ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ!

|
Google Oneindia Kannada News

ನವದೆಹಲಿ, ಜೂನ್ 10: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮವನ್ನು ಘೋಷಿಸಿದೆ. ಮುಂದಿನ 7 ತಿಂಗಳಿನಲ್ಲಿ 73 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ.

136 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಕೊವಿಡ್-19 ಲಸಿಕೆಯನ್ನು ನೀಡುವುದಕ್ಕೆ ಅಂತಾರಾಷ್ಟ್ರೀಯ ಲಸಿಕೆ ಉತ್ಪಾದನಾ ಕಂಪನಿ ಮುಂದೆ ಬಂದಿದೆ. ಬಯೋ-ಎನ್-ಟೆಕ್ ಮತ್ತು ಫೈಜರ್ ಕಂಪನಿಯ ಲಸಿಕೆಯನ್ನು ಅತಿಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಭಾರತದಲ್ಲಿ ಈಗಾಗಲೇ ಕೊವಿಶೀಲ್ಡ್, ಕೊವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್-ವಿ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ.

Explained: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯೇ ಸವಾಲು! Explained: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯೇ ಸವಾಲು!

ಕೇಂದ್ರ ಸರ್ಕಾರದಿಂದ "ರಾಷ್ಟ್ರೀಯ ಲಸಿಕೆ ಕಾರ್ಯಕ್ರಮ"ದ ಅಡಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.75ರಷ್ಟು ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಮಧ್ಯೆ ಭಾರತಕ್ಕೆ ಬಯೋ-ಎನ್-ಟೆಕ್ ಮತ್ತು ಫೈಜರ್ ಕಂಪನಿಯು ಜಗತ್ತಿನಲ್ಲೇ ಅತಿ ಕಡಿಮೆ ಬೆಲೆಗೆ ಲಸಿಕೆಯನ್ನು ನೀಡುವುದಕ್ಕೆ ಮುಂದಾಗಿದೆ. ಈ ಕಂಪನಿಯ ಲಸಿಕೆಯ ಬೆಲೆ ಎಷ್ಟು. ವಿದೇಶಗಳಲ್ಲಿ ಈ ಕಂಪನಿಗೆ ನಿಗದಿಗೊಳಿಸಿರುವ ಬೆಲೆ ಎಷ್ಟು. ಭಾರತದಲ್ಲಿ ಇತರೆ ಕಂಪನಿಗಳ ಲಸಿಕೆಯ ಬೆಲೆ ಎಷ್ಟು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ.

ಭಾರತದಲ್ಲಿ ಫೈಜರ್ ಕಂಪನಿ ಲಸಿಕೆಗೆ ನಿಗದಿಪಡಿಸಿದ ಬೆಲೆ

ಭಾರತದಲ್ಲಿ ಫೈಜರ್ ಕಂಪನಿ ಲಸಿಕೆಗೆ ನಿಗದಿಪಡಿಸಿದ ಬೆಲೆ

ಭಾರತಕ್ಕೆ ಬಯೋ-ಎನ್-ಟೆಕ್ ಮತ್ತು ಫೈಜರ್ ಕಂಪನಿ ನೀಡುತ್ತಿರುವ ಕೊರೊನಾವೈರಸ್ ಲಸಿಕೆ ಬೆಲೆಯನ್ನು 10 ಅಮೆರಿಕನ್ ಡಾಲರ್ ಎಂದು ನಿಗದಿಗೊಳಿಸಲಾಗಿದೆ. ಅಂದರೆ ದೇಶದಲ್ಲಿ ಒಂದು ಡೋಸ್ ಲಸಿಕೆಗೆ 780 ರೂಪಾಯಿ ಆಗುತ್ತದೆ. ಇತರೆ ಮುಂದುವರಿದ ರಾಷ್ಟ್ರಗಳಲ್ಲಿ ಈ ಕಂಪನಿಯ ಒಂದು ಡೋಸ್ ಲಸಿಕೆಗೆ ಒಂದು ಸಾವಿರಕ್ಕೂ ಹೆಚ್ಚು ಹಣವನ್ನು ನೀಡಲಾಗುತ್ತಿದೆ. ಯುಎಸ್ ಔಷಧೀಯ ಕಂಪನಿಯು ಲಸಿಕೆ ಸರಬರಾಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸುತ್ತಿದೆ.

ಯುಎಸ್, ಯುಕೆ, ಯುರೋಪ್ ರಾಷ್ಟ್ರಗಳಲ್ಲಿ ಫೈಜರ್ ಲಸಿಕೆ ಬೆಲೆ

ಯುಎಸ್, ಯುಕೆ, ಯುರೋಪ್ ರಾಷ್ಟ್ರಗಳಲ್ಲಿ ಫೈಜರ್ ಲಸಿಕೆ ಬೆಲೆ

ಬಯೋ-ಎನ್-ಟೆಕ್ ಮತ್ತು ಫೈಜರ್ ಕಂಪನಿಯು ಕೊರೊನಾವೈರಸ್ ಲಸಿಕೆಯನ್ನು ಅಮೆರಿಕಾ, ಇಂಗ್ಲೆಂಡ್ ಮತ್ತು ಯುರೋಪಿಯನ್ ರಾಷ್ಟ್ರಗಳಿಗೂ ಮಾರಾಟ ಮಾಡುತ್ತಿದೆ. ಈ ಕಂಪನಿಯ ಒಂದು ಡೋಸ್ ಲಸಿಕೆಯ ಬೆಲೆಯು ಅಮೆರಿಕಾದಲ್ಲಿ 1423 ರೂ. (19.5 ಡಾಲರ್), ಇಂಗ್ಲೆಂಡಿನಲ್ಲಿ 1532 ರೂ. (21 ಡಾಲರ್) ಯುರೋಪಿಯನ್ ರಾಷ್ಟ್ರಗಳಲ್ಲಿ ಅತಿಹೆಚ್ಚು ಅಂದರೆ 1,693 ರೂ. (23.2 ಡಾಲರ್) ಆಗಿದೆ.

"ಲಾಭಕ್ಕಾಗಿ ಕೊರೊನಾವೈರಸ್ ಲಸಿಕೆ ಮಾರುವುದಿಲ್ಲ"

"ಕೊರೊನಾವೈರಸ್ ಲಸಿಕೆಯ ಅಗತ್ಯ ಪ್ರಮಾಣವನ್ನು ಭಾರತಕ್ಕೆ ಯಾವುದೇ ಲಾಭದ ನಿರೀಕ್ಷೆಯಿಲ್ಲದೇ ನೀಡಲಾಗಿದೆ. ಒಂದು ಬಾರಿ ಲಸಿಕೆಗೆ ಅನುಮೋದನೆ ನೀಡಿದ ನಂತರದಲ್ಲಿ ಜಗತ್ತಿನ ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯವನ್ನು ಹೊಂದಿರುವ ರಾಷ್ಟ್ರಗಳಿಗೆ ಲಾಭವನ್ನು ಅಪೇಕ್ಷಿಸದಂತೆ ಲಸಿಕೆ ರವಾನಿಸಲಾಗುತ್ತದೆ. ಪ್ರಸ್ತುತ ಭಾರತೀಯ ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ ನಡೆಸಲಾಗುತ್ತಿದ್ದು, ಗೌಪ್ಯ ವಿಷಯಗಳನ್ನು ಬಿಚ್ಚಿಡುವುದಕ್ಕೆ ಸಾಧ್ಯವಿಲ್ಲ" ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ದೇಶದಲ್ಲಿ ಕೊವಿಡ್-19 ಲಸಿಕೆಗಳು ಮತ್ತು ಅದರ ಬೆಲೆ

ದೇಶದಲ್ಲಿ ಕೊವಿಡ್-19 ಲಸಿಕೆಗಳು ಮತ್ತು ಅದರ ಬೆಲೆ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯ ಒಂದು ಡೋಸ್ ಬೆಲೆ 600 ರೂಪಾಯಿ. ಆಗಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ 1 ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 1200 ರೂಪಾಯಿ ನಿಗದಿಗೊಳಿಸಲಾಗಿದೆ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗೆ 995 ರೂಪಾಯಿ ಆಗುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾವೈರಸ್ ಲಸಿಕೆ ಬೆಲೆ ಎಷ್ಟು?

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾವೈರಸ್ ಲಸಿಕೆ ಬೆಲೆ ಎಷ್ಟು?

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 400 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ನೀಡಲಾಗುತ್ತಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 600 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಲಸಿಕೆ ವಿತರಣೆಗೆ ಗರಿಷ್ಠ 150 ರೂಪಾಯಿ ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕೇಂದ್ರದಿಂದಲೇ ಶೇ.75ರಷ್ಟು ಕೊರೊನಾ ಲಸಿಕೆ ಉಚಿತ

ಕೇಂದ್ರದಿಂದಲೇ ಶೇ.75ರಷ್ಟು ಕೊರೊನಾ ಲಸಿಕೆ ಉಚಿತ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಾಲದ ಸಂದಿಗ್ಧತೆಯನ್ನು ಅರಿತುಕೊಂಡ ಕೇಂದ್ರ ಸರ್ಕಾರವು ಶೇ.75ರಷ್ಟು ಲಸಿಕೆಯನ್ನು ಉಚಿತವಾಗಿ ಪೂರೈಸುವುದಕ್ಕೆ ನಿರ್ಧರಿಸಿದೆ. ಪ್ರಧಾನಿ ಮೋದಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿಯೂ ಆಗಿದೆ. ಶೇ.25ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವುದಕ್ಕೆ ಲಸಿಕೆ ಉತ್ಪಾದನೆ ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ ಪೂರೈಸುವ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಲು ಅನುಮತಿಸಲಾಗಿದೆ.

English summary
Which Is The More Cheapest Coronavirus Vaccine In India. Read Here More Information About Vaccine Price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X