• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ, ಚೀನಾಕ್ಕೆ ಯುದ್ಧವಾದ್ರೆ ಗೆಲ್ಲೋದ್ಯಾರು?: ಒಂದು ವಿಶ್ಲೇಷಣೆ

|

ನವದೆಹಲಿ, ಜುಲೈ 8: ಸಿಕ್ಕಿಂ ಗಡಿ ಭಾಗದಲ್ಲಿರುವ ವಿವಾದಿತ ಪ್ರದೇಶವಾದ ಡೊಕ್ಲಾಮ್ ನಲ್ಲಿ ಈಗಾಗಲೇ ಚೀನಾ ಹಾಗೂ ಭಾರತ ಸೇನೆಗಳು ಜಮಾವಣೆಗೊಂಡು ಪರಸ್ಪರ ಸಡ್ಡು ಹೊಡೆದಿರುವುದು ಕಳೆದೊಂದು ವಾರದಿಂದಲೂ ಚರ್ಚೆಯಲ್ಲಿದೆ.

ಆನಂತರ, ಹಲವಾರು ಬಾರಿ ಚೀನಾ, ಭಾರತಕ್ಕೆ ಯುದ್ಧದ ಎಚ್ಚರಿಕೆ ನೀಡಿದೆ. ಇತಿಹಾಸದಿಂದ ಭಾರತ ಪಾಠ ಕಲಿಯಬೇಕು ಎನ್ನುತ್ತಿದೆ. ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಚೀನಾದ ಆಕ್ರಮಣಕ್ಕೆ ಭಾರತ ಶರಣಾಗಿದ್ದನ್ನು ಅದು ಇಲ್ಲಿ ಮತ್ತೆ ಕೆದಕಿದೆ.

ಪಾಕಿಸ್ತಾನ-ಚೀನಾ ಒಟ್ಟಿಗೆ ದಾಳಿ ಮಾಡಿದರೂ ನಾವು ಯುದ್ಧಕ್ಕೆ ಸಿದ್ಧ: ರಾವತ್

ಶುಕ್ರವಾರವಷ್ಟೇ, ಜರ್ಮನಿಯಲ್ಲಿ ನಡೆದ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರು ಪರಸ್ಪರ ಕೈ ಕುಲುಕಿದ್ದರೂ, ಇತ್ತ ಗಡಿ ಭಾಗದಲ್ಲಿ ಮಾತ್ರ ಪರಸ್ಪರ ಕಾಲೆಳೆಯುವ ಕೆಲಸ ಮುಂದುವರಿದಿದೆ.

ಬ್ರಿಕ್ಸ್ ಗಾಗಿ ಬಂದ ಮೋದಿ, ಜಿನ್ ಪಿಂಗ್ ಮೇಲೆ ಎಲ್ಲರ ಕಣ್ಣು

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಒಂದು ವೇಳೆ ಭಾರತ ಹಾಗೂ ಚೀನಾ ನಡುವೆ ಯುದ್ಧವಾದರೆ, ಯಾರು ಗೆಲ್ಲುತ್ತಾರೆ? ಉಭಯ ದೇಶಗಳ ಸೇನೆಯ ಬಲಾಬಲ ಹೇಗಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

(ಪೂರಕ ಮಾಹಿತಿ: ಗ್ಲೋಬಲ್ ಫೈರ್ ಪವರ್, ಇಂಡಿಯಾ ಸ್ಪೆಂಡ್)

ಸೈನಿಕರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಸರಿಸಮಾನ

ಸೈನಿಕರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಸರಿಸಮಾನ

ಮೊದಲಿಗೆ ಭೂ ಸೇನೆಯನ್ನು ಪರಿಗಣಿಸೋಣ. ಇದರಲ್ಲಿ ಹೆಚ್ಚು ಕಡಿಮೆ ಚೀನಾ ಹಾಗೂ ಭಾರತ ಪರಸ್ಪರ ಸಮಬಲ ಹೊಂದಿವೆ. ಆದರೆ, ಚೀನಾದ್ದೇ ಒಂದು ಗುಂಜಿ ಜಾಸ್ತಿ ಸೈನಿಕ ಬಲ. ಭಾರತದ ಒಟ್ಟಾರೆ ಯೋಧರ ಸಂಖ್ಯೆ 1.3 ಮಿಲಿಯನ್ ಇದ್ದರೆ, ಚೀನಾದ ಸೇನಾ ಬಲ 1.6ರಷ್ಟಿದೆ.

ಕೆಲವಾರು ಶಸ್ತ್ರಗಳಲ್ಲಿ ಭಾರತ ಹಿಂದೆ

ಕೆಲವಾರು ಶಸ್ತ್ರಗಳಲ್ಲಿ ಭಾರತ ಹಿಂದೆ

ಭಾರತೀಯ ಸೇನೆಯಲ್ಲಿ ಶಸ್ತ್ರ ಸಜ್ಜಿತ ಕದನ ವಾಹನಗಳ ಸಂಖ್ಯೆ 6,704 ಇದ್ದರೆ, ಚೀನಾ ಸೇನೆಯಲ್ಲಿ ಇವುಗಳ ಸಂಖ್ಯೆ 4,788 ಇವೆ. ಇನ್ನು ಸೆಲ್ಫ್ ಪ್ರೊಪೆಲ್ಲ್ ಡ್ ಆರ್ಟಿಲೆರಿಗಳ ಸಂಖ್ಯೆಯಲ್ಲಿ ಭಾರತ ಸಾಕಷ್ಟು ಹಿಂದಿದೆ. ಇವುಗಳ ಸಂಖ್ಯೆ ಭಾರತದಲ್ಲಿ 290 ಇದ್ದರೆ, ಚೀನಾದಲ್ಲಿ 1,710 ಇವೆ. ಇನ್ನು, ಟವರ್ಡ್ ಆರ್ಟಿಲರಿ ವಿಚಾರದಲ್ಲಿ ಭಾರತ 7,414ರಷ್ಟು ಇವನ್ನು ಹೊಂದಿದ್ದರೆ, ಚೀನಾ 6,246ರಷ್ಟನ್ನು ಹೊಂದಿದೆ.

ಫೈಟರ್ ಜೆಟ್ ಗಳ ಸಂಖ್ಯೆ ನಮ್ಮಲ್ಲಿ ಕಡಿಮೆ

ಫೈಟರ್ ಜೆಟ್ ಗಳ ಸಂಖ್ಯೆ ನಮ್ಮಲ್ಲಿ ಕಡಿಮೆ

ಇನ್ನು, ವಾಯುಸೇನೆಯ ವಿಭಾಗದಲ್ಲಿ ಚೀನಾ ಭಾರತಕ್ಕಿಂತ ಸಾಕಷ್ಟು ಶಕ್ತಿಶಾಲಿಯಾಗಿದೆ. ಆ ದೇಶ 1,271 ಯುದ್ಧ ವಿಮಾನಗಳನ್ನು ಹೊಂದಿದ್ದರೆ, ಭಾರತವು ಕೇವಲ 6,76 ಯುದ್ಧ ವಿಮಾನಗಳನ್ನು ಹೊಂದಿದೆ.

ಭಾರತದಲ್ಲಿ ಹೆಲಿಕಾಪ್ಟರ್ ಗಳ ಸಂಖ್ಯೆ ಕಡಿಮೆ

ಭಾರತದಲ್ಲಿ ಹೆಲಿಕಾಪ್ಟರ್ ಗಳ ಸಂಖ್ಯೆ ಕಡಿಮೆ

ಚೀನಾವು 1,100 ಹೆಲಿಕಾಪ್ಟರ್ ಗಳನ್ನು ಹೊಂದಿದೆ. ಇವುಗಳಲ್ಲಿ 206 ಹೆಲಿಕಾಪ್ಟರ್ ಗಳು ದಾಳಿ ನಡೆಸಬಲ್ಲ ಹೆಲಿಕಾಪ್ಟರ್ ಗಳಾಗಿವೆ. ಇನ್ನು, ಭಾರತೀಯ ಸೇನೆಯಲ್ಲಿ ಇರುವ ಹೆಲಿಕಾಪ್ಟರ್ ಗಳ ಸಂಖ್ಯೆಯು 666 ಇದ್ದು, ಇವುಗಳಲ್ಲಿ ದಾಳಿ ನಡೆಸಬಲ್ಲ ಹೆಲಿಕಾಪ್ಟರ್ ಗಳ ಸಂಖ್ಯೆ ಕೇವಲ 16 ಮಾತ್ರ.

ಭಾರತೀಯ ನೌಕಾಪಡೆಯ ಶಕ್ತಿ ನಿಖರ ಮಾಹಿತಿಯಿಲ್ಲ

ಭಾರತೀಯ ನೌಕಾಪಡೆಯ ಶಕ್ತಿ ನಿಖರ ಮಾಹಿತಿಯಿಲ್ಲ

ನೌಕಾಪಡೆಯ ವಿಚಾರಕ್ಕೆ ಬಂದರೆ, ಚೀನಾದ ಬಳಿ ಯುದ್ಧ ನೌಕೆಗಳ ಸಂಖ್ಯೆ 283. ಆದರೆ, ಭಾರತದಲ್ಲಿ ಇವುಗಳ ಸಂಖ್ಯೆಯು ನಿಖರವಾಗಿ ತಿಳಿದಿಲ್ಲವಾದರೂ, ಚೀನಾಕ್ಕೆ ಹೋಲಿಸಿದರೆ ಇವುಗಳ ಸಂಖ್ಯೆ ಕಡಿಮೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ, ಐಎನ್ಎಸ್ ವಿಕ್ರಾಂತ್ ಗೆ ಪೂರ್ಣ ವಿರಾಮ ನೀಡಿದ ಭಾರತ ಸರ್ಕಾರ, ಪರಮಾಣು ಶಕ್ತಿ ಚಾಲಿತ ಐಎನ್ಎಸ್ ವಿಶಾಲ್ ತಯಾರಿಕೆ ಆರಂಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Amidst the stand off between India and China, it would be interesting to note which country has a stronger military. While several sources indicate that war is not an option for both countries as the economies will collapse, the stand off is expected to continue for some more time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more