ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೋಗಿಗಳು ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು: ವಿವರಣೆ ನೀಡಿದ ಆರೋಗ್ಯ ಸಚಿವಾಲಯ

|
Google Oneindia Kannada News

ನವದೆಹಲಿ, ಮೇ 4: ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ.

ಆದರೆ ಕೊರೊನಾ ಸೋಂಕಿತರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ ಎನ್ನುತ್ತಿದೆ ಆರೋಗ್ಯ ಸಚಿವಾಲಯ. ಕೊರೊನಾಗೆ ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯಬಹುದು ಎಂದು ಹೇಳಿದ್ದು, ಕೆಲವು ತೀವ್ರ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂದಿದೆ. ಆ ಲಕ್ಷಣಗಳೇನು ಎಂಬುದನ್ನು ಸಚಿವಾಲಯ ಪಟ್ಟಿ ಮಾಡಿದೆ. ಮುಂದೆ ಓದಿ...

 ಎದೆ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸುವಂತಿಲ್ಲ

ಎದೆ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸುವಂತಿಲ್ಲ

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಸೋಮವಾರ ಸೋಂಕಿನ ತೀವ್ರ ಲಕ್ಷಣಗಳನ್ನು ಪಟ್ಟಿ ಮಾಡಿದ್ದು, ಕೊರೊನಾ ಸೋಂಕಿತರು ಯಾವ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂಬುದನ್ನು ವಿವರಿಸಿದೆ. ಹೋಂ ಐಸೊಲೇಷನ್‌ನಲ್ಲಿರುವ ರೋಗಿಯ ಆಮ್ಲಜನಕ ಮಟ್ಟ ಕಡಿಮೆಯಾದಂತೆ ಅನ್ನಿಸಿದರೆ ಅಥವಾ ಎದೆನೋವಿನ ಅನುಭವವಾದರೆ ಆಸ್ಪತ್ರೆಗೆ ದಾಖಲಾಗಬೇಕು ಎಂದು ತಿಳಿಸಿದೆ.

ಯಾವ ಕೊರೊನಾ ಸೋಂಕಿತರಿಗೆ 'ಸಿಟಿ ಸ್ಕ್ಯಾನ್' ಹೆಚ್ಚು ಅಪಾಯಕಾರಿ!?ಯಾವ ಕೊರೊನಾ ಸೋಂಕಿತರಿಗೆ 'ಸಿಟಿ ಸ್ಕ್ಯಾನ್' ಹೆಚ್ಚು ಅಪಾಯಕಾರಿ!?

 ಅತಿಯಾದ ಸುಸ್ತು ಅನುಭವವಾದರೆ ಆಸ್ಪತ್ರೆಗೆ ದಾಖಲಾಗಿ

ಅತಿಯಾದ ಸುಸ್ತು ಅನುಭವವಾದರೆ ಆಸ್ಪತ್ರೆಗೆ ದಾಖಲಾಗಿ

ಆಮ್ಲಜನಕ ಮಟ್ಟವು 93ಕ್ಕಿಂತ ಕಡಿಮೆ ಇರುವುದು, ಅತಿಯಾದ ಸುಸ್ತು ಹಾಗೂ ಎದೆ ನೋವು ಕೊರೊನಾ ರೋಗಿಯ ಗಂಭೀರತೆಯ ಲಕ್ಷಣಗಳಾಗಿದ್ದು, ಅವರಿಗೆ ವಿಶೇಷ ಕಾಳಜಿಯ ಅವಶ್ಯಕತೆಯಿರುತ್ತದೆ ಎಂದು ತಿಳಿಸಿದೆ. ಈ ಲಕ್ಷಣಗಳಿದ್ದವರು ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿರಬೇಕಾಗುತ್ತದೆ ಎಂದು ಏಮ್ಸ್‌ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ವಿವರಿಸಿದ್ದಾರೆ.

 ಉಸಿರಾಟದ ಮೇಲೆ ನಿಗಾ ಇಡಬೇಕು

ಉಸಿರಾಟದ ಮೇಲೆ ನಿಗಾ ಇಡಬೇಕು

ಏಪ್ರಿಲ್ 28ರಂದು ಸಚಿವಾಲಯವು ಹೋಂ ಐಸೊಲೇಷನ್‌ನಲ್ಲಿರುವವರಿಗೆ ಹಾಗೂ ಸೌಮ್ಯ ಸ್ವರೂಪದ ಗುಣಲಕ್ಷಣಗಳಿದ್ದವರಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿತ್ತು. ಹೋಂ ಐಸೊಲೇಷನ್‌ನಲ್ಲಿರುವವರು ನಿರಂತರವಾಗಿ ಉಷ್ಣತೆ, ಹೃದಯ ಬಡಿತ ಹಾಗೂ ಉಸಿರಾಟದ ಮೇಲೆ ನಿಗಾ ಇಡುವಂತೆ ಸೂಚಿಸಿತ್ತು.

ಕರ್ನಾಟಕದಲ್ಲಿ 44438 ಮಂದಿ ಕೊರೊನಾ ಸೋಂಕಿತರು ಪತ್ತೆ, 239 ಮಂದಿ ಸಾವುಕರ್ನಾಟಕದಲ್ಲಿ 44438 ಮಂದಿ ಕೊರೊನಾ ಸೋಂಕಿತರು ಪತ್ತೆ, 239 ಮಂದಿ ಸಾವು

Recommended Video

RCB ಅಭಿಮಾನಿಗಳಿಗೆ ಎರೆಡು ವಿಚಾರಕ್ಕೆ ಬೇಜಾರು | Oneindia Kannada
 ಕೆಮ್ಮು ಕಡಿಮೆಯಾಗಿಲ್ಲವೆಂದರೆ ವೈದ್ಯರ ಸಲಹೆ ಪಡೆಯಿರಿ

ಕೆಮ್ಮು ಕಡಿಮೆಯಾಗಿಲ್ಲವೆಂದರೆ ವೈದ್ಯರ ಸಲಹೆ ಪಡೆಯಿರಿ

ಐದು ದಿನಕ್ಕಿಂತಲೂ ಹೆಚ್ಚು ಅವಧಿ ಕೆಮ್ಮು ಉಳಿದುಕೊಂಡಿದ್ದರೆ ಅಂಥವರಿಗೂ ವೈದ್ಯಕೀಯ ನೆರವಿನ ಅವಶ್ಯಕತೆಯಿರುತ್ತದೆ. ರೋಗಿಯಲ್ಲಿ ಉಸಿರಾಟಕ್ಕೆ ತೊಂದರೆ ಹಾಗೂ ಆಕ್ಸಿಜನ್ ಮಟ್ಟದಲ್ಲಿ ಏರಿಳಿತವಾದರೆ ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವಂತಿಲ್ಲ. ಅಂಥವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲೇಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

English summary
When corona patient need to get hospitalised? Health Ministry lists symptoms and warning signs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X