ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಂತ ಕಿರಿಯ ವಯಸ್ಸಿಗೆ ಕಾಂಗ್ರೆಸ್ ಚುಕ್ಕಾಣಿ ಹಿಡಿದವರು ಯಾರು?

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 17:ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರು ನವದೆಹಲಿಯಲ್ಲಿ ಶನಿವಾರದಂದು ಅಧಿಕಾರ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿಯವರು ತಮ್ಮ ಪುತ್ರ ರಾಹುಲ್ ಗಾಂಧಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ಸಿನ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದವರು ಯಾರು? ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

19 ವರ್ಷಗಳ ಕಾಲ ಕಾಂಗ್ರೆಸ್ ಅನ್ನು ಮುನ್ನಡೆಸಿದ್ದ 70 ವರ್ಷ ವಯಸ್ಸಿನ ಸೋನಿಯಾ ಗಾಂಧಿ, 47 ವರ್ಷದ ತಮ್ಮ ಪುತ್ರ ಮತ್ತು ಇಷ್ಟು ದಿನ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಲ್ಲಿದ್ದ ರಾಹುಲ್ ಗಾಂಧಿಯವರಿಗೆ ಪ್ರಮಾಣಪತ್ರ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಮೌಲಾನಾ ಅಬ್ದುಲ್ ಅಜಾದ್ ಅವರು ಗಾಂಧಿ ತತ್ತ್ವ ಪಾಲಿಸುತ್ತಾ ಸ್ವದೇಶಿ, ಸ್ವರಾಜ್ ಘೋಷಣೆಗೆ ಬದ್ಧರಾಗಿ ಸ್ವಾತಂತ್ರ್ಯ ಪೂರ್ವ 1923ರಲ್ಲಿ 35 ವರ್ಷ ವಯಸ್ಸಿಗೆ ಮೌಲಾನಾ ಸಯ್ಯಿದ್ ಅಬ್ದುಲ್ ಗುಲಾಂ ಮುಹಿಯುದ್ದೀನ್ ಅಹ್ಮದ್ ಅಜಾದ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. 1923ರ ದೆಹಲಿ ಅಧಿವೇಶನದ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು. ಸ್ವಾತಂತ್ರ್ಯಾ ನಂತರ ಆಝಾದ್ ಭಾರತದ ಮೊಟ್ಟಮೊದಲ ಶಿಕ್ಷಣ ಸಚಿವರಾದರು.

ಆದರೆ, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅಧ್ಯಕ್ಷರಾದವರ ಪೈಕಿ ರಾಹುಲ್ ಗಾಂಧಿ ಅವರ ಅಪ್ಪ ರಾಜೀವ್ ಗಾಂಧಿ ಅವರೇ ಅತ್ಯಂತ ಕಿರಿಯ ವಯಸ್ಸಿಗೆ ದೊಡ್ಡ ಜವಾಬ್ದಾರಿ ಹೊತ್ತುಕೊಂಡವರಾಗಿದ್ದಾರೆ.

Who is the Youngest Congess President?
English summary
Who is the Youngest Conrgess President?: Maulana Sayyid Abul Kalam Ghulam Muhiyuddin Ahmed Azad was elected at the age of 35. While Rahul Gandhi formally took over Yesterday(Dec 16,2017) aged 47.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X