ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ರಫ್ತು ಪುನರಾರಂಭಕ್ಕೆ ಭಾರತದೊಂದಿಗೆ WHO ಕಾರ್ಯನಿರ್ವಹಣೆ

|
Google Oneindia Kannada News

ನವದೆಹಲಿ, ಜೂನ್ 19: ಕೊರೊನಾ ಲಸಿಕೆಗಳಿಗಿರುವ ತುರ್ತು ಬೇಡಿಕೆ ಪೂರೈಸಲು, ಲಸಿಕೆಗಳ ರಫ್ತನ್ನು ಪುನರಾರಂಭಿಸಲು ಆಸ್ಟ್ರಾಜೆನೆಕಾ, ಸೆರಂ ಇನ್‌ಸ್ಟಿಟ್ಯೂಟ್‌ ಹಾಗೂ ಭಾರತ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

"ಲಸಿಕೆಯ ಅಭಾವದಿಂದಾಗಿ ಎರಡನೇ ಡೋಸ್ ಲಸಿಕೆ ನೀಡುವುದನ್ನು ಹಲವು ದೇಶಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಅಂಥ ದೇಶಗಳಿಗೆ ತುರ್ತಾಗಿ ಲಸಿಕೆಗಳನ್ನು ಪೂರೈಸಬೇಕಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಡಾಮನ್ ಗೆಬ್ರೆಯೇಸಸ್ ತಿಳಿಸಿದ್ದಾರೆ.

 ಪದೇ ಪದೇ ಭಾರತದ ಕೋವ್ಯಾಕ್ಸಿನ್ ಅನುಮೋದನೆಗೆ ಹಿನ್ನಡೆ; WHO ಜೊತೆ ಸಭೆ ಪದೇ ಪದೇ ಭಾರತದ ಕೋವ್ಯಾಕ್ಸಿನ್ ಅನುಮೋದನೆಗೆ ಹಿನ್ನಡೆ; WHO ಜೊತೆ ಸಭೆ

"ಸುಮಾರು 30-40 ದೇಶಗಳಲ್ಲಿ ಆಸ್ಟ್ರಾಜೆನೆಕಾ ಲಸಿಕೆಗಳ ಎರಡನೇ ಡೋಸ್ ನೀಡಬೇಕಾಗಿದೆ. ಆದರೆ ಲಸಿಕೆ ಕೊರತೆ ಎದುರಾಗಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಲಸಿಕೆಗಳ ರಫ್ತನ್ನು ಶೀಘ್ರವೇ ಆರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಸೆರಂ ಇನ್‌ಸ್ಟಿಟ್ಯೂಟ್ ಜೊತೆ ಸೇರಿ ಕೆಲಸ ನಿರ್ವಹಿಸುತ್ತಿದ್ದೇವೆ," ಎಂದು WHO ಹಿರಿಯ ಸಲಹೆಗಾರ ಬ್ರೂಸ್ ಐಲ್ವರ್ಡ್ ಹೇಳಿದ್ದಾರೆ.

ಲಸಿಕೆ ರಫ್ತು ಪುನರಾರಂಭಕ್ಕೆ ಭಾರತದೊಂದಿಗೆ WHO ಕಾರ್ಯನಿರ್ವಹಣೆ

ಕೊರೊನಾ ಎರಡನೇ ಅಲೆಯಲ್ಲಿ ಭಾರತದಿಂದ ಲಸಿಕೆಗಳನ್ನು ಹೆಚ್ಚಿನ ಮಟ್ಟದಲ್ಲಿ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಲ್ಯಾಟಿನ್ ಅಮೆರಿಕ, ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಸೇರಿದಂತೆ ಹಲವು ದೇಶಗಳಿಗೆ ಸಮಸ್ಯೆಯಾಯಿತು. ನೇಪಾಳ, ಶ್ರೀಲಂಕಾದಂಥ ದೇಶಗಳಿಗೆ ಹೆಚ್ಚಿನ ಮಟ್ಟದಲ್ಲಿ ತೊಂದರೆಯಾಯಿತು. ಇದೀಗ ಮತ್ತೊಮ್ಮೆ ಲಸಿಕೆಗಳ ರಫ್ತು ಆರಂಭಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

English summary
WHO is "urgently" trying to work with AstraZeneca, Serum Institute of India (SII) as well as the Indian government to restart shipments of COVID-19 vaccines to countries,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X