ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಸಂಸ್ಥೆಯಿಂದ ಭಾರತೀಯ ಮೇಜರ್ ಸುಮನ್ ಗವಾನಿಗೆ ಪ್ರತಿಷ್ಠಿತ ಪ್ರಶಸ್ತಿ.!

|
Google Oneindia Kannada News

ನವದೆಹಲಿ, ಮೇ 27: ಯುನೈಟೆಡ್ ನೇಷನ್ಸ್ ಮಿಷನ್ ಇನ್ ಸೌತ್ ಸುಡಾನ್ (UNMISS) ನಲ್ಲಿ ಸೇವೆ ಸಲ್ಲಿಸಿರುವ ಭಾರತೀಯ ಸೇನಾಧಿಕಾರಿ ಮತ್ತು ಶಾಂತಿಪಾಲಕಿ ಮೇಜರ್ ಸುಮನ್ ಗವಾನಿ ರವರ ಹಿರಿಮೆಗೆ ಹೊಸ ಗರಿ ಲಭಿಸಿದೆ.

ವಿಶ್ವಸಂಸ್ಥೆಯ ಪ್ರತಿಷ್ಠಿತ 'ಮಿಲಿಟರಿ ಜೆಂಡರ್ ಅಡ್ವೋಕೇಟ್ ಆಫ್ ದಿ ಇಯರ್' (2019) ಪ್ರಶಸ್ತಿಗೆ ಮೇಜರ್ ಸುಮನ್ ಗವಾನಿ ಆಯ್ಕೆ ಆಗಿದ್ದಾರೆ.

UNMISS ನಲ್ಲಿನ ಶಾಂತಿಪಾಲನಾ ಪ್ರಯತ್ನಗಳಿಗೆ ಮೇಜರ್ ಸುಮನ್ ಗವಾನಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಸಲಿಗೆ, ವಿಶ್ವಸಂಸ್ಥೆಯ ಪ್ರತಿಷ್ಠಿತ 'ಮಿಲಿಟರಿ ಜೆಂಡರ್ ಅಡ್ವೋಕೇಟ್ ಆಫ್ ದಿ ಇಯರ್ ಅವಾರ್ಡ್' ಭಾರತೀಯರಿಗೆ ಸಿಗುತ್ತಿರುವುದು ಇದೇ ಮೊಟ್ಟ ಮೊದಲ ಬಾರಿಗೆ.

ಮೂವರು ಭಾರತೀಯ ಪತ್ರಕರ್ತರಿಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿಮೂವರು ಭಾರತೀಯ ಪತ್ರಕರ್ತರಿಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ

ಪ್ರಶಸ್ತಿಯನ್ನು ಸ್ವೀಕರಿಸಲು ಮೇಜರ್ ಸುಮನ್ ಗವಾನಿ ನ್ಯೂಯಾರ್ಕ್ ಗೆ ತೆರಳಬೇಕಿತ್ತು. ಆದರೆ, ಕೋವಿಡ್-19 ನಿಂದಾಗಿ ಅವರು ನ್ಯೂಯಾರ್ಕ್ ಗೆ ತೆರಳುತ್ತಿಲ್ಲ. ಬದಲಾಗಿ ಆನ್ ಲೈನ್ ಸಮಾರಂಭದ ಮೂಲಕ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಯಾರೀ ಸುಮನ್ ಗವಾನಿ.?

ಯಾರೀ ಸುಮನ್ ಗವಾನಿ.?

ಸುಮನ್ ಗವಾನಿ ಮೂಲತಃ ತೆಹ್ರಿ ಗರ್ವಾಲ್ ನ ಪೋಖರ್ ಗ್ರಾಮದವರು. ಆಕೆಯ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ. ಸುಮನ್ ಗವಾನಿ ಒಡಹುಟ್ಟಿದವರಲ್ಲಿ ಇಬ್ಬರು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತೀಯ ಸೇನೆಗೆ ಸುಮನ್ ಸೇರಿದ್ದು ಯಾವಾಗ.?

ಭಾರತೀಯ ಸೇನೆಗೆ ಸುಮನ್ ಸೇರಿದ್ದು ಯಾವಾಗ.?

ಉತ್ತರಕಾಶಿಯಲ್ಲಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸುಮನ್ ಗವಾನಿ, ಡೆಹ್ರಾಡೂನ್ ನ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಶಿಕ್ಷಣ ಪದವಿ ಪಡೆದಿದ್ದಾರೆ.


ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಪದವಿ ಪಡೆದ ಸುಮನ್ ಗವಾನಿ, 2011 ರಲ್ಲಿ ಭಾರತೀಯ ಸೇನೆ ಸೇರಿದರು. ಬಳಿಕ ಆರ್ಮಿ ಸಿಗ್ನಲ್ ಕಾರ್ಪ್ಸ್ ಗೆ ಕಾಲಿಟ್ಟರು. ಪ್ರಸ್ತುತ ಮೇಜರ್ ಸುಮನ್ ಗವಾನಿ ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾರ್ಗದರ್ಶನ ಮಾಡಿದ್ದ ಸುಮನ್ ಗವಾನಿ

ಮಾರ್ಗದರ್ಶನ ಮಾಡಿದ್ದ ಸುಮನ್ ಗವಾನಿ

ವಿಶ್ವ ಸಂಸ್ಥೆಯ ಮಿಷನ್ ಅಡಿಯಲ್ಲಿ ದಕ್ಷಿಣ ಸುಡಾನ್ ನಲ್ಲಿ ನಿಯೋಜಿಸಲ್ಪಟ್ಟಾಗ, 230 ಕ್ಕೂ ಹೆಚ್ಚು ಯು.ಎನ್ ಮಿಲಿಟರಿ ಅಬ್ಸರ್ವರ್ಸ್ ಗೆ ಮೇಜರ್ ಸುಮನ್ ಗವಾನಿ ಮಾರ್ಗದರ್ಶನ ಮಾಡಿದ್ದರು. ಇದನ್ನು ಗುರುತಿಸಿ ಸುಮನ್ ಗವಾನಿಗೆ ವಿಶ್ವ ಸಂಸ್ಥೆ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡುತ್ತಿದೆ.

'ಜಾಗತಿಕ ಅಸಾಧಾರಣ ಪ್ರತಿಭೆ ಪ್ರಶಸ್ತಿ' ಪಡೆದ ಬೆಂಗಳೂರು ಬಾಲಕಿ...'ಜಾಗತಿಕ ಅಸಾಧಾರಣ ಪ್ರತಿಭೆ ಪ್ರಶಸ್ತಿ' ಪಡೆದ ಬೆಂಗಳೂರು ಬಾಲಕಿ...

ಪ್ರಶಸ್ತಿ ಪ್ರದಾನ ಯಾವಾಗ.?

ಪ್ರಶಸ್ತಿ ಪ್ರದಾನ ಯಾವಾಗ.?

ಮೇಜರ್ ಸುಮನ್ ಗವಾನಿ ಜೊತೆಗೆ ಬ್ರೆಜಿಲ್ ನೌಕಾ ಅಧಿಕಾರಿ ಕಮಾಂಡರ್ ಕಾರ್ಲಾ ಮಾಂಟೆರೊ ಡಿ ಕ್ಯಾಸ್ಟ್ರೊ ಅರೌಜೊ ಕೂಡ 'ಮಿಲಿಟರಿ ಜೆಂಡರ್ ಅಡ್ವೋಕೇಟ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಶಾಂತಿಪಾಲಕರ ದಿನವಾದ ಮೇ 29 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

English summary
Indian Army Major Suman Gawani to be awarded by UN. Read more to know Who is Suman Gawani.?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X