ್ ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದಾರೆ.

English summary
Whole India is celebrating great sage Valmiki's birth anniversary on Oct 5th. Many celebrities wish to the creator of Ramayana, a holy book of Hindus for his birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X