ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಸರ್ಕಾರ ಅಲ್ಲಾಡಿಸುತ್ತಿರುವ ಹಾರ್ದಿಕ್ ಪಟೇಲ್ ಯಾರು?

By Mahesh
|
Google Oneindia Kannada News

ಅಹಮದಾಬಾದ್, ಆಗಸ್ಟ್ 26: ಪ್ರಧಾನಿ ನರೇಂದ್ರ ಮೋದಿ ಅವರ ನಾಡಲ್ಲಿ ಈಗ ಬಿಸಿರಕ್ತದ ಯುವಕನದ್ದೇ ಸುದ್ದಿ. ಆನಂದಿಬೇನ್ ಅವರ ಸರ್ಕಾರವನ್ನು ಅಲುಗಾಡಿಸುತ್ತಿರುವ 22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಯಾರು? ಆತನ ಮೇಲೆ ಪಟೇಲ್ ಸಮುದಾಯಕ್ಕೆ ಏಕೆ ಅಷ್ಟು ನಂಬಿಕೆ? ಪಟೇಲ್ ಸಮುದಾಯಕ್ಕೆ ಒಬಿಸಿ ಮಾನ್ಯತೆ ಸಿಗಬೇಕೇ? ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿದೆ.

ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವವರ ಮುಂದಾಳತ್ವ ವಹಿಸಿಕೊಂಡಿರುವ ಹಾರ್ದಿಕ್, ಗುಜರಾತ್ ಬಂದ್ ಗೆ ಕರೆ ನೀಡಿದ್ದಾರೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]

ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಗುಜರಾತ್‌ನ ಪಟೇಲ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದ್ದು, ಅಹ್ಮದಾಬಾದ್ ಬೇರೆಬೇರೆ ಭಾಗಗಳಲ್ಲಿ ಘರ್ಷಣೆಗಳು ವರದಿಯಾಗಿತ್ತು. ಅದರೆ, ಬುಧವಾರದಂದು ಹಿಂಸಾಚಾರ ಕೈಬಿಟ್ಟು ಶಾಂತಿಯುತ ಪ್ರತಿಭಟನೆ ಕೈಗೊಳ್ಳುವಂತೆ ಹಾರ್ದಿಕ್ ಪಟೇಲ್ ಕರೆ ನೀಡಿದ್ದಾರೆ. [ಗುಜರಾತ್ ಬಂದ್ ಗೆ ಕರೆ ನೀಡಿದ 22 ವರ್ಷದ ಹಾರ್ದಿಕ್ ]

ಕಳೆದೆರಡು ತಿಂಗಳಿಂದ ಗುಜರಾತ್ ರಾಜಕೀಯದಲ್ಲಿ ಹಾರ್ದಿಕ್ ಪಟೇಲ್ ಹೆಸರು ಕೇಳಿ ಬರುತ್ತಿದೆ. ಮಂಗಳವಾರ ಹಾರ್ದಿಕ್ ಪಟೇಲ್ ಅವರನ್ನು ಕೆಲ ಕಾಲ ಬಂಧಿಸಿದ ಗುಜರಾತ್ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ. [ಹಾರ್ದಿಕ್, ಒಬಿಸಿ, ಗಲಭೆ, ಟ್ವಿಟ್ಟರ್ ನಲ್ಲಿ ಶಾಂತಿ ಮಂತ್ರ]

ಹಾರ್ದಿಕ್ ಬೆಂಬಲಕ್ಕೆ ಮಹಿಳೆಯರು ಸೇರಿದಂತೆ ಇಡೀ ಪಟೇಲ್ ಸಮುದಾಯವೇ ಹಿಂದೆ ನಿಂತಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರಿನಲ್ಲಿ ಮೀಸಲಾತಿ ಆಗ್ರಹಿಸುತ್ತಿರುವ ಹಾರ್ದಿಕ್ ಪಟೇಲ್ ಅವರನ್ನು 'ನವ ಮೋದಿ' ಎಂದೇ ಕರೆಯಲಾಗುತ್ತಿದೆ.

 22 ವಯಸ್ಸಿನ ಅಭಿನವ ಮೋದಿ ಹಾರ್ದಿಕ್

22 ವಯಸ್ಸಿನ ಅಭಿನವ ಮೋದಿ ಹಾರ್ದಿಕ್

ಅಹಮದಾಬಾದ್ ಜಿಲ್ಲೆಯ ವೀರಾಮ್ ಗ್ರಾಮದ 22 ವರ್ಷ ವಯಸ್ಸಿನ ಯುವಕ ಹಾರ್ದಿಕ್ ಪಟೇಲ್ ಈಗ ಗುಜರಾತಿನ ನವತಾರೆ. ಷಹಜನಬಾದ್ ಕಾಲೇಜಿನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಬಿ.ಕಾಂ ಪದವಿ ಪಡೆದಿರುವ ಹಾರ್ದಿಕ್ ಕೌಟುಂಬಿಕ ವೃತ್ತಿಯಾದ ಜಲ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಪಿಎಎಎಸ್ ಸಂಯೋಜಕ, ಸಂಘಟಕ

ಪಿಎಎಎಸ್ ಸಂಯೋಜಕ, ಸಂಘಟಕ

2011ರಲ್ಲಿ ಪಟೇಲ್ ಸಮುದಾಯದ ಹಿತಕಾಯುವುದಕ್ಕಾಗಿ 'ಸರ್ದಾರ್ ಪಟೇಲ್ ಸೇವಾದಾಳ' ಸ್ಥಾಪಿಸಿ ಹೋರಾಟ ಆರಂಭಿಸಿದ್ದರು. ನಂತರ, ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ಸಂಯೋಜಕರಾಗಿ ಒಂದು ತಿಂಗಳಲ್ಲೇ ರಾಜ್ಯದ 12 ಜಿಲ್ಲೆಗಳಲ್ಲಿ ಬಿರುಸಿನ ಪ್ರವಾಸ ಮಾಡಿ ಸಮುದಾಯದವರನ್ನು ಸಂಘಟಿಸಿದ್ದಾರೆ.

ಹಾರ್ದಿಕ್ ಭಾಷಣ ಕೇಳಲು 4 ಲಕ್ಷ ಜನ

ಹಾರ್ದಿಕ್ ಭಾಷಣ ಕೇಳಲು 4 ಲಕ್ಷ ಜನ

ವಡೋದರದಲ್ಲಿ ನಡೆದ ಶಕ್ತಿ ಸಮಾವೇಶದಲ್ಲಿ ಸುಮಾರು 4 ಲಕ್ಷಕ್ಕೂ ಜನರನ್ನು ಉದ್ದೇಶಿಸಿ ಹಾರ್ದಿಕ್ ಭಾಷಣ ಮಾಡಿ ಮೋಡಿ ಮಾಡಿದಾರೆ. ಗುಜರಾತ್​ನಲ್ಲಿ 'ಹೊಸ ಮೋದಿ', 'ಪಾಟಿದಾರ್ ಹೃದಯ್ ಸಾಮ್ರಾಟ್' ನವ ಮೋದಿ ಎಂದು ಎಲ್ಲೆಡೆ ಹಾರ್ದಿಕ್ ರನ್ನು ಕೊಂಡಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹಾರ್ದಿಕ್ ಕೂಡಾ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಗುಜರಾತಿನ ಮೀಸಲಾತಿ ವ್ಯವಸ್ಥೆ

ಗುಜರಾತಿನ ಮೀಸಲಾತಿ ವ್ಯವಸ್ಥೆ

ಪಟೇಲ್ ಸಮುದಾಯಕ್ಕೆ ಸೇರಿದವರಾದ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ಪ್ರತಿಭಟನೆಗೆ ಜಗ್ಗಿಲ್ಲ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ಪ್ರಕಟಣೆ ಹೊರಡಿಸಲಾಗಿದೆ.

ಮೂಲತಃ ಕೃಷಿಕರು ನಂತರ ವ್ಯಾಪಾರಿಗಳಾದ ಪಟೇಲರು

ಮೂಲತಃ ಕೃಷಿಕರು ನಂತರ ವ್ಯಾಪಾರಿಗಳಾದ ಪಟೇಲರು

ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದಾರೆ.

English summary
Who is Hardik Patel, who has shaken Gujarat CM Anandiben Patel-led BJP govt?. 22-year-old Hardik Patel has emerged as a beacon of hope for the youth of Gujarat, who are vying for reservation in government jobs and colleges under Other Backward Classes (OBC) category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X