ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬ್ಲಡ್ ಮೂನ್' ಚಂದ್ರನನ್ನು ನೋಡುವ ಬಗೆ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಜುಲೈ 27: ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ತೀರಾ ಸಹಜ ಪ್ರಕ್ರಿಯೆ ಗ್ರಹಣಕ್ಕೆ ವಿಜ್ಞಾನಿಗಳ ಪಾಲಿನ ಕಲ್ಲುಗುಂಡು ಚಂದ್ರನನ್ನು 'ಬ್ಲೂ ಮೂನ್', 'ಬ್ಲಡ್ ಮೂನ್' 'ಸೂಪರ್ ಮೂನ್'ಎಂಬಿತ್ಯಾದಿ ಉಪಮೇಯದಿಂದ ಕರೆಯಲಾಗುತ್ತದೆ. ಇಂಥ ದೃಶ್ಯ ನೋಡಬೇಕಾದರೆ 104 ವರ್ಷಗಳ ತನಕ ಕಾಯಬೇಕು. 103 ನಿಮಿಷಗಳ ಈ ಖಗೋಳ ಕೌತುಕವನ್ನು ತಪ್ಪದೇ ವೀಕ್ಷಿಸಿ, ಆನಂದಿಸಿ ಎಂದು ವಿಜ್ಞಾನಿಗಳು ಕರೆ ನೀಡಿದ್ದಾರೆ.

ಜುಲೈ 27 ರಂದು ಸಂಭವಿಸುವ ಚಂದ್ರಗ್ರಹಣ 21 ನೇ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಸುಮಾರು ಮೂರು ಮುಕ್ಕಾಲು ತಾಸು ಚಂದ್ರ ಗ್ರಹಣಗ್ರಸ್ತವಾಗಲಿದ್ದಾನೆ.

ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?!ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?!

ಭಾರತದಲ್ಲಿ ಎಲ್ಲೆಲ್ಲೂ ಮಳೆ ಸುರಿಯುತ್ತಿರುವುದರಿಂದ ಈ ಖಗೋಳ ವಿಸ್ಮಯವನ್ನು ನೋಡುವುದಕ್ಕೆ ಅನೇಕ ಕಡೆಗಳಲ್ಲಿ ಸಾಧ್ಯವಾಗದೆ ಹೋಗಬಹುದು. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ದಕ್ಷಿಣ ಅಮೆರಿಕಗಳಲ್ಲಿ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ.

ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿ

ಜುಲೈ 27ರ ರಾತ್ರಿ 11:43 ರಿಂದ ಆರಂಭವಾಗಿ ನಂತರ ಜುಲೈ28 ರ ಬೆಳಗ್ಗಿನ ಜಾವ 3.47 ರವರೆಗೂ ಕಂಡುಬರುವ ಈ ಗ್ರಹಣವನ್ನು ನೋಡಲು ಅನೇಕ ಕಡೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 1 ಗಂಟೆಯಿಂದ 2.43 ರವರೆಗೆ ಚಂದ್ರ ಸಂಪೂರ್ಣ ಮರೆಯಾಗಲಿದ್ದು, ಮತ್ತೆ ಇಂಥ ಖಗ್ರಾಸ ಚಂದ್ರಗ್ರಹಣ ನೋಡಲು 2036 ರವರೆಗೆ ಕಾಯಬೇಕು. ಬ್ಲಡ್ ಮೂನ್ ನೋಡಲು 2123 ತನಕ ಕಾಯಬೇಕು. 21ನೇ ಶತಮಾನದ ಅತಿ ದೀರ್ಘವಾದ ಗ್ರಹಣ ಇದಾಗಿದೆ. ಆಕಾಶದಲ್ಲಿ ಚಂದಿರ ಕಾಣದಿದ್ದರೆ, ಆನ್ ಲೈನ್ ನಲ್ಲಿ ಟೈಮ್ ಅಂಡ್ ಡೇಟ್ ತಾಣ ಲೈವ್ ನೋಡಬಹುದು. ಇದಲ್ಲದೆ ನಾಸಾದ ವೆಬ್ ತಾಣದಲ್ಲೂ ಲೈವ್ ವೀಕ್ಷಿಸಬಹುದು

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ ರಾಜಭವನ ರಸ್ತೆಯಲ್ಲಿರುವ ನೆಹರೂ ತಾರಾಲಯದಲ್ಲಿ ಚಂದ್ರಗ್ರಹಣ ನೋಡಲು ವ್ಯವಸ್ಥೆ ಮಾಡಲಾಗಿದೆ. ಹಲವಾರು ಟೆಲಿಸ್ಕೋಪ್ ಗಳಿದ್ದು, ರಾತ್ರಿ 11.30 ರಿಂದ ಬೆಳಗ್ಗೆ 3 ಗಂಟೆ ತನಕ ವೀಕ್ಷಣೆಗೆ ಅವಕಾಶ ಇರುತ್ತದೆ. ಇದಲ್ಲದೆ, ಕೋರಮಂಗಲದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ನಲ್ಲೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಇದೆ.

ಚೆನ್ನೈನಲ್ಲಿ ಏಲ್ಲಿ ನೋಡಬಹುದು?

ಚೆನ್ನೈನಲ್ಲಿ ಏಲ್ಲಿ ನೋಡಬಹುದು?

21ನೇ ಶತಮಾನದ ಸುದೀರ್ಘವಾದ ಚಂದ್ರಗ್ರಹಣವನ್ನು ಬಿಎಂ ಬಿರ್ಲಾ ಪ್ಲಾನಿಟೋರಿಯಂನಲ್ಲಿ ನೋಡಬಹುದು. ರಾತ್ರಿ 11 ರಿಂದ ಬೆಳಗ್ಗೆ 4 ಗಂಟೆ ತನಕ ವ್ಯವಸ್ಥೆ ಮಾಡಲಾಗಿದೆ.

ದೆಹಲಿಯಲ್ಲಿ ಎಲ್ಲಿ ನೋಡಬಹುದು

ದೆಹಲಿಯಲ್ಲಿ ಎಲ್ಲಿ ನೋಡಬಹುದು

ಜುಲೈ 27ರ ರಾತ್ರಿ 11:43 ರಿಂದ ಆರಂಭವಾಗಿ ನಂತರ ಜುಲೈ28 ರ ಬೆಳಗ್ಗಿನ ಜಾವ 3.47 ರವರೆಗೂ ಕಂಡುಬರುವ ಈ ಗ್ರಹಣವನ್ನು ನೋಡಲು ಅನೇಕ ಕಡೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 1 ಗಂಟೆಯಿಂದ 2.43 ರವರೆಗೆ ಚಂದ್ರ ಸಂಪೂರ್ಣ ಮರೆಯಾಗಲಿದೆ. ದೆಹಲಿಯಲ್ಲಿ ನೆಹರೂ ತಾರಾಲಯದಲ್ಲಿ ರಾತ್ರಿ 10 ಗಂಟೆ ನಂತರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಮುಂಬೈ ಹಾಗೂ ಕೋಲ್ಕತ್ತಾದಲ್ಲಿ

ಮುಂಬೈ ಹಾಗೂ ಕೋಲ್ಕತ್ತಾದಲ್ಲಿ

ಮುಂಬೈನಲ್ಲಿ ನೆಹರೂ ತಾರಾಲಯದಲ್ಲಿ ನೋಡಬಹುದು. ಕೋಲ್ಕತ್ತಾದಲ್ಲಿ ಬಿರ್ಲಾ ಪ್ಲಾನಿಟೋರಿಯಂನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

English summary
A total lunar eclipse or as we call in Hindi, 'poorna chandra grahan' is all set to take place on the intervening night of July 27 and July 28, 2018. The Moon will disappear into the Earth's darkest shadow, known as the umbra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X