ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ, ಕೊರೊನಾ ನಿರ್ವಹಣೆಯಲ್ಲಿ ಯಾವ ಸಿಎಂ ಬೆಸ್ಟ್: ಬಿಎಸ್ವೈಗೆ ಎಷ್ಟನೇ ಸ್ಥಾನ?

|
Google Oneindia Kannada News

ಕೊರೊನಾ ನಿರ್ವಹಣೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯಾವ ರೀತಿ ನಿಭಾಯಿಸಿತು ಎನ್ನುವ ವಿಚಾರದಲ್ಲಿ ಈಗಾಗಲೇ ಎರಡ್ಮೂರು ಸಮೀಕ್ಷೆಗಳು ಹೊರಬಿದ್ದಿದ್ದವು.

Recommended Video

A cop recovered by corona talks to media | Corona Recovered | Oneindia Kannada

ಅದೇ ರೀತಿ, ರಾಜ್ಯವಾರು ಮುಖ್ಯಮಂತ್ರಿಗಳು ನಿರ್ವಹಣೆ, ಸಾರ್ವಜನಿಕರಿಗೆ ತೃಪ್ತಿಯನ್ನು ತಂದಿದೆಯೇ ಎಂದೂ ಸಮೀಕ್ಷೆ ನಡೆಸಲಾಗಿತ್ತು. ಈಗ ಮತ್ತೊಂದು ಸಮೀಕ್ಷೆಯ ವರದಿ ಬಂದಿದೆ.

ಪ್ರಧಾನಿ ಮೋದಿ ಜೊತೆ ಯಡಿಯೂರಪ್ಪ ಚರ್ಚಿಸಲಿರುವ ವಿಷಯಗಳು ಪ್ರಧಾನಿ ಮೋದಿ ಜೊತೆ ಯಡಿಯೂರಪ್ಪ ಚರ್ಚಿಸಲಿರುವ ವಿಷಯಗಳು

ಟೈಮ್ಸ್ ನೌ ವಾಹಿನಿ ಮತ್ತು ಒಆರ್ ಮ್ಯಾಕ್ಸ್ ಜಂಟಿಯಾಗಿ ಸಮೀಕ್ಷೆ ನಡೆಸಿದೆ. ದೇಶದ ಆಯ್ದ ಆರು ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಒಟ್ಟಾರೆಯಾಗಿ ಪ್ರಧಾನಿ ಮೋದಿಯವರ ಕಾರ್ಯವೈಖರಿಗೂ ಜನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಅತಿಹೆಚ್ಚು ಕೊರೊನಾ ಪೀಡಿತ ದೇಶಗಳಾದ ಅಮೆರಿಕಾ ಮತ್ತು ಇಟೆಲಿಯ ದೇಶಗಳ ಮುಖ್ಯಸ್ಥರಿಗೆ, ಹೋಲಿಸಿದರೆ, ಈ ಸೋಂಕು ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಬಹಳ ಮುಂದಿದ್ದಾರೆ. ಯಾರು ಬೆಸ್ಟ್ ಸಿಎಂ?

ರಜನಿಕಾಂತ್ ಹಿಡಿಶಾಪದ ಟ್ವೀಟ್ ವೈರಲ್: ಆದರೆ, ತಮಿಳುನಾಡು ಸರಕಾರ ಡೋಂಟ್ ಕೇರ್? ರಜನಿಕಾಂತ್ ಹಿಡಿಶಾಪದ ಟ್ವೀಟ್ ವೈರಲ್: ಆದರೆ, ತಮಿಳುನಾಡು ಸರಕಾರ ಡೋಂಟ್ ಕೇರ್?

ಪ್ರಧಾನಿ ಮೋದಿ ಬೆಸ್ಟ್

ಪ್ರಧಾನಿ ಮೋದಿ ಬೆಸ್ಟ್

ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ನಗರಗಳಲ್ಲಿ ಟೈಮ್ಸ್ ನೌ ಸಮೀಕ್ಷೆ ನಡೆಸಿತ್ತು. ಕೊರೊನಾ ನಿರ್ವಹಣೆಯನ್ನು ಪ್ರಧಾನಿ ಮೋದಿ ಚೆನ್ನಾಗಿ ನಿರ್ವಹಿಸಿದ್ದಾರೆಂದು, ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.71 ಜನರು ಅಭಿಪ್ರಾಯ ಪಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ಮೊದಲ ಸ್ಥಾನ

ಅರವಿಂದ್ ಕೇಜ್ರಿವಾಲ್ ಮೊದಲ ಸ್ಥಾನ

ಇನ್ನು, ರಾಜ್ಯಾವಾರು ಕೊರೊನಾ ನಿರ್ವಹಣೆಯನ್ನು ಆಯಾಯ ರಾಜ್ಯಗಳ ಮುಖ್ಯಮಂತ್ರಿಗಳು ಹೇಗೆ ನಿಭಾಯಿಸಿದರು ಎನ್ನುವ ಸಮೀಕ್ಷೆಯಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊದಲ ಸ್ಥಾನ ಪಡೆದಿದ್ದಾರೆ. ಶೇ.65 ಜನ ಕೇಜ್ರಿವಾಲ್ ನಿರ್ವಹಣೆಗೆ ತೃಪ್ತಿ ಪಟ್ಟಿದ್ದಾರೆ.

ಯಾವ ಸಿಎಂ ಬೆಸ್ಟ್: ಬಿಎಸ್ವೈಗೆ ಉಘೇ..ಉಘೇ

ಯಾವ ಸಿಎಂ ಬೆಸ್ಟ್: ಬಿಎಸ್ವೈಗೆ ಉಘೇ..ಉಘೇ

"ಕೊರೊನಾ ನಿರ್ವಹಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ" ಎಂದು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಜನರೂ ಅವರ ಕೊರೊನಾ ನಿರ್ವಹಣೆಯ ವಿಚಾರದಲ್ಲಿ ತೃಪ್ತಿ ಪಟ್ಟವರೇ ಹೆಚ್ಚು. ಶೇ. 56 ಜನ ಬಿಎಸ್ವೈ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೊರೊನಾ ನಿರ್ವಹಣೆಯ ಅತ್ಯುತ್ತಮ ಸಿಎಂಗಳಲ್ಲಿ ಯಡಿಯೂರಪ್ಪ ಎರಡನೇ ಸ್ಥಾನದಲ್ಲಿದ್ದಾರೆ.

ಕೊನೆಯ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ

ಕೊನೆಯ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ

ಇನ್ನು ಮೂರನೇ ಸ್ಥಾನದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ (ಶೇ.49) ತಮಿಳುನಾಡು ಸಿಎಂ ಪಳನಿಸ್ವಾಮಿ ನಾಲ್ಕನೇ ಸ್ಥಾನದಲ್ಲಿ (ಶೇ. 40) ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆ ಐದನೇ ಸ್ಥಾನದಲ್ಲಿ (ಶೇ. 35) ಕೊನೆಯ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ (ಶೇ.6 ) ಇದ್ದಾರೆ.

English summary
Who Is Best In Handling Coronavirus: Times Now And ORMAX Survey,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X