ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ಹೇಳಿಕೆ ನೀಡಿ ಟ್ವಿಟ್ಟರ್ ನಲ್ಲಿ ಡಿಗ್ಗಿ ಬೆತ್ತಲು!

By Mahesh
|
Google Oneindia Kannada News

ಭೋಪಾಲ್, ಸೆ.26: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸುವ ಮಹಿಳೆಯರಿಗಾಗಿ 10,000 ಬುರ್ಖಾಗಳನ್ನು ರಾಜ್ಯ ಬಿಜೆಪಿ ಖರೀದಿಸಿದೆ. ಇದಕ್ಕಾಗಿ 42 ಲಕ್ಷ ರೂ.ಗಳನ್ನು ರಿಯಲ್ ಎಸ್ಟೇಟ್ ಕಂಪನಿಯೊಂದು ಪಾವತಿ ಮಾಡಿದೆ ಎಂದು ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆ ಈಗ ನಗೆಪಾಟಲಾಗಿದೆ.

ಇಂಧೋರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, ಬುರ್ಖಾ ಖರೀದಿಸಿರುವ ಬಿಲ್ ಪ್ರದರ್ಶಿಸಿ, ಸ್ಥಳೀಯ ಟೈಲರ್ ವೊಬ್ಬರಿಗೆ ದಿಲೀಪ್ ಸಿಂಗ್ ಸೂರ್ಯವಂಶಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿ, ಬುರ್ಖಾ ಖರೀದಿಗಾಗಿ 42 ಲಕ್ಷ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಆದರೆ, ದಿಲೀಪ್ ಈ ಆರೋಪವನ್ನು ನಿರಾಕರಿಸಿದ್ದರು. ನಮ್ಮ ಕಂಪನಿ ಬುರ್ಖಾ ಖರೀದಿಸಲು ಯಾವ ಟೈಲರ್ ಗಳಿಗೂ ಹಣ ನೀಡಿಲ್ಲ. ಇದೊಂದು ನಕಲಿ ಬಿಲ್ ಎಂದು ಸ್ಪಷ್ಟನೆ ನೀಡಿದ್ದರು. ಬುರ್ಖಾ ಖರೀದಿಸಿದ್ದಾರೆ ಎಂದು ಆರೋಪಿಲಾದ ಜೀನತ್ ಟೈಲರ್ ಸಹ ಬುರ್ಖಾ ಮಾರಾಟ ಮಾಡಲಾಗಿದೆ ಎಂಬ ಆರೋಪ ತಳ್ಳಿ ಹಾಕಿದ್ದರು.

ಮದ್ಯಪ್ರದೇಶ ಬಿಜೆಪಿ ಘಟಕ ಸಹ ದಿಗ್ವಿಜಯ್ ಸಿಂಗ್ ಆರೋಪವನ್ನು ತಳ್ಳಿ ಹಾಕಿದೆ. ಕಾಂಗ್ರೆಸ್ ಕಳೆದ 50 ವರ್ಷಗಳಿಂದ ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಾ ಬಂದಿದೆ. ಈ ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಿವಾದ ಹುಟ್ಟು ಹಾಕಿದೆ ಎಂದು ರಾಜ್ಯ ಬಿಜೆಪಿ ಘಟಕ ಟೀಕಿಸಿದೆ. ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ದಿಗ್ವಿಜಯ್ ಅವರ ಬುರ್ಖಾ ವಿವಾದದ ಬಗ್ಗೆ ನಗೆಬುಗ್ಗೆ ಚಿಮ್ಮಿದೆ.. ಸಂಗ್ರಹಿತ ಟ್ವೀಟ್ ನೋಡಿ ಓದಿ ಆನಂದಿಸಿ...

ಡಿಗ್ಗಿ ಹೇಳಿದ್ದು ಸುಳ್ಳು

ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಹೇಳಿದ್ದು ಸುಳ್ಳು ಎಂದು ಸ್ವತಃ ಟೈಲರ್ ಹೇಳಿಕೆ ನೀಡಿದ್ದಾರೆ

ಮತ್ತೊಂದು ಟ್ವಿಸ್ಟ್

ನರೇಂದ್ರ ಮೋದಿ ಹಿಂಬಾಲಕರ ಜತೆ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡಾ ಬುರ್ಖಾ ಖರೀದಿ ಹಗರಣದಲ್ಲಿದ್ದಾರಂತೆ

ಹೀಗೊಂದು ಅಣಕು

ದಿಗ್ವಿಜಯ್ ಬುರ್ಖಾ ವಿವಾದದ ಬಗ್ಗೆ ಹಾಸ್ಯ

ಕೆಳಗೆ ಬಿದ್ದರು

ಜಟ್ಟಿ ಕೆಳಗೆ ಬಿದ್ದರು ಮೀಸೆ ಮಣ್ಣಾಗಲಿಲ್ಲ ಅಂದನಂತೆ

ಇನ್ನೊಂದು ಹಾಸ್ಯದ ಟ್ವೀಟ್

ಕಾಂಗ್ರೆಸ್ ಸಭೆಗಳಿಗೆ ಬುರ್ಖಾ ಖರೀದಿಸುವುದಿಲ್ಲ

ಡಿಗ್ಗಿ ಹೇಳಿದ್ದು ಸುಳ್ಳು

ಕಾಂಗ್ರೆಸ್ ಸುಳ್ಳು ಹೇಳುವುದು ಜನ್ಮಜಾತ ಕಲೆ

ಜೀವನ ಅವಧಿ ಹೆಚ್ಚಳ

ದಿಗ್ವಿಜಯ್ ಸಿಂಗ್ ತಮ್ಮ ಹಾಸ್ಯದ ಮೂಲಕ ಭಾರತೀಯರ ಜೀವಿತಾವಧಿ ಹೆಚ್ಚಿಸಿದ್ದಾರೆ.

ದಿಗ್ವಿಜಯ್ ಮಿಸ್ಸಿಂಗ್

ದಿಗ್ವಿಜಯ್ ಮಿಸ್ಸಿಂಗ್ ಅಂತೆ ಬುರ್ಖಾ ಹಾಕಿಕೊಂಡು ಪರಾರಿಯಂತೆ

English summary
The Congress party's spokesperson Digvijay Singh's remarks on "BJP buying 10, 000 burqas" landed him in a Twitter 'trouble' on Wednesday. Digvijay Singh was made a butt of jokes on social networking website Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X