• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2ಜಿ ಸ್ಪೆಕ್ಟ್ರಂ: ಎಲ್ಲಾ ಆರೋಪಿಗಳು ಖುಲಾಸೆ, ಯಾರು, ಏನು ಹೇಳಿದರು?

|
   2ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು : ಯಾರು ಏನ್ ಹೇಳ್ತಾರೆ? | Oneindia Kannada

   ನವದೆಹಲಿ, ಡಿಸೆಂಬರ್ 21: 2014ರಲ್ಲಿ ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ನಡೆದಿದ್ದ 30 ಸಾವಿರ ಕೋಟಿ ರು. 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪು ಹೊರ ಬಿದ್ದಿದೆ.

   2ಜಿ ಸ್ಪೆಕ್ಟ್ರಂ ಹಗರಣ: ಎಲ್ಲಾ ಆರೋಪಿಗಳು ಖುಲಾಸೆ

   ಮಾಜಿ ಸಚಿವ ಎ.ರಾಜಾ, ಕರಣಾನಿಧಿ ಅವರ ಪುತ್ರಿ ಕನ್ನಿಮೊಳಿ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಖುಲಾಸೆಗೊಳಿಸಿ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ಗುರುವಾರ ಮಹತ್ವದ ಆದೇಶ ಹೊಡಿಸಿದ್ದಾರೆ.

   2ಜಿ ಸ್ಪೆಕ್ಟ್ರಂ, ಏನಿದು ಹಗರಣ? ಇಲ್ಲಿದೆ ಟೈಮ್ ಲೈನ್

   ಹರಣವನ್ನು ಸಾಬೀತುಪಡಿಸಲು ಸಿಬಿಐ ಮತ್ತು ಇಡಿ ವಿಫಲವಾಗಿದೆ. ಇದರಿಂದ ಈ ಆರೋಪವನ್ನು ಕೋರ್ಟ್ ತಳ್ಳಿ ಹಾಕಿದೆ. ಇದರಿಂದ ಈ ಹಗರಣದ ತನಿಖೆ ನಡೆಸಿದ್ದ ಸಿಬಿಐ ಹಾಗೂ ಇಡಿಗೆ ತೀವ್ರ ಮುಖಭಂಗವಾಗಿದೆ.

   2ಜಿ ಹಗರಣ : 'ಸುಳ್ಳು ವರದಿ ನೀಡಿದ ವಿನೋದ್ ರೈ ಕ್ಷಮೆಯಾಚಿಸಲಿ'

   ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಇನ್ನು ಈ ಬಹುಕೋಟಿ ಹಗರಣದಲ್ಲಿ ಅಂತಿಮ ತೀರ್ಪಿನ ಬಗ್ಗೆ ಯಾರು ಏನು ಹೇಳಿದರು ಎನ್ನುವುದನ್ನು ಮುಂದೆ ಓದಿ.

   2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!

   ಕಾಂಗ್ರೆಸ್ ರಾಜ್ಯಸಬಾ ಸದಸ್ಯ ಬಿ.ಕೆ ಹರಿಪ್ರಸಾದ್

   ಕಾಂಗ್ರೆಸ್ ರಾಜ್ಯಸಬಾ ಸದಸ್ಯ ಬಿ.ಕೆ ಹರಿಪ್ರಸಾದ್

   ಬಿಜೆಪಿಯ ಸುಳ್ಳು ಪ್ರಚಾರ ಬಯಲಾಗಿದೆ. ಬಿಜೆಪಿಯವರು ವಿನಾಕಾರಣ ಮನಮೋಹನ್ ಸಿಂಗ್ ಅವರನ್ನು ದೂರುತ್ತಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಮನಮೋಹನ್ ಸಿಂಗ್ ಅವರ ಬಳಿ ಕ್ಷಮೆ ಕೇಳಬೇಳು ಎಂದು ಕಾಂಗ್ರೆಸ್ ರಾಜ್ಯಸಬಾ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದರು.

   ಸಮಾಜಿಕ ಹೋರಾಟಗಾರ ಅಣ್ಣಾ ಹಜಾರೆ

   ಸಮಾಜಿಕ ಹೋರಾಟಗಾರ ಅಣ್ಣಾ ಹಜಾರೆ

   ಕೇಂದ್ರ ಸರ್ಕಾರ ಈ ಹಗರಣದ ಬಗ್ಗೆ ಪುರಾವೆಗಳನ್ನು ಹೊಂದಿದ್ದರೇ ಅವುಗಳನ್ನು ಉನ್ನತ ನ್ಯಾಯಾಲಯಕ್ಕೆ ಹೋಗಿ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರತಿಕ್ರಿಯಿಸಿದರು.

    ಮಾಜಿ ಕೇಂದ್ರ ಸಚಿವ ಶಶಿತರೂರ್

   ಮಾಜಿ ಕೇಂದ್ರ ಸಚಿವ ಶಶಿತರೂರ್

   ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪುನ್ನು ಒಪ್ಪುತ್ತೇವೆ. ಈ ತೀರ್ಪು ಸತ್ಯಕ್ಕೆ ಜಯ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಶಶಿತರೂರ್ ಅಭಿಪ್ರಾಯಪಟ್ಟರು.

   ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ

   ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ

   ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಒಪ್ಪುತ್ತೇನೆ.ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮಾಜಿ ಕೇಂದ್ರ್ ಸಚಿವ ಪಿ. ಚಿದಂಬರಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

   ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

   ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

   ಕಾಂಗ್ರೆಸ್ ಮುಖಂಡರು ಈ ತೀರ್ಪನ್ನು ಕೆಲವು ವಿಧದ ಗೌರವಾರ್ಥವಾಗಿ ಪರಿಗಣಿಸಿದ್ದಾರೆ. ಮತ್ತು ಅದು ಒಂದು ಪ್ರಾಮಾಣಿಕ ನೀತಿ ಎಂದು ಪ್ರಮಾಣೀಕರಣವನ್ನು ನೀಡುತ್ತಿದೆ. ತೀರ್ಪು ಕಾಂಗ್ರೆಸ್ ಗೆ ನೀಡಿದ ಸರ್ಟಿಫಿಕೇಟ್ ಅಲ್ಲ. ಸ್ಪೆಕ್ಟ್ರಂ ಹಂಚಿಕೆ ಮಾಡಿದ್ದ ನೀತಿ, ನಿಯಮಗಳು ಸರಿ ಇಲ್ಲ. ಮೇಲ್ಮನವಿ ಸಲ್ಲಿಸುವ ಬಗ್ಗೆ ತನಿಖಾ ತಂಡಗಳು ನಿರ್ಧರಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

   ಡಿಎಂಕೆ ಮುಖ್ಯಸ್ಥ ಕರುಣಾನಿಧಿ

   ಡಿಎಂಕೆ ಮುಖ್ಯಸ್ಥ ಕರುಣಾನಿಧಿ

   ಇದು ಅನೀತಿಗಾದ ಸೋಲು, ನೀತಿ ನ್ಯಾಯದ ಗೆಲುವು ಎಂದು ಈ ತೀರ್ಪಿನ ಬಗ್ಗೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪತ್ರದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು.

   English summary
   The Delhi CBI special court 2g verdict released today, all the accused have been acquitted. Who said what about this.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X