ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ರೂಪಾಂತರ ಬೇರೆ ದೇಶದಲ್ಲೂ ಇರಬಹುದು: WHO

|
Google Oneindia Kannada News

ನವದೆಹಲಿ, ಡಿಸೆಂಬರ್ 22: ನಾವಲ್ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ವೈರಸ್‌ನ ಉಳಿದ ಸ್ವರೂಪಗಳನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇದು ಅನೇಕ ದೇಶಗಳಲ್ಲಿ ಈಗಾಗಲೇ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ರೂಪಾಂತರಿ ವೈರಸ್ ಶೇ 70ರಷ್ಟು ಹೆಚ್ಚು ಸೋಂಕು ಹರಡಬಲ್ಲದು ಎಂದು ಆರಂಭಿಕ ದತ್ತಾಂಶಗಳು ಹೇಳುತ್ತವೆ ಮತ್ತು ಹಾಲಿ ಇರುವ ಕೋವಿಡ್ ಲಸಿಕೆಗಳಲ್ಲಿ ಒಂದರ ಪ್ರತಿರಕ್ಷಣಾ ವ್ಯವಸ್ಥೆಯ ಸ್ಪಂದನೆ ಮೇಲೆ ಪರಿಣಾಮ ಬೀರಬಹುದು ಎಂಬ ಹೇಳಿಕೆಗಳ ಬಗ್ಗೆ ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 ಡಿಸೆಂಬರ್ 31ರವರೆಗೆ ಇಂಗ್ಲೆಂಡ್‌ನಿಂದ ಬರುವ ವಿಮಾನಗಳು ಸ್ಥಗಿತ: ಭಾರತಕ್ಕೆ ಬಂದಿಳಿದವರು ಕ್ವಾರಂಟೈನ್ ಡಿಸೆಂಬರ್ 31ರವರೆಗೆ ಇಂಗ್ಲೆಂಡ್‌ನಿಂದ ಬರುವ ವಿಮಾನಗಳು ಸ್ಥಗಿತ: ಭಾರತಕ್ಕೆ ಬಂದಿಳಿದವರು ಕ್ವಾರಂಟೈನ್

'ವಂಶವಾಹಿಗಳಿಗೆ ಸಂಬಂಧಿಸಿದಂತೆ ಅತಿ ಹೆಚ್ಚಿನ ಅಧ್ಯಯನಗಳು ನಡೆಯುವ ದೇಶಗಳಲ್ಲಿ ಬ್ರಿಟನ್ ಒಂದು. ಹೀಗಾಗಿ ಅಲ್ಲಿ ಸೂಕ್ತ ಸಮಯದಲ್ಲಿ ಈ ರೂಪಾಂತರಿ ವೈರಸ್‌ಅನ್ನು ಸಮೀಪದಿಂದ ಬೆನ್ನತ್ತಲು ಅವರಿಗೆ ಸಾಧ್ಯವಾಗುತ್ತಿದೆ. ಅವರ ದತ್ತಾಂಶಗಳನ್ನು ನೋಡಿದರೆ, ಇನ್ನಷ್ಟು ದೇಶಗಳು ಈಗಾಗಲೇ ತಮ್ಮಲ್ಲಿ ಇರಬಹುದಾದ ಈ ರೂಪಾಂತರವನ್ನು ಅಥವಾ ಇದಕ್ಕೆ ಸಂಬಂಧಿಸಿದ ರೂಪಾಂತರಗಳನ್ನು ಪತ್ತೆಹಚ್ಚಬಹುದು' ಎಂದು ಅವರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಮುಂದೆ ಓದಿ.

ಭಿನ್ನ ಮಾದರಿ ರೂಪಾಂತರ

ಭಿನ್ನ ಮಾದರಿ ರೂಪಾಂತರ

'ಈ ಹಿಂದೆಯೂ ಅನೇಕ ವೈರಸ್‌ಗಳು ರೂಪಾಂತರಗೊಂಡು ಬಳಿಕ ಬೆಳೆದಂತೆ ಪ್ರಾಬಲ್ಯ ಮೆರೆದಿದ್ದವು. ಇದು ಕೂಡ ಅದೇ ರೀತಿಯ ಭಿನ್ನ ಮಾದರಿಯಾಗಿರಬಹುದು. ಲಸಿಕೆಗೆ ತನ್ನ ಪ್ರತಿರಕ್ಷಣಾ ವ್ಯವಸ್ಥೆಯ ಸ್ಪಂದನೆಯನ್ನು ಬದಲಿಸಬಲ್ಲ ಸ್ಪೈಕ್ ಪ್ರೋಟೀನ್‌ನಲ್ಲಿನ ಕೆಲವು ರೂಪಾಂತರಗಳಂತೆ ಇದು ಇಲ್ಲದೆ ಇರುವ ಸಾಧ್ಯತೆ ಇದೆ' ಎಂದು ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.

ಹಲವು ವಾರ ಕಾಯಬೇಕು

ಹಲವು ವಾರ ಕಾಯಬೇಕು

'ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ B.1.1.7 ಎಂಬ ಹೆಸರಿನ ರೂಪಾಂತರಿಯನ್ನು ಅರ್ಥಮಾಡಿಕೊಳ್ಳಲು ಪ್ರಯೋಗಗಳು ನಡೆಯುತ್ತಿವೆ. ಆದರೆ ಇದರ ಫಲಿತಾಂಶ ಪಡೆದುಕೊಳ್ಳಲು ಹಲವು ವಾರಗಳವರೆಗೆ ಕಾಯಬೇಕಾಗುತ್ತದೆ' ಎಂದು ಹೇಳಿದ್ದಾರೆ.

'ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?'ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?

ಭಾರತದಿಂದ ಅಪಾರ ಡೇಟಾಬೇಸ್

ಭಾರತದಿಂದ ಅಪಾರ ಡೇಟಾಬೇಸ್

'ಪ್ರಸ್ತುತ ನಾವು ಅದರ ಪ್ರಾಥಮಿಕ ರಚನೆಯ ಅನುಕ್ರಮವನ್ನು ತಿಳಿದುಕೊಳ್ಳುವ ಮತ್ತಷ್ಟು ಪ್ರಯೋಗಗಳನ್ನು ನಡೆಸುವಂತೆ ದೇಶಗಳನ್ನು ಉತ್ತೇಜಿಸುತ್ತಿದ್ದೇವೆ. ಭಾರತವು ಕೂಡ ವಂಶವಾಹಿ ಅನುಕ್ರಮ ಅಧ್ಯಯನದಲ್ಲಿ ಸಾಕಷ್ಟು ಸಾಮರ್ಥ್ಯ ಹೊಂದಿದೆ. ಇದು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಬಹಳ ಮುಖ್ಯ ಅಂಶಗಳಲ್ಲಿ ಒಂದು. ಈಗಾಗಲೇ ಭಾರತ ಸುಮಾರು 3,00,000 ಅನುಕ್ರಮದಷ್ಟು ಜಾಗತಿಕ ಡೇಟಾಬೇಸ್‌ಗಳನ್ನು ಒದಗಿಸಿದೆ' ಎಂದು ಮಾಹಿತಿ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ಕೊರೊನಾ ವೈರಸ್‌ ಮಾರಣಾಂತಿಕವಲ್ಲ: ವಿವೇಕ್ ಮೂರ್ತಿಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ಕೊರೊನಾ ವೈರಸ್‌ ಮಾರಣಾಂತಿಕವಲ್ಲ: ವಿವೇಕ್ ಮೂರ್ತಿ

ಕ್ರಮಗಳ ಜಾರಿ ಅಗತ್ಯ

ಕ್ರಮಗಳ ಜಾರಿ ಅಗತ್ಯ

'ಈ ರೂಪಾಂತರಿ ವೈರಸ್‌ಗಳ ಹರಡುವಿಕೆಯನ್ನು ತಡೆಯಲು ಮತ್ತು ನಿಯಂತ್ರಿಸಲು ಹಾಲಿ ಇರುವ ಕ್ರಮಗಳನ್ನು ಎಲ್ಲ ದೇಶಗಳೂ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಪರೀಕ್ಷೆ, ಸಂಪರ್ಕ ಪತ್ತೆ ಮತ್ತು ಪಾಸಿಟಿವ್ ಪ್ರಕರಣಗಳ ಐಸೋಲೇಷನ್ ಮುಂತಾದ ಕ್ರಮಗಳು ಅತ್ಯಗತ್ಯವಾಗಿದೆ' ಎಂದು ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.

English summary
WHO chief scientist Dr Soumya Swaminathan said, a mutant strain of coronavirus may already be present in many nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X