• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಒಗಟಿನಲ್ಲಿರುವ 'ಶಕುನಿ' ಯಾರು?

|
   ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿರುವ ಶಕುನಿ ಯಾರು | ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?

   ನವದೆಹಲಿ, ಮೇ 21 : ಪಿಸಿ, ಬಿಸಿ, ಎಂಸಿ, ಸ್ಯಾಮ್ ಪಿಟ್ಸ್, ಮುನೀಮ್ ಆಸ್ಕರ್ ಅಂದ್ರೆ ಯಾರು ಗೊತ್ತಾ? ಹೋಗಲಿ, ಶಕುನಿ, ಬ್ಯಾಂಬಿನೋ ಅಂದ್ರೆ ಯಾರು? ಎಲ್ಲವೂ ಒಗಟು ಒಗಟಿನಂತಿದೆ ಎಂಬ ಚಿಂತೆ ಬೇಡ. ಸಾಧ್ಯವಾದರೆ ತಿಳಿದುಕೊಳ್ಳಿ, ಇಲ್ಲದಿದ್ದರೆ ಒಗಟಾಗಿಯೇ ಇರಲಿ ಬಿಡಿ.

   ಒಬ್ಬೊಬ್ಬರಿಗೂ ಒಂದೊಂದು ನಿಕ್ ನೇಮ್ ಇಟ್ಟು ಕರೆಯುವುದರಲ್ಲಿ, ತಮಾಷೆ ಮಾಡುವುದರಲ್ಲಿ, ಕಾಲೆ ಎಳೆಯುವುದರಲ್ಲಿ ನಿಸ್ಸೀಮರು ಡಾ. ಸುಬ್ರಮಣಿಯನ್ ಸ್ವಾಮಿಯವರು. ಇಂಥದೇ ಒಂದು ಒಗಟಿನಿಂದ ಕೂಡ ಟ್ವೀಟೊಂದರನ್ನು ಅವರು ಮಂಗಳವಾರ ಮಾಡಿದ್ದಾರೆ.

   ಲೋಕಸಭೆ ಚುನಾವಣೆಗೂ ಮುನ್ನ ಸುಬ್ರಮಣಿಯನ್ ಸ್ವಾಮಿ ಶಾಕಿಂಗ್ ಹೇಳಿಕೆ

   ಅದು ಹೀಗಿದೆ, "ಶಕುನಿಯಿಲ್ಲದೆ ಇದ್ದರೆ ನರೇಂದ್ರ ಮೋದಿಯವರು ಖಂಡಿತವಾಗಿ, ಟಿಡಿಕೆ, ಬ್ಯಾಂಬಿನೋ, ಮುನೀಮ್, ಆಸ್ಕರ್, ಸುಮನ್, ಸ್ಯಾಮ್ ಪಿಟ್ಸ್ ಮತ್ತು ಸಿಪಿ ಬಿಸಿ ಎಂಸಿ ಮತ್ತು ಜಿಎಸ್ಟಿಗಳನ್ನು ತಿಹಾರ್ ಜೈಲಿಗೆ ಕಳುಹಿಸುವಂಥ ಅನುಕೂಲಕರ ವಾತಾವರಣವನ್ನು ನನಗೆ ಸೃಷ್ಟಿಸಿ ಕೊಡುತ್ತಾರೆ. ಇನ್ನಷ್ಟು ಹೆಸರುಗಳು ಬೇಕೆ?" ಎಂದು ತಲೆಕೆಡಿಸಿಕೊಳ್ಳುವಂಥ ಟ್ವೀಟ್ ಮಾಡಿದ್ದಾರೆ.

   ಇದರ ಬಗ್ಗೆ ಟ್ವಿಟ್ಟರ್ ನಲ್ಲಿ ಈಗಾಗಲೆ ಭಾರೀ ಚರ್ಚೆ ನಡೆಯುತ್ತಿದ್ದು, ಶಕುನಿ ಅಂದ್ರೆ ಯಾರು ಎಂಬ ಬಗ್ಗೆ ಊಹೆಗಳು ಆರಂಭವಾಗಿವೆ. ಆ ಶಕುನಿ ಅಂದ್ರೆ ಯಾರು, ಆ ಶಕುನಿ ಇಲ್ಲದಿದ್ದರೆ ನರೇಂದ್ರ ಮೋದಿಯವರು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆ? ಇತ್ಯಾದಿ ಪ್ರಶ್ನೆಗಳೂ ಹುಟ್ಟಿಕೊಂಡಿವೆ.

   ಚೌಕಿದಾರ್ ದೇಬ್ ಎಂಬೊಬ್ಬರು, ಸಾರ್ ನೀವು ಬುದ್ಧುನ ಹೆಸರನ್ನೇ ಈ ಪಟ್ಟಿಯಲ್ಲಿ ಬಿಟ್ಟುಬಿಟ್ಟಿದ್ದೀರಲ್ಲ? ಎಂದು ಪ್ರಶ್ನಿಸಿದ್ದಕ್ಕೆ, 'ಬ್ಯಾಂಬಿನೋ' ಎಂದು ಸುಬ್ರಮಣಿಯನ್ ಸ್ವಾಮಿ ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ಹೋಹೋ, ಬೆಳಿಗ್ಗೆ ಬೆಳಿಗ್ಗೆಯೇ ನಗುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಅವರು ಪ್ರತ್ಯುತ್ತರಿಸಿದ್ದಾರೆ. ಈಗ ಗೊತ್ತಾಗಿರಬೇಕಲ್ಲವೆ, 'ಬ್ಯಾಂಬಿನೋ' ಅಂದ್ರೆ ಯಾರೆಂದು?

   ಕೋರ್ಟ್‌ನಲ್ಲಿ ಸಹಾಯಬೇಕಾ? ನಾನಿದ್ದೇನೆ: ಗಂಭೀರ್‌ಗೆ ಸುಬ್ರಮಣಿಯನ್ ಸ್ವಾಮಿ ಅಭಯ

   ಪ್ಯೂರ್ ಕಾನ್ಸಿಯಸ್ ಎಂಬ ಖಾತೆ ಇರುವವರು, ಸರ್ ರಾಬ್ಬರ್ ಯಾಕೆ ಈ ಪಟ್ಟಿಯಿಂದ ಹೊರಗಿರಬೇಕು, ರಾಬ್ಬರ್ ಕೂಡ ಇರಲೇಬೇಕು ಎಂದಿದ್ದಕ್ಕೆ, ಆ ಗೂಂಡಾ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡಲಿದ್ದಾನೆ. ಆತನಿಗೆ 'ಕುಟುಂಬ'ದ ಬೆಂಬಲ ಇಲ್ಲದಿದ್ದಿದ್ದರೆ, ಆತನಿಗೆ ಉಸಿರಾಡಿಸಲೂ ಕಷ್ಟವಾಗುತ್ತಿತ್ತು ಎಂದು ಡಾ. ಸುಬ್ರಮಣಿಯನ್ ಸ್ವಾಮಿ ಅವರು ಮಾರ್ಮಕವಾಗಿ ಉತ್ತರಿಸಿದ್ದಾರೆ. ಈಗ ನೀವೇ ಥಿಂಕ್ ಮಾಡಿ ಆ ರಾಬ್ಬರ್ ಯಾರೆಂದು?

   ಸರ್, ಇವಿಎಂ (ಎಲೆಕ್ಟ್ರಾನಿಕ್ ಮತಯಂತ್ರ) ಹ್ಯಾಕ್ ಮಾಡಲಾಗಿದೆ ಎಂದು ವಿರೋಧಿಗಳು ಅಳುತ್ತಲೇ ಇದ್ದಾರಲ್ಲ? ಮೂರು ರಾಜ್ಯಗಳಲ್ಲಿ ಚುನಾವಣೆ ಗೆದ್ದಾಗಲೂ ಇದರ ಬಗ್ಗೆ ಯಾಕೆ ವಿರೋಧಿಗಳು ಕ್ಯಾತೆ ತೆಗೆದಿರಲಿಲ್ಲ? ಸರ್ವೋಚ್ಚ ನ್ಯಾಯಾಲಯವೇ ಆಗಲಿ, ಚುನಾವಣಾ ಆಯೋಗವೇ ಆಗಲಿ, ಇವಿಎಂನೇ ಆಗಲಿ, ತಮ್ಮ ಇಚ್ಛೆಗೆ ವಿರುದ್ಧವಾಗಿ ಇರುವುದನ್ನು ಅವರು ನಂಬುವುದಿಲ್ಲ. ಸ್ವಾಮಿ ಸರ್, ಅವರ ಬಾಯಿ ಬಂದ್ ಮಾಡಿಸಲು ಕಾನೂನಿನ ಪ್ರಕಾರ ಯಾವುದೇ ಮಾರ್ಗವಿಲ್ಲವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ 'ಅವರನ್ನು ನಿರ್ಲಕ್ಷಿಸಿ ಅಥವಾ ಶಬ್ಧ ಮಾಲಿನ್ಯ'ದ ವಿರುದ್ಧ ಕೇಸ್ ಹಾಕಿಸಿ ಎಂದು ಸ್ವಾಮಿ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.

   ಇನ್ನು ಮುನಿಮ್ ಯಾರಿರಬಹುದೆಂದು ನೀವೇ ಲೆಕ್ಕ ಹಾಕಿ. ಈ ಹೆಸರುಗಳು ಗಂಡಸರದ್ದೂ ಆಗಿರಬಹುದು, ಆ ಗಂಡಂದಿರ ಹೆಂಡತಿಯರದ್ದೂ ಆಗಿರಬಹುದು. ಟಿಡಿಕೆ ಅಂದ್ರೆ ತಾಡಕಾ, ತಾಟಕಾ... ಇವರು ಯಾರು? ಪಿಸಿ ಅಂದ್ರ ಪಾಪಾ ಚೋರ್, ಬಿಸಿ ಅಂದ್ರೆ ಬೇಬಿ ಚೋರ್, ಎಂಸಿ ಅಂದ್ರ ಮಮ್ಮಿ ಚೋರ್. ಇವರು ಯಾರು ಎಂದು ಊಹಿಸುವುದು ಓದುಗರಿಗೆ ಬಿಟ್ಟಿದ್ದು. ಇದೆಲ್ಲದರ ನಡುವೆ, ನುಸುಳಿ ಬಂದಿರುವ ಹೊಸ ನಿಕ್ ನೇಮ್ 'ಶಕುನಿ'! ಅವರು ಯಾರು? ಮೋದಿ ಸರಕಾರದಲ್ಲೇ ಇರುವ ಇವರ ಬಗ್ಗೆ ಯಾಕೆ ಸ್ವಾಮಿಗೆ ಕೋಪ?

   English summary
   Who is Shakuni in Narendra Modi cabinet as referred by Dr Subramanian Swamy in his tweet? Who is Bambino, who Swamy wants to send to Tihar jail if Modi keeps Shakuni aside? Find out from funny tweet by Subramanian Swamy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more