ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೋವ್ಯಾಕ್ಸಿನ್ ಲಸಿಕೆ ಅನುಮೋದನೆಗೆ ಇನ್ನಷ್ಟು ಮಾಹಿತಿ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ನವದೆಹಲಿ, ಮೇ 25: ಭಾರತದಲ್ಲಿ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ಅಭಿವೃದ್ಧಿಪಡಿಸಿರುವ ಭಾರತ್ ಬಯೋಟೆಕ್‌ನಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.

ಆಕ್ಸ್‌ಫರ್ಡ್ ಆಸ್ಟ್ರಾಜೆನಿಕಾ, ಫೈಜರ್ ಮತ್ತು ಮಾಡೆರ್ನಾ ಸೇರಿದಂತೆ ಹಲವು ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ವಿಶ್ವದಾದ್ಯಂತ ಈ ಲಸಿಕೆಗಳನ್ನು ರಫ್ತು ಮಾಡಲು ಈ ಅನುಮೋದನೆ ನೆರವಾಗುತ್ತದೆ. ಆದರೆ ಭಾರತದಲ್ಲಿ ಅಭಿವೃದ್ಧಿಗೊಂಡಿರುವ ಎರಡು ಲಸಿಕೆಗಳ ಪೈಕಿ ಕೋವಾಕ್ಸಿನ್‌ಗೆ ಡಬ್ಲುಎಚ್‌ಒ ಅನುಮೋದನೆ ನೀಡಿಲ್ಲ. ಅನುಮೋದನೆ ಪಡೆಯಲು ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿತ್ತು.

2ನೇ ಡೋಸ್ ಕೋವ್ಯಾಕ್ಸಿನ್ ಗಾಗಿ ಕಾಯುತ್ತಿದ್ದರೆ ಈ ಸುದ್ದಿ ತಪ್ಪದೇ ಓದಿ ! 2ನೇ ಡೋಸ್ ಕೋವ್ಯಾಕ್ಸಿನ್ ಗಾಗಿ ಕಾಯುತ್ತಿದ್ದರೆ ಈ ಸುದ್ದಿ ತಪ್ಪದೇ ಓದಿ !

ಏಪ್ರಿಲ್ 19ರಂದು ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. ಮೇ- ಜೂನ್ ತಿಂಗಳ ನಡುವೆ ಸಭೆ ನಡೆಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

WHO Asks More Information Over EUL For Covaxin Vaccine

ಯಾವುದೇ ಲಸಿಕೆಯ ತುರ್ತು ಬಳಕೆಯ ಅನುಮೋದನೆಗೆ ಅರ್ಜಿ ಬಂದರೆ ಅದರ ಪರಿಶೀಲನೆಗೆ ಸಮಯ ಹಿಡಿಯುತ್ತದೆ ಹಾಗೂ ಈ ಪ್ರಕ್ರಿಯೆ ಗೌಪ್ಯವಾಗಿರುತ್ತದೆ. ಎಲ್ಲಾ ಮಾನದಂಡಗಳನ್ನು ಲಸಿಕೆ ಪೂರೈಸಿದರೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಕೊರೊನಾ ಲಸಿಕೆ ಉತ್ಪಾದನಾ ಸಂಸ್ಥೆಗಳು ನೀಡಿದ ಮಾಹಿತಿಯ ಗುಣಮಟ್ಟದ ಆಧಾರದ ಮೇಲೆ ಈ ಪ್ರಕ್ರಿಯೆ ಅವಲಂಬಿತವಾಗಿರುತ್ತದೆ ಎಂದು ಡಬ್ಲುಎಚ್‌ಒ ತಿಳಿಸಿದೆ.

ಈ ನಡುವೆ ಹೈದರಾಬಾದ್‌ನಲ್ಲಿನ ಭಾರತ್ ಬಯೋಟೆಕ್ ಸಂಸ್ಥೆಯು, ವಿಶ್ವ ಆರೋಗ್ಯ ಸಂಸ್ಥೆಗೆ ಅಗತ್ಯವಿರುವ 90% ಮಾಹಿತಿ, ದಾಖಲೆಗಳನ್ನು ಸಲ್ಲಿಸಿರುವುದಾಗಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ಶೀಘ್ರವೇ ಅನುಮೋದನೆ ದೊರೆಯುವ ಭರವಸೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಹನ್ನೊಂದು ದೇಶಗಳಲ್ಲಿ ಕೋವ್ಯಾಕ್ಸಿನ್‌ಗೆ ನಿಯಂತ್ರಕ ಅನುಮೋದನೆ ದೊರೆತಿದೆ ಎಂದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಗ್ಯ ಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟಗಳಿಂದ ಅನುಮೋದನೆ ಪಡೆಯಲು ಅಗತ್ಯ ಕ್ರಮಗಳತ್ತ ಗಮನ ನೀಡಿರುವುದಾಗಿ ತಿಳಿದುಬಂದಿತ್ತು.

English summary
World health organisation seeking more information from India's bharath biotech over emergency use listing for covaxin vaccine for coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X