ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ದಾಳಿಯಿಂದ ಸೇಫ್ ಆಗಿರುವ ರಾಜ್ಯಗಳು ಯಾವುದು

|
Google Oneindia Kannada News

ದೆಹಲಿ, ಮಾರ್ಚ್ 18: ಭಾರತದಲ್ಲಿ ಕೊರೊನಾ ವೈರಸ್ ದಾಳಿ ದಿನದಿಂದ ದಿನಕ್ಕೆ ಹರಡುತ್ತಲೆ ಇದೆ. ಇದುವರೆಗೂ ನಮ್ಮ ದೇಶದಲ್ಲಿ ಸುಮಾರು 147 ಸೋಂಕಿತರ ದೃಢಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಮಹಾರಾಷ್ಟ್ರ ಒಂದರಲ್ಲಿ 41ಕ್ಕೂ ಹೆಚ್ಚು ಕೇಸ್ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ ಬಳಿಕ ಕೇರಳ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ಭಾರತದಾದ್ಯಂತ ಕೊರೊನಾ ಸೋಂಕು ಹರಡಿದ್ದು, 14 ರಾಜ್ಯಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದ 14 ರಾಜ್ಯಗಳಲ್ಲಿ ಇದುವರೆಗೂ ಒಂದೇ ಒಂದು ಕೇಸ್ ಕೂಡ ದೃಢ ಪಟ್ಟಿಲ್ಲ.

ಕರ್ನಾಟಕದಲ್ಲೂ ಸೋಂಕಿತರ ಸಂಖ್ಯಕ್ಕೆ 11ಕ್ಕೆ ಏರಿದೆ. ತಜ್ಞರ ಪ್ರಕಾರ, ಭಾರತದಲ್ಲಿ ಕೊರೊನಾ ಸೋಂಕು ಹರಡುತ್ತಿರುವುದು ಎರಡನೇ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಮತ್ತಷ್ಟು ಜನರಿಗೆ ಹಾಗೂ ಬೇರೆ ರಾಜ್ಯಗಳಿಗೂ ಹರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಿದ್ರೆ, ಸದ್ಯಕ್ಕೆ ಕೊರೊನಾ ದಾಳಿಯಿಂದ ಸುರಕ್ಷತೆಯಾಗಿರುವ ಭಾರತ ರಾಜ್ಯಗಳು ಯಾವುದು? ಮುಂದೆ ಓದಿ...

ಕೊರೊನಾ ಈ ದಿನದ ವಿವರ: ಕರ್ನಾಟಕದಲ್ಲಿ 1 ಪಾಸಿಟಿವ್, 71 ನೆಗಟಿವ್ಕೊರೊನಾ ಈ ದಿನದ ವಿವರ: ಕರ್ನಾಟಕದಲ್ಲಿ 1 ಪಾಸಿಟಿವ್, 71 ನೆಗಟಿವ್

ಒಟ್ಟು 13 ರಾಜ್ಯದಲ್ಲಿ ಸೋಂಕು ಪತ್ತೆ

ಒಟ್ಟು 13 ರಾಜ್ಯದಲ್ಲಿ ಸೋಂಕು ಪತ್ತೆ

ಕೇರಳ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ಆಂಧ್ರಪ್ರದೇಶ, ಉತ್ತರಖಂಡ್, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸದ್ಯ ಕೊರೊನಾ ಸೋಂಕು ದೃಢವಾಗಿದೆ.

4 ಕೇಂದ್ರಾಡಳಿತ ಪ್ರದೇಶ

4 ಕೇಂದ್ರಾಡಳಿತ ಪ್ರದೇಶ

ದೇಶದ 13 ರಾಜ್ಯಗಳಲ್ಲಿ ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೊನಾ ಹರಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಕ್, ದೆಹಲಿ ಹಾಗೂ ಪುದುಚೇರಿಯಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿದ್ದಾರೆ. ಈ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 22 ಕೇಸ್ ಖಚಿತವಾಗಿದೆ.

ದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರುದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರು

ಸೇಫ್ ಆಗಿರುವ ರಾಜ್ಯಗಳು

ಸೇಫ್ ಆಗಿರುವ ರಾಜ್ಯಗಳು

ಇನ್ನುಳಿದಂತೆ 15 ರಾಜ್ಯಗಳಲ್ಲಿ ಶಂಕಿತರ ಪತ್ತೆಯಾಗಿದ್ದರೂ, ಕೊರೊನಾ ಸೋಂಕು ದೃಢಪಟ್ಟಿಲ್ಲ. ಅರುಣಚಲ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್‌ಘಡ್, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ಮಣಿಪುರ್, ಮೇಘಲಾಯ, ಮಿಜೋರಾಂ, ನಾಗಲ್ಯಾಂಡ್, ಸಿಕ್ಕಿಂ, ತ್ರಿಪುರ ರಾಜ್ಯಗಳಲ್ಲಿ ಅಧಿಕೃತವಾಗಿ ಸೋಂಕು ದೃಢ ಪಟ್ಟಿಲ್ಲ.

ಮೂರು ಜನರು ಸಾವನ್ನಪ್ಪಿದ್ದಾರೆ

ಮೂರು ಜನರು ಸಾವನ್ನಪ್ಪಿದ್ದಾರೆ

ಇದುವರೆಗೂ ಭಾರತದಲ್ಲಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದ ಕಲಬುರ್ಗಿಯಲ್ಲಿ ಓರ್ವ ವೃದ್ದ, ದೆಹಲಿಯಲ್ಲಿ ಓರ್ವ ಮಹಿಳೆ ಹಾಗೂ ಮಹಾರಾಷ್ಟ್ರದಲ್ಲಿ ಹಿರಿಯ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

ಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯ

English summary
The Number of corona cases in india has risen to 147, maharashtra reporting the highest number of cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X