ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು, ಲಡಾಖ್ ಅನ್ನು ಪ್ರತ್ಯೇಕವಾಗಿ ಗುರುತಿಸಿದ WHO: ಸ್ಪಷ್ಟನೆ

|
Google Oneindia Kannada News

ನವದೆಹಲಿ, ಫೆಬ್ರವರಿ 4: ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ ಭಾರತದ ನಕ್ಷೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗಳನ್ನು ಬೇರೆ ಬಣ್ಣಗಳಲ್ಲಿ ಗುರುತಿಸಿರುವುದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭೂಪಟಗಳ ವಿಚಾರದಲ್ಲಿ ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದಾಗಿ ಡಬ್ಲ್ಯೂಎಚ್‌ಒ ಪ್ರತಿಕ್ರಿಯೆ ನೀಡಿತ್ತು.

ಕಳೆದ ತಿಂಗಳು ದೇಶದಲ್ಲಿನ ಕೋವಿಡ್ ಸನ್ನಿವೇಶದ ಮಾಹಿತಿ ಒದಗಿಸುವ ಸಂಖ್ಯೆಗಳ ಪಟ್ಟಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಭೂಪಟದ ಮೂಲಕ ನೀಡಿತ್ತು. ಭಾರತದ ಉಳಿದ ಭಾಗ ತಿಳಿ ನೀಲಿ ಬಣ್ಣದಲ್ಲಿದ್ದರೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ದೇಶಗಳೆಂಬಂತೆ ಬೂದು ಬಣ್ಣದಲ್ಲಿ ಗುರುತಿಸಲಾಗಿದೆ. ವಿವಾದಾತ್ಮಕ ಗಡಿ ಪ್ರದೇಶ ಅಕ್ಸೈ ಚಿನ್ ಅನ್ನು ಬೂದು ಬಣ್ಣ ಹಾಗೂ ನೀಲಿ ಗೆರೆಗಳಿಂದ ತೋರಿಸಲಾಗಿದೆ. ಚೀನಾದ ಭಾಗವನ್ನು ಕೂಡ ಅದೇ ರೀತಿ ಚಿತ್ರಿಸಲಾಗಿತ್ತು. ಇದಕ್ಕೆ ಭಾರತದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಜಮ್ಮು & ಕಾಶ್ಮೀರ ಭಾರತದ ಭಾಗವಲ್ಲ ಎಂದು ತೋರಿಸಿದ ಸೌದಿ ಅರೇಬಿಯಾ: ಭಾರತದ ಆಕ್ಷೇಪಜಮ್ಮು & ಕಾಶ್ಮೀರ ಭಾರತದ ಭಾಗವಲ್ಲ ಎಂದು ತೋರಿಸಿದ ಸೌದಿ ಅರೇಬಿಯಾ: ಭಾರತದ ಆಕ್ಷೇಪ

ಈ ಭೂಪಟದ ವಿರುದ್ಧ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ವಿಶ್ವಸಂಸ್ಥೆಗೆ ಖಾರವಾದ ಪತ್ರ ಬರೆದಿತ್ತು. ಹೀಗಾಗಿ ಡಬ್ಲ್ಯೂಎಚ್‌ಒ ಇದೀಗ ತನ್ನ ಪೋರ್ಟಲ್‌ನಲ್ಲಿ ವಿವರಣೆ ಪ್ರಕಟಿಸಿದೆ.

WHO Puts Desclaimer On Website Over Incorrect Map Of India

'ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಭಾರತದ ಭೂಪಟವನ್ನು ತಪ್ಪಾಗಿ ಚಿತ್ರಿಸಿದ್ದರ ವಿರುದ್ಧ ಉನ್ನತ ಮಟ್ಟದಲ್ಲಿ ಸೇರಿದಂತೆ ಡಬ್ಲ್ಯೂಎಚ್‌ಒಗೆ ಕಠಿಣವಾದ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಜಿನೀವಾದಲ್ಲಿನ ಭಾರತದ ಕಾಯಂ ಯೋಜನೆಗೆ ಡಬ್ಲ್ಯೂಎಚ್‌ಒ ಮಾಹಿತಿ ನೀಡಿದ್ದು, ಅದಕ್ಕೆ ವಿವರಣೆಯನ್ನು ಪ್ರಕಟಿಸಿದೆ' ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.

ಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ

'ಈ ಭೂಪಟದ ಚಿತ್ರಣಗಳು ಯಾವುದೇ ದೇಶ, ಪ್ರದೇಶ ಅಥವಾ ಭಾಗದ ಕಾನೂನಾತ್ಮಕ ಮಾನ್ಯತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯಗಳನ್ನು ದಾಖಲಿಸುವುದಿಲ್ಲ. ನಕ್ಷೆಯಲ್ಲಿನ ಚುಕ್ಕೆ ಗುರುತುಗಳು ಅಂದಾಜು ಗಡಿ ಭಾಗಗಳನ್ನು ತೋರಿಸುತ್ತವೆ. ಅದಕ್ಕೆ ಸಂಪೂರ್ಣ ಒಪ್ಪಿಗೆ ಇಲ್ಲದೆ ಇರಬಹುದು' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ ಎಂಬುದಾಗಿ ಮುರಳೀಧರನ್ ಟ್ವೀಟ್ ಮಾಡಿದ್ದಾರೆ.

English summary
The government said WHO has put a desclaimer on its website after India raised strongly over incorrect map.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X