ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತ್ ಮಾತಾ ಕಿ ಜೈ ಎನ್ನದವರಿಗೆ ದೇಶದಲ್ಲಿರುವ ಹಕ್ಕಿಲ್ಲ'

|
Google Oneindia Kannada News

ಮುಂಬೈ, ಏಪ್ರಿಲ್, 03: " ದೇಶದಲ್ಲಿ ಇದ್ದುಕೊಂಡು 'ಭಾರತ್ ಮಾತಾ ಕಿ ಜೈ' ಎನ್ನದವರಿಗೆ ಈ ರಾಷ್ಟ್ರದಲ್ಲಿ ಬದುಕುವ ಹಕ್ಕಿಲ್ಲ, ನಮ್ಮ ದೇಶದಲ್ಲಿರಬೇಕೆಂದರೆ 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗಲೇಬೇಕು" ಹೀಗೆಂದು ಹೇಳಿಕೆ ನೀಡಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಫಡ್ನವೀಸ್, ಕೆಲವರು ಭಾರತದಲ್ಲಿದ್ದುಕೊಂಡು "ಭಾರತ್ ಮಾತಾ ಕಿ ಜೈ" ಘೋಷಣೆ ಕೂಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಇವರೇನು ಪಾಕಿಸ್ತಾನ್ ಕಿ ಜೈ ಅಥವಾ ಚೀನಾ ಕಿ ಜೈ ಎಂದು ಕೂಗುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.[ಭಾರತ್ ಮಾತಾ ಕೀ ಜೈ ಅನ್ನೋಲ್ಲಾ ಎಂದಿದ್ದ ಓವೈಸಿ ಬಾಯಿಯಿಂದ ಜೈಹಿಂದ್]

india

ದೇಶದ ಅನ್ನ, ಋಣ ಪಡೆದುಕೊಳ್ಳುತ್ತಿರುವವರು ದೇಶದ ಪರವಾಗಿ ಘೋಷಣೆ ಕೂಗದಿರಲು ಕಾರಣಗಳನ್ನು ಹುಡುಕುತ್ತಿದ್ದಾರೆ. ಒಮ್ಮೆ ಸುಮ್ಮನೆ ಕುಳಿತು ಚಿಂತನೆ ನಡೆಸಿದರೆ ಎಲ್ಲವೂ ಅರ್ಥವಾಗುತ್ತದೆ ಎಂದು ಮಹಾ ಮುಖ್ಯಮಂತ್ರಿ ಹೇಳಿದ್ದಾರೆ.[ಕನ್ಹಯ್ಯಗೆ ಭಗತ್ ಸಿಂಗ್ ಎಂದ ತರೂರ್‌ಗೆ ಟ್ವಿಟ್ಟರ್ ಮಂಗಳಾರತಿ]

ದೆಹಲಿಯು ಜವಾಹರಲಾಲ್ ನೆಹರು ವಿವಿಯಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಕೂಗು ಕೇಳಿ ಬಂದ ನಂತರ ವಿವಾದಗಳ ಸರಣಿ ಎದ್ದಿತ್ತು. ಅನೇಕ ರಾಜಕೀಯ ನಾಯಕರು ಸಹ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಲ್ಲ ಎಂದು ಹೇಳಿ ವಿವಾದ ಎಬ್ಬಿಸಿದ್ದರು.

English summary
Now 'Bharat Mata Ki Jai' slogan-chanting debate took a new turn when Maharashtra Chief Minister Devendra Fadnavis on Saturday, April 2 said that "those people who cannot say 'Bharat Mata ki Jai' have no right to stay in the country." According to media reports, Fadnavis was quoted saying as, "Some people say we will not say Bharat Mata ki Jai. Then what? Pakistan ki jai or China ki jai?." If they cannot say this slogan then they should leave this place."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X