ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿನಂದನ್ ತಾಯ್ನಾಡಿಗೆ: ಯಾರು ಏನು ಹೇಳಿದರು?

|
Google Oneindia Kannada News

Recommended Video

Surgical Strike 2: ಅಭಿನಂದನ್ ತಾಯ್ನಾಡಿಗೆ: ಯಾರು ಏನು ಹೇಳಿದರು? | Oneindia Kannada

ಬೆಂಗಳೂರು, ಫೆಬ್ರವರಿ 01: ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಾಯುಸೇನೆಯ ಧೀರ ವಿಂಗ್ ಕಮಾಂಡರ್ ಅಭಿನಂದನ್ ಅವರು ಭಾರತಕ್ಕೆ ವಾಪಸ್ಸಾಗಿರುವುದು ದೇಶಕ್ಕೆ ಸಂತಸ ತಂದಿದೆ.

ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಭಾರತದ ಜನ ಭಾವುಕ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನ್ ಅವರ ವಾಪಸ್ಸಾತಿಗೆ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದೆ.

ಅಭಿನಂದನ್ ಬಿಡುಗಡೆಗೆ ಸಿಧು ಕಾರಣ ಎಂದ ಕೇರಳ ಮಾಜಿ ಸಿಎಂಅಭಿನಂದನ್ ಬಿಡುಗಡೆಗೆ ಸಿಧು ಕಾರಣ ಎಂದ ಕೇರಳ ಮಾಜಿ ಸಿಎಂ

ಪಕ್ಷಬೇಧವನ್ನು ಮರೆತು ಸರ್ವರೂ ಸಹ ಅಭಿನಂದನ್ ಅವರ ವಾಪಸ್ಸಾತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್, ಅರುಣ್ ಜೇಟ್ಲಿ, ಸರ್ವರೂ ಸಹ ಅಭಿನಂದನ್ ವಾಪಸ್ಸಾತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಮರಳಿ ಸ್ವಾಗತ, ವಂದೇ ಮಾತರಂ: ಮೋದಿ

ಅಭಿನಂದನ್ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಭಾರತಕ್ಕೆ ಮರಳಿ ಸ್ವಾಗತ ಅಭಿನಂದನ್, ನೀವು ತೋರಿದ ಧೈರ್ಯಕ್ಕೆ ದೇಶ ಹೆಮ್ಮೆ ಪಡುತ್ತದೆ, ನಮ್ಮ ಸೇನೆಯು 130 ಕೋಟಿ ಭಾರತೀಯರಿಗೆ ಆದರ್ಶ, ವಂದೇ ಮಾತರಂ ಎಂದು ಟ್ವೀಟ್ ಮಾಡಿದ್ದಾರೆ.

'ನಿಮ್ಮ ಧೈರ್ಯ, ಸಮತೋಲನ ಎಲ್ಲರಿಗೂ ಮಾದರಿ'

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, 'ನಿಮ್ಮ ಧೈರ್ಯ, ಸಮತೋಲಿತ ವರ್ತನೆ, ಅಲ್ಲಿ ತೋರಿದ ಘನತೆ ಹೆಮ್ಮೆ ಪಡುವಂತೆ ಮಾಡಿವೆ, ನಿಮಗೆ ಮತ್ತೆ ಸ್ವಾಗತ ಮತ್ತು ಪ್ರೀತಿ' ಎಂದಿದ್ದಾರೆ.

ಭಾವುಕ ಕ್ಷಣಗಳು, ಜಯಘೋಷದ ಮಧ್ಯೆ ಭಾರತಕ್ಕೆ ವಾಪಸ್ ಆದ ಅಭಿನಂದನ್ಭಾವುಕ ಕ್ಷಣಗಳು, ಜಯಘೋಷದ ಮಧ್ಯೆ ಭಾರತಕ್ಕೆ ವಾಪಸ್ ಆದ ಅಭಿನಂದನ್

ನಿರ್ಮಲಾ ಸೀತಾರಾಮನ್ ಟ್ವೀಟ್

'ವಿಂಗ್ ಕಮಾಂಡರ್ ಅಭಿನಂದನ್ ನಿಮ್ಮ ಬಗ್ಗೆ ಹೆಮ್ಮೆ ಇದೆ, ನಿಮ್ಮ ಶೌರ್ಯ ಮತ್ತು ದಿಟ್ಟತನವನ್ನು ಇಡೀಯ ದೇಶ ಕೊಂಡಾಡುತ್ತಿದೆ. ನಿಮ್ಮ ಶಾಂತಚಿತ್ತತೆ ನಿಮ್ಮ ಮುಖದಲ್ಲಿ ಕಾಣುತ್ತಿತ್ತು, ನೀವು ಭಾರತದ ಯುವಕರಿಗೆ ಸ್ಪೂರ್ಥಿ, ವಂದೇ ಮಾತರಂ' ಎಂದು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

ಭಾರತವೇ ಸಂಭ್ರಮಿಸುತ್ತಿದೆ: ಜೇಟ್ಲಿ

ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿ, ನೀವು ವಾಪಸ್ ಬಂದಿರುವುದನ್ನು ಇಡೀಯ ಭಾರತವೇ ಸಂಭ್ರಮಿಸುತ್ತಿದೆ. ನಿಮ್ಮ ಶೌರ್ಯ, ಸಮಚಿತ್ತತೆಗೆ ನಾನು ವಂದಿಸುತ್ತೇನೆ' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ? ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?

'ನೀವು ಮತ್ತೆ ಶೌರ್ಯ, ಉತ್ಸಾಹದಿಂದ ಕೆಲಸ ಮಾಡುವಂತಾಗಲಿ'

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿ, ಪ್ರೀತಿಯ ಅಭಿನಂದನ್ ಅವರೇ, ನಿಮ್ಮ ಶೌರ್ಯವನ್ನು ಇಡೀಯ ದೇಶ ಮೆಚ್ಚಿಕೊಂಡಿದೆ. ನೀವು ಮತ್ತೆ ಅದೇ ಶೌರ್ಯ, ಸಾಹಸ, ಉತ್ಸಾಹದಿಂದ ಭಾರತೀಯ ವಾಯುಸೇನೆಯ ಜೊತೆಗೆ ಕೆಲಸ ಮಾಡುವಂತಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.

'ಅಭಿನಂದನ್ ಬಿಡುಗಡೆಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗಿಲ್ಲ''ಅಭಿನಂದನ್ ಬಿಡುಗಡೆಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗಿಲ್ಲ'

English summary
Wing commander Abhinandan released by Pakistan army today. Narendra Modi and many other leaders tweeted about it and express their happiness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X