• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಸಾಂಪ್ರದಾಯಿಕ ಔಷಧಿ ಜಾಗತಿಕ ಕೇಂದ್ರ ಸ್ಥಾಪನೆಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ

|

ವಾಷಿಂಗ್ಟನ್, ನವೆಂಬರ್ 13: ಭಾರತದಲ್ಲಿ ಸಾಂಪ್ರದಾಯಿಕ ಔಷಧಿ ಕೇಂದ್ರವನ್ನು ಸ್ಥಾಪಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೊಮ್ ಮಾಹಿತಿ ನೀಡಿದ್ದಾರೆ.

ಜೈಪುರ ಹಾಗೂ ಜಾಮ್ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಆಯುರ್ವೇದ ಸಂಸ್ಥೆಗಳ ಕುರಿತು ಅವರು ಮಾತನಾಡಿದರು. ಭಾರತದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ.

ಕೊವಿಡ್ 19 ಲಸಿಕೆಯ ಕುರಿತು ಪ್ರಧಾನಿ ಮೋದಿಯ ಬದ್ಧತೆ: ವಿಶ್ವ ಆರೋಗ್ಯ ಸಂಸ್ಥೆಯಿಂದ ಮೆಚ್ಚುಗೆ

ನರೇಂದ್ರ ಮೋದಿಯವರು ದೇಶವನ್ನು ವಿಶ್ವದ ಔಷಧಾಲಯವಾಗಿ ಹೊರಹೊಮ್ಮಿಸಿದಂತೆಯೇ ವಿಶ್ವ ಆರೋಗ್ಯ ಸಂಸ್ಥೆಯುಜಾಗತಿಕ ಸ್ವಾಸ್ಥ್ಯದ ಕೇಂದ್ರವಾಗಲಿದೆ ಎಂದರು.

ಜೈಪುರ ಹಾಗೂ ಜಾಮ್ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಿದ್ಧವಾಗಿರುವ ಎರಡು ಆಯುರ್ವೇದ ಸಂಸ್ಥೆಗಳನ್ನು ಉದ್ಘಾಟಿಸಿದರು, ಅದೇ ಕಾರ್ಯಕ್ರಮದಲ್ಲಿ ಟೆಡ್ರೋಸ್ ಈ ವಿಷಯ ತಿಳಿಸಿದರು.

ಇನ್ನು ಕರ್ನಾಟಕದಲ್ಲಿ ಈಗಿರುವ ಜನೌಷಧಿ ಕೇಂದ್ರಗಳಲ್ಲಿ ಶೀಘ್ರ ಆಯುರ್ವೇದ ಔಷಧಗಳನ್ನು ದೊರೆಯುವಂತೆ ಮಾಡಲಾಗುವುದು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಆಯುರ್ವೇದವು ಭಾರತದ ಪರಂಪರೆಯಾಗಿದ್ದು, ಇದರ ವಿಸ್ತರಣೆ ಮಾಡುವುದರಿಂದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.

ಸಾಂಪ್ರದಾಯಿಕ ಔಷಧಿಗಳಿಗಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ, ಭಾರತ ಈ ದಿಕ್ಕಿನಲ್ಲಿ ಕೆಲಸ ಆರಂಭಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

English summary
The World Health Organisation announced on Friday that it will set up a Global Centre for Traditional Medicine in India, with Prime Minister Narendra Modi expressing confidence that just like the country has emerged as the ‘pharmacy of the world’, the WHO institution will become the centre for global wellness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X