ಈರುಳ್ಳಿ ದರ ಯಾವಾಗ ಕಡಿಮೆಯಾಗುತ್ತೆ? ಇಲ್ಲಿದೆ ಮಾಹಿತಿ
ನವದೆಹಲಿ, ಡಿಸೆಂಬರ್ 2: ಕೆಜಿಗೆ 100 ರೂ. ದಾಟಿ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ ಯಾವಾಗ ಕಡಿಮೆಯಾಗುತ್ತೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಆದರೆ ಅದಕ್ಕೆ ಉತ್ತರ ಇಲ್ಲಿದೆ, ಶೀಘ್ರ 50ರೂ.ಗೆ ಬರಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು, ಹೊಸ ವರ್ಷದವರೆಗೂ ಈರುಳ್ಳಿ ಬೆಲೆ ಕಡಿಮೆಯಾಗುವ ಯಾವ ಸಾಧ್ಯತೆಯೂ ಕೂಡ ಇಲ್ಲ. ಜನವರಿವೆರಗೂ ಈರುಳ್ಳಿ ಬೆಲೆ ಕಡಿಮೆಯಾಗುವ ಮುನ್ಸೂಚನೆಯೇ ಇಲ್ಲ.

ಪ್ರವಾಹದಿಂದಾಗಿ ಬೆಳೆ ನಾಶ
ಈರುಳ್ಳಿ ಹೆಚ್ಚು ಬೆಳೆಯುವ ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ ಬೆಳೆ ನಾಶವಾದ ಕಾರಣ ಬೆಲೆ ಗಗನಕ್ಕೇರಿದೆ. ಈರುಳ್ಳಿ ಬೆಲೆ 100ರಿಂದ 120ರವರೆಗೂ ಇದೆ. ಏಕಾಏಕಿ ಈರುಳ್ಳಿ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಒಂದೊಮ್ಮೆ ಆಮದು ಮಾಡಿಕೊಂಡರೂ ಕೂಡ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸ ಕಂಡುಬರುವುದಿಲ್ಲ.
ಹೆಲ್ಮೆಟ್ ಧರಿಸಿ ಕಡಿಮೆ ಬೆಲೆಗೆ ಈರುಳ್ಳಿ ಮಾರಿದ ಸೊಸೈಟಿ ಸಿಬ್ಬಂದಿ

ಈಜಿಪ್ಟ್ ಹಾಗೂ ಟಿರ್ಕಿಯಿಂದ ಆಮದು
ಈಗಾಗಲೇ ಈಜಿಪ್ಟ್ ಮತ್ತು ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಈಜಿಪ್ಟ್‌ನಿಂದ 6090 ಟನ್ ಈರುಳ್ಳಿ ಆಮದಿಗೆ ಸರ್ಕಾರ ನಿರ್ಧರಿಸಿದೆ. ಅದು ಡಿಸೆಂಬರ್ ಎರಡನೇ ವಾರದಲ್ಲಿ ಮುಂಬೈಗೆ ಬರಲಿದೆ.

ಈಜಿಪ್ಟ್ ಈರುಳ್ಳಿ ಬಂದರೆ ಬೆಲೆ ಎಷ್ಟಾಗುತ್ತೆ?
ಈಜಿಪ್ಟ್‌ನಿಂದ ಆಮದು ಮಾಡಿಕೊಂಡಿರುವ ಈರುಳ್ಳಿ ಬಂದರೂ ಕೂಡ 60ರಿಂದ 65 ರೂ. ಇರಲಿದೆ. ಅದಕ್ಕಿಂತ ಕಡಿಮೆಯಾಗುವುದು ಅನುಮಾನ ಎನ್ನಲಾಗಿದೆ. ಇನ್ನು ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆ ಆರ್ಡರ್ ಮಾಡಿದೆ.
ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?

ಸಚಿವ ಸಂಪುಟ 1.2 ಲಕ್ಷ ಟನ್ ಈರುಳ್ಳಿ ಆಮದಿಗೆ ಒಪ್ಪಿಗೆ
ಕಳೆದ ತಿಂಗಳು ಸಚಿವ ಸಂಪುಟದಲ್ಲಿ 1.2 ಲಕ್ಷ ಟನ್ ಈರುಳ್ಳಿ ಆಮದಿಗೆ ಒಪ್ಪಿಗೆ ಸೂಚಿಸಿತ್ತು.ಈಗಾಗಲೇ ಈರುಳ್ಳಿ ದರದ ಮೇಲೆ ನಿಗಾ ಇಡಲು ಸಚಿವ ಸಮೂಹವನ್ನು ರಚಿಸಲಾಗಿದೆ. ಹಣಕಾಸು , ಗ್ರಾಹಕ ವ್ಯವಹಾರ, ಕೃಷಿ ಹಾಗೂ ಸಾರಿಗೆ ಸಚಿವರು ಈ ಸಮೂಹದಲ್ಲಿದ್ದಾರೆ.