ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್: ಕೊವ್ಯಾಕ್ಸಿನ್ ತುರ್ತು ಬಳಕೆ ಶಿಫಾರಸ್ಸಿಗೆ ಅವಸರವಿಲ್ಲ ಎಂದ WHO

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮೊದಲು ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಇದರಿಂದಾಗಿ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಸರಣಿ ಟ್ವೀಟ್‌ನಲ್ಲಿ, "ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಲ್ಲಿ ಅವಸರ ಮಾಡುವಂತಿಲ್ಲ. ಲಸಿಕೆ ತಯಾರಕರು ಎಷ್ಟು ಬೇಗನೆ ಅಗತ್ಯವಾದ ಡೇಟಾವನ್ನು ಒದಗಿಸಲು ಸಾಧ್ಯವಾಯಿತು ಎಂಬುದರ ಮೇಲೆ ಅದರ ತುರ್ತು ಬಳಕೆಯ ಪಟ್ಟಿಗೆ ಸೇರಿಸುವ ಕಾಲಮಿತಿಯು ನಿರ್ಧಾರವಾಗುತ್ತದೆ," ಎಂದು ತಿಳಿಸಿದೆ.

ಭಾರತದಲ್ಲಿ ಈಗಾಗಲೇ ವಿತರಣೆ ಆಗುತ್ತಿರುವ ಪ್ರಮುಖ ಕೊವಿಡ್-19 ಲಸಿಕೆಗಳಲ್ಲಿ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯೂ ಸಹ ಸೇರಿದೆ. ಜಾಗತಿಕ ಮಟ್ಟದಲ್ಲಿ ಈ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಡಬ್ಲ್ಯೂಹೆಚ್ಓ ನಿರ್ಧಾರದತ್ತ ಜಗತ್ತಿನ ಕಣ್ಣು ನೆಟ್ಟಿದೆ.

"ಲಸಿಕೆ ಪರಿಣಾಮಕಾರಿತ್ವದ ಪರೀಕ್ಷೆ ಅಗತ್ಯ"

"ಕೊರೊನಾವೈರಸ್ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಯಲ್ಲಿ ಕೋವಾಕ್ಸಿನ್‌ಗೆ ಅನುಮೋದನೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎಂದು ನಮಗೆ ತಿಳಿದಿದೆ, ಆದರೆ ನಾವು ಯಾವುದೇ ಕಾರಣಕ್ಕೂ ಅವಸರ ಮಾಡುವಂತಿಲ್ಲ. ತುರ್ತು ಬಳಕೆಗಾಗಿ ಉತ್ಪನ್ನವನ್ನು ಶಿಫಾರಸು ಮಾಡುವ ಮೊದಲು, ಅದರ ಪರಿಣಾಮಕಾರಿತ್ವ ಹಾಗೂ ಸುರಕ್ಷಿತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅದನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಬೇಕಿದೆ," ಎಂದು WHO ಹೇಳಿದೆ.

ಅಕ್ಟೋಬರ್ 19ರಂದು WHO ಗೆ ಮಾಹಿತಿ ಸಲ್ಲಿಕೆ?

ಅಕ್ಟೋಬರ್ 19ರಂದು WHO ಗೆ ಮಾಹಿತಿ ಸಲ್ಲಿಕೆ?

"ಭಾರತ್ ಬಯೋಟೆಕ್ ಸಂಸ್ಥೆಯು ಕೊವಾಕ್ಸಿನ್ ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒಗೆ ಹಂತ ಹಂತವಾಗಿ ದತ್ತಾಂಶವನ್ನು ಸಲ್ಲಿಸುತ್ತಿದ್ದಾರೆ. ಡಬ್ಲ್ಯುಎಚ್‌ಒ ತಜ್ಞರು ಈ ಡೇಟಾವನ್ನು ಪರಿಶೀಲಿಸಿದ್ದಾರೆ. WHO ಇಂದು ಕಂಪನಿಯಿಂದ ಒಂದು ಹೆಚ್ಚುವರಿ ಮಾಹಿತಿಯನ್ನು ನಿರೀಕ್ಷಿಸುತ್ತಿದೆ."

ಅಂಕಿ-ಅಂಶ ಸಲ್ಲಿಕೆ ನಂತರ ಅನುಮೋದನೆ ಪ್ರಕ್ರಿಯೆ

ಅಂಕಿ-ಅಂಶ ಸಲ್ಲಿಕೆ ನಂತರ ಅನುಮೋದನೆ ಪ್ರಕ್ರಿಯೆ

"ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಯ ಪಟ್ಟಿ ಪ್ರಕ್ರಿಯೆಯ ಸಮಯಾವಧಿಯು ಲಸಿಕೆಯ ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿತ್ವ ಬಗ್ಗೆ ಕಂಪನಿಯು ಸಲ್ಲಿಸುವ ದತ್ತಾಂಶ ಹಾಗೂ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಈ ಲಸಿಕೆಯು ಬಳಕೆಗೆ ಸಾಧ್ಯವಾಗುತ್ತದೆಯೇ ಇಲ್ಲವೇ ಎಂಬುದರ ಕುರಿತು ಕೇಳಿರುವ ಮಾಹಿತಿಗೆ ಸಂಸ್ಥೆಯು ಉತ್ತರಿಸಬೇಕಿದೆ. ಅದರ ಸೂಕ್ತತೆಯನ್ನು ಮೌಲ್ಯಮಾಪನ ಮಾಡಲು ಡಬ್ಲ್ಯುಎಚ್‌ಒಗೆ ಅಗತ್ಯವಿರುವ ಡೇಟಾವನ್ನು ಲಸಿಕೆ ಉತ್ಪಾದಿಸುವ ಕಂಪನಿಯು ಎಷ್ಟು ಬೇಗನೆ ಒದಗಿಸಲು ಸಾಧ್ಯವಿದೆ ಎಂಬುದರ ಮೇಲೆ ಶಿಫಾರಸ್ಸು ಪ್ರಕ್ರಿಯೆಯ ಸಮಯಾವಧಿಯು ಅವಲಂಬಿತವಾಗಿರುತ್ತದೆ.

WHO ತಾಂತ್ರಿಕ ಸಲಹಾ ಸಮಿತಿಯಿಂದ ನಿರ್ಧಾರ

WHO ತಾಂತ್ರಿಕ ಸಲಹಾ ಸಮಿತಿಯಿಂದ ನಿರ್ಧಾರ

"ವಿಶ್ವ ಆರೋಗ್ಯ ಸಂಸ್ಥೆಯು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಕಂಪನಿಯು ಒದಗಿಸಿದ ಉತ್ತರಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. WHO ಮತ್ತು ತಾಂತ್ರಿಕ ಸಲಹಾ ಸಮಿತಿಯು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರದಲ್ಲಿ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸಬೇಕೇ ಬೇಡವೇ ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕೊವ್ಯಾಕ್ಸಿನ್ ಲಸಿಕೆ ಅನುಮೋದನೆಗೆ WHO ಸಭೆ

ಕೊವ್ಯಾಕ್ಸಿನ್ ಲಸಿಕೆ ಅನುಮೋದನೆಗೆ WHO ಸಭೆ

"ಭಾರತ್ ಬಯೋಟೆಕ್ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ ಕೇಳಿದ ಎಲ್ಲ ಮಾಹಿತಿಯನ್ನು ಒದಗಿಸಿದೆ. ಮುಂದಿನ ಅಕ್ಟೋಬರ್ 26ರಂದು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ WHO ಸಭೆ ನಡೆಸಲಿದೆ. WHO ಜೊತೆಗೆ ಭಾರತ್ ಬಯೋಟೆಕ್ ಸಂಸ್ಥೆಯು ನಿಕಟ ಸಂಪರ್ಕದಲ್ಲಿದೆ. ನಮ್ಮ ಗುರಿ ತುರ್ತು ಬಳಕೆಗಾಗಿ ಲಸಿಕೆಗಳಿಗೆ ಅನುಮೋದಿಸುವುದು ಮತ್ತು ಎಲ್ಲೆಡೆ ಜನರಿಗೆ ಲಸಿಕೆ ದೊರೆಯುವಂತೆ ಮಾಡುವುದಾಗಿದೆ," ಎಂದು ಭಾನುವಾರವಷ್ಟೇ ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

English summary
World Health Organisation Waiting for more data to Recommend Covaxin Emergency Use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X