ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ತಿಂಗಳಲ್ಲಿ ರೈಲ್ವೆ ನಿಲ್ದಾಣಗಳ ಆಸುಪಾಸಲ್ಲಿ 110 ವಲಸೆ ಕಾರ್ಮಿಕರು ಸಾವು

|
Google Oneindia Kannada News

ನವದಹಲಿ, ಜುಲೈ 10: ದೇಶದಲ್ಲಿ ಶ್ರಮಿಕ್ ರೈಲು ಸಂಚಾರ ಆರಂಭವಾದ ದಿನದಿಂದ ಇಲ್ಲಿಯವರೆಗೆ110 ಮಂದಿ ವಲಸೆ ಕಾರ್ಮಿಕರು ರೈಲ್ವೆ ನಿಲ್ದಾಣದ ಆಸುಪಾಸಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Recommended Video

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಕಾಮೇಗೌಡರು | KameGowda | Oneindia Kannada

ಕೊರೊನಾ ಸೋಂಕಿನಿಂದಾಗಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಕೆಲವು ಮಂದಿ ತಮ್ಮ ಊರುಗಳಿಗೆ ನಡೆದುಕೊಂಡು ಹೋದರು, ಕೆಲವರು ಸೈಕಲ್ ಮೇಲೆ ಇನ್ನೂ ಕೆಲವರು ಸಿಕ್ಕ ಸಿಕ್ಕ ವಾಹನಗಳಲ್ಲಿ ತೆರಳಿದರು. ಅಷ್ಟು ದೂರ ಕ್ರಮಿಸಲಾಗದೆ ದಾರಿ ಮಧ್ಯೆದಲ್ಲೇ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ, ಕೆಲವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ

ಮೇ 1 ರಿಂದ ಶ್ರಮಿಕ್ ರೈಲು ಓಡಾಟ ಆರಂಭವಾಗಿತ್ತು, ಅಂದಿನಿಂದ ಇಲ್ಲಿಯವರೆಗೆ ರೈಲ್ವೆ ಹಳಿ ಅಥವಾ ರೈಲ್ವೆ ನಿಲ್ದಾಣದ ಆಸುಪಾಸಿನಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.

when Shramik Special Trains Were Run 110 Migrants Died On Railway Premises

ಇದುವರೆಗೆ 63.07 ಲಕ್ಷ ಮಂದಿ 4611 ಶ್ರಮಿಕ ರೈಲುಗಳಲ್ಲಿ ತಮ್ಮ ಊರುಗಳನ್ನು ಸೇರಿದ್ದರು. ಅದರಲ್ಲಿ 110 ಮಂದಿ ಕಾರ್ಮಿಕರು ಹಲವು ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ. ಕಾರ್ಮಿಕರಿಗೆ ಆಹಾರ ಮತ್ತು ನೀರನ್ನು ಉಚಿತವಾಗಿ ವಿತರಿಸಲಾಗಿದ್ದ ಕಾರಣ ಅವರು ಹಸಿವಿನಿಂದ ಮೃತಪಟ್ಟಿಲ್ಲ ಎಂದು ಸರ್ಕಾರವು ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿತ್ತು.

2019ರಲ್ಲಿ ಪ್ರತಿ ನಿತ್ಯ ಸುಮಾರು 75 ರಷ್ಟು ಮಂದಿ ರೈಲ್ವೆ ಹಳಿಗಳಲ್ಲಿ ಬಿದ್ದು ಸಾವನ್ನಪ್ಪುತ್ತಿದ್ದರು,ಸಾಕಷ್ಟು ಸಂದರ್ಭದಲ್ಲಿ ಅದು ಆತ್ಮಹತ್ಯೆಯಾಗಿರುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
About 110 migrants died on Railway premises during the operation of Shramik Special trains since May 1, according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X