ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ, ಸ್ವ ಪಕ್ಷದ ನಾಯಕರಿಗೆ ಸಿನ್ಹಾ ಪ್ರಶ್ನೆ!

|
Google Oneindia Kannada News

Recommended Video

ಟ್ವಿಟ್ಟರ್ ನಲ್ಲಿ ಪಕ್ಷದ ನಾಯಕರಿಗೆ ಸಿನ್ಹಾ ಪ್ರಶ್ನೆ! | Oneindia Kannada

ನವದೆಹಲಿ, ಡಿಸೆಂಬರ್. 13 : ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ತಮ್ಮ ಪಕ್ಷದ ನಾಯಕರ ವಿರುದ್ಧವೇ ಮತ್ತೆ ಸರಣಿ ಟ್ವಿಟ್‌ ಗಳನ್ನು ಮಾಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಕೋಮುವಾದ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಸಿನ್ಹಾ ಟಾಂಗ್ಕೋಮುವಾದ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಸಿನ್ಹಾ ಟಾಂಗ್

'ಗುಜರಾತ್ ಚುನಾವಣೆಯಲ್ಲಿ ಗೆದ್ದರೆ ಎಲ್ಲರಿಗೂ ಕ್ರೆಡಿಟ್ ಬರುತ್ತದೆ. ಆದರೆ, ಗೆಲ್ಲಲು ಸಾಧ್ಯವಾಗದಿದ್ದರೆ ಯಾರು ಹೊಣೆ?' ಎಂದು ಅವರು ಬುಧವಾರ ಟ್ವಿಟ್ ಮಾಡಿದ್ದಾರೆ.

shatrughan sinha

ಗುಜರಾತ್ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸರಣಿ ಪ್ರಶ್ನೆಗಳನ್ನು ಶತ್ರುಘ್ನ ಸಿನ್ಹಾ ಕೇಳಿದ್ದಾರೆ.

'ಗುಜರಾತ್‌ನಲ್ಲಿ ಕುಳಿತು ಕ್ರೆಡಿಟ್ ಪಡೆಯಲು ಪ್ರತ್ನ ನಡೆಸುತ್ತಿರುವ ಸರ್ಕಾರವನ್ನು, ಸಚಿವರನ್ನು ಮನೆಗೆ (ದೆಹಲಿಗೆ) ಕರೆ ತರಲು ಸಮಯ ಬಂದಿದೆ' ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ.

ಡಿ.14ರ ಗುರುವಾರ ಗುಜರಾತ್‌ನಲ್ಲಿ 2ನೇ ಹಂತದ ಚುನಾವಣೆಯ ಮತದಾನ ನಡೆಯಲಿದೆ. 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.22 ಕೋಟಿ ಮತದಾರರು ಮತ ಚಲಾವಣೆ ಮಾಡುವ ಹಕ್ಕು ಹೊಂದಿದ್ದಾರೆ.

ಒನ್ಇಂಡಿಯಾದಲ್ಲಿ ಗುಜರಾತ್, ಹಿಮಾಚಲ ಫಲಿತಾಂಶ ಡಿ.18ರಂದು ಲೈವ್ಒನ್ಇಂಡಿಯಾದಲ್ಲಿ ಗುಜರಾತ್, ಹಿಮಾಚಲ ಫಲಿತಾಂಶ ಡಿ.18ರಂದು ಲೈವ್

182 ಸದಸ್ಯ ಬಲದ ವಿಧಾನಸಭೆಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆದಿತ್ತು. 89 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 66.75ರಷ್ಟು ಮತದಾನ ನಡೆದಿತ್ತು. ಡಿ.18ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

English summary
Actor turned politician Shatrughan Sinha on Wednesday asked the one man show and two man army referring to Prime Minister of India Narendra Modi and BJP President Amit Shah to return to Delhi from Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X