• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ ಮಿಟುಕು ಸುಂದರಿ ಪ್ರಿಯಾ ಬರೆದಳು ಹೊಸ ದಾಖಲೆ

By Mahesh
|
   ಪ್ರಿಯ ಪ್ರಕಾಶ್ ಈಗ ಏನ್ ಹೇಳ್ತಾರೆ ಗೊತ್ತಾ ? | Filmibeat Kannada

   ಪ್ರೇಮಿಗಳ ದಿನಾಚರಣೆಯ ಚುಂಬಕ ಗಾಳಿಯೂ ತೆಂಕಣದಿಂದ ಕೊಂಕಣದವರೆಗೂ ಡೆಲ್ಲಿಯಿಂದ ಹಳ್ಳಿಯವರೆಗೂ ಹಬ್ಬುತ್ತಿದೆ. ಪ್ರೇಮಿಗಳ ಎದೆಯೊಳಗೆ ಯಾರೋ ತಮಟೆ ಬಡಿದಂತೆ ಮಾಡಲು ಪ್ರೇಮಿಯ ಕಣ್ಮಿಟುಕು ಸಾಕು. ಹೀಗೆ ಕಣ್ ಹೊಡೆದ ಮಲ್ಲು ಹುಡುಗಿಯೊಬ್ಬಳು ಜಾಗತಿಕ ಮಟ್ಟದಲ್ಲಿ ರಾತ್ರಿ ಕಳೆದು ಬೆಳಗ್ಗೆ ಆಗುವಷ್ಟರಲ್ಲಿ ಸಕತ್ ಫೇಮಸ್ ಆಗಿ ಬಿಟ್ಟಿದ್ದಾಳೆ.

   ಜಿಮ್ಮಿ ಕಮಾಲ್ ನ ಶೆರಿ ನಂತರ 'ಒರು ಅಡಾರ್ ಲವ್' ಮಲಯಾಳಂ ಚಿತ್ರದ 18ರ ಯುವತಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಮಿಟುಕಿಗೆ ಎಲ್ಲರೂ ಸೋತಿದ್ದಾರೆ. ಪ್ರೇಮಿಗಳ ದಿನ ಹತ್ತಿರವಿರುವಾಗ ಈ ಚಿತ್ರದ ನವಿರಾದ ದೃಶ್ಯವೊಂದು ಪ್ರೇಮಿಗಳಲ್ಲಿ ಕಿಚ್ಚು ಎಬ್ಬಿಸಿದೆ.

   ಗ್ಯಾಲರಿ: ಕಣ್ ಮಿಟುಕು ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್

   ಪ್ರಿಯಾ ಅವರ ಮೊದಲ ಸಿನಿಮಾ 'ಒರು ಅಡಾರ್ ಲವ್'(Ooru adaar love) ಮಾರ್ಚ್ 3ಕ್ಕೆ ರಿಲೀಸ್ ಆಗಲಿದೆ. ಇದಕ್ಕೂ ಮುನ್ನ ಈ ಚಿತ್ರದ ಒಂದು ಹಾಡಿನ ತುಣುಕು, ವಿದ್ಯಾರ್ಥಿಗಳ ನಡುವಿನ ಹುಬ್ಬೇರಿಸುವ ಕಣ್ ಹೊಡೆಯುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಪ್ರಿಯಾ ಬಗ್ಗೆ ಹುಡುಕಾಟ ಒಂದೆಡೆಯಾದರೆ, ಪ್ರಿಯಾಳ ಸಾಮಾಜಿಕ ಜಾಲ ತಾಣ ಖಾತೆಗಳು ಹೊಸ ದಾಖಲೆ ಬರೆದಿವೆ.

   ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ 1

   ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ 1

   ಯೂ ಟ್ಯೂಬ್ ನಲ್ಲಿ ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡು ನಿನ್ನೆಯಿಂದ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ 1ನಲ್ಲಿ ಇದೆ. 4 ಮಿಲಿಯನ್ ಜನರು ಈ ಹಾಡನ್ನು ಈಗಾಗಲೇ ವೀಕ್ಷಿಸಿದ್ದಾರೆ. ಪ್ರಿಯಾ ಅವಳ ಎಲ್ಲಾ ಸಾಮಾಜಿಕ ಜಾಲ ತಾಣ ಖಾತೆಗಳು ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಗಗನದೆತ್ತರಕ್ಕೇರಿವೆ. ಅದರಲ್ಲೂ ಇನ್ ಸ್ಟಾಗ್ರಾಮ್ ಹೊಸ ದಾಖಲೆ ಬರೆದಿದೆ.

   ಧನ್ಯವಾದ ಅರ್ಪಿಸಿದ ಪ್ರಿಯಾ

   ನಿಮ್ಮ ಪ್ರೀತಿ ಹೀಗೆ ಇರಲಿ, ಧನ್ಯವಾದಗಳು ಪ್ರಿಯಾ ಟ್ವೀಟ್ ಮಾಡಿದ್ದಾಳೆ. ಸುಮಾರು 16ಸಾವಿರಕ್ಕೂ ಅಧಿಕ ಹಿಂಬಾಲಕರು ಈ ಸಮಯಕ್ಕೆ ಹೊಂದಿದ್ದಾಳೆ. ಇನ್ ಸ್ಟಾ ಗ್ರಾಮ್ ನಲ್ಲಿ ಒಂದೇ ದಿನದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಹಿಂಬಾಲಕರನ್ನು ಪಡೆದ ವಿಶ್ವದ ಮೂರನೇ ಸೆಲೆಬ್ರಿಟಿ ಎನಿಸಿಕೊಂಡಿದ್ದಾಳೆ. 606K ಗೂ ಅಧಿಕ ಹಿಂಬಾಲಕರನ್ನು ಪಡೆದಿದ್ದಾಳೆ. ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ 650K ಹಿಂಬಾಲಕರನ್ನು ಒಂದೇ ದಿನ ಗಳಿಸಿದ್ದರು. ಅಮೆರಿಕದ ಟಿವಿ ತಾರೆ ಕೆಲ್ಲಿ ಜೆನ್ನರ್ ಒಂದೇ ದಿನದಲ್ಲಿ 806K ಹಿಂಬಾಲಕರನ್ನು ಪಡೆದು ದಾಖಲೆ ಬರೆದಿದ್ದರು.

   ರವಿಶಾಸ್ತ್ರಿ ಜತೆ ಪ್ರಿಯಾ ಕಣ್ ಮಿಟುಕು

   ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಯಾವುದೇ ಭಾವನೆ ತೋರದೆ ಹೇಗೆ ಕೂತಿರುತ್ತಾರೆ. ಪ್ರಿಯಾ ಕಣ್ ಮಿಟುಕಿಗೆ ವಿಶ್ವವೇ ಹುಬ್ಬೇರಿಸಿ ಮನಸೋತರೂ ರವಿಶಾಸ್ತ್ರಿ ಹೇಗೆ ಸುಮ್ಮನಿರುತ್ತಾರೆ ಎಂಬುದನ್ನು ಟ್ರಾಲ್ ಮಾಡಲಾಗಿದೆ.

   ಮೋದಿಯನ್ನು ಬಿಟ್ಟಿಲ್ಲ

   ಕಣ್ ಮಿಟುಕು ಸುಂದರಿ ಪ್ರಿಯಾ ಹಾವ ಭಾವದ ಬಗ್ಗೆ ಟ್ರಾಲ್, ಮೀಮ್ಸ್ ಹೊಗಳಿಕೆ ಟ್ವೀಟ್ಸ್ ವೈರಲಾಗುತ್ತಿದ್ದು, ಪ್ರಧಾನಿ ಮೋದಿ ಅವರನ್ನು ಜನ ಬಿಟ್ಟಿಲ್ಲ. ಮೋದಿಗೂ ಮೋಡಿ ಮಾಡಿದ್ದಾಳೆ ಎಂದು ಟ್ರಾಲ್ ಬಂದಿದೆ.

   ಸುಂದರಿ ಪ್ರಿಯಾ ಕಣ್ ಮಿಟುಕಿಗೆ ದಾಖಲೆ ಧೂಳಿಪಟ

   ನಟಿ ಕತ್ರೀನಾ ಕೈಫ್ ಬಾಲಿವುಡ್ ಗೆ ಬಂದು ಹಾಗೂ ಹೀಗೂ ಹಿಂದಿ ಮಾತನಾಡುವುದನ್ನು ಕಲಿತ್ತಿದ್ದಾಳೆ. ಆದರೆ, ನಟನೆ ವಿಷಯದಲ್ಲಿ ಈಗಲೂ ಆಕ್ಷೇಪ, ಗೇಲಿ ನಡೆಯುತ್ತಲೆ ಇರುತ್ತದೆ. ಈಗ ಕತ್ರೀನಾ ಜತೆ ಹೋಲಿಕೆ ಮಾಡಿ, 2 ನಿಮಿಷದ ಪ್ರಿಯಾ ಹಾವ ಭಾವವನ್ನು ಕೈಫ್ ಇಡೀ ವೃತ್ತಿ ಬದುಕಿನಲ್ಲಿ ನೀಡಿಲ್ಲ ಎಂದು ಹಾಸ್ಯ ಮಾಡಲಾಗಿದೆ.

   ಗಂಭೀರ ವದನ ಗೌತಮ್

   ಗಂಭೀರ ವದನ ಕ್ರಿಕೆಟರ್ ಗೌತಮ್ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

   ರಾಹುಲ್ ಗಾಂಧಿ ಬಳಸಿ ಘಟನಾವಳಿ

   ರಾಹುಲ್ ಗಾಂಧಿ ಬಳಸಿ ಘಟನಾವಳಿ ಹೆಣೆದು ಚಿತ್ರಿಸಿರುವ ದೃಶ್ಯ ಹೀಗಿದೆ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   With Valentine's Day round the corner and theme of love being in the air, a short clip from a Malayalam movie starring Priya Prakash Varrier is doing various rounds social media platforms.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more