ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿಬಾಬಾ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಬೇಹುಗಾರಿಕಾ ಸಂಸ್ಥೆ

ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸರಿ ಸುಮಾರು 13 ಮಿಲಿಯನ್ ಕಡತಗಳನ್ನು ಬಹಿರಂಗ ಪಡಿಸಿದ್ದು, ಇದರಲ್ಲಿ ಪುಟ್ಟಪರ್ತಿ ಸಾಯಿಬಾಬಾ ಅವರಿಗೆ ಸಂಬಂಧಿಸಿದ ಅಧ್ಯಾಯ ಕೂಡಾ ಇದೆ ಎಂದು ತಿಳಿದು ಬಂದಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 24: ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸರಿ ಸುಮಾರು 13 ಮಿಲಿಯನ್ ಕಡತಗಳನ್ನು ಬಹಿರಂಗ ಪಡಿಸಿದ್ದು, ಇದರಲ್ಲಿ ಪುಟ್ಟಪರ್ತಿ ಸಾಯಿಬಾಬಾ ಅವರಿಗೆ ಸಂಬಂಧಿಸಿದ ಅಧ್ಯಾಯ ಕೂಡಾ ಇದೆ ಎಂದು ತಿಳಿದು ಬಂದಿದೆ.

ಪುಟಪರ್ತಿಯ ಸತ್ಯ ಸಾಯಿಬಾಬಾ ಕುರಿತು ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ(ಸಿಐಎ) 1990ರಲ್ಲಿ ವಿಶೇಷ ತನಿಖಾ ವರದಿ ತಯಾರಿಸಿತ್ತು. ಈಗ ಈ ವರದಿ ಸಾರ್ವಜನಿಕರ ಮುಂದಿಡಲಾಗಿದೆ.

ಧಾರ್ವಿುಕ ಗುರು ಸಾಯಿಬಾಬಾರ ನೀತಿ, ಚಿಂತನೆಗಳು ಹೇಗೆ ಜಾಗತಿಕ ಮಟ್ಟದಲ್ಲಿ ಪ್ರತ್ಯೇಕ ಧರ್ಮ ಸ್ಥಾಪಿಸುವ ಶಕ್ತಿ ಹೊಂದಿತ್ತು ಎಂಬುದನ್ನು ವಿವರಿಸಲಾಗಿದೆ.

When CIA kept tabs on Puttaparthi’s Sathya Sai Baba

ಸಾಯಿಬಾಬಾರ ತತ್ವವನ್ನು ಜಾಗತಿಕವಾಗಿ ಬಹಳಷ್ಟು ಜನರು ಅನುಸರಿಸುತ್ತಿದ್ದರು. ಒಂದು ಧರ್ಮ ಸ್ಥಾಪನೆಗೆ ಅಗತ್ಯವಾದಷ್ಟು ಸರಕನ್ನು ಸಾಯಿಬಾಬಾರ ಚಿಂತನೆ ಮತ್ತು ತತ್ವ ಹೊಂದಿದ್ದು, ವಿಶ್ವಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಸಾಯಿಬಾಬಾರ ಬೆಂಬಲಿಗರು ಮತ್ತು ಅನುಯಾಯಿಗಳಿದ್ದರು ಎಂದು ಸಿಐಎ ಹೇಳಿದೆ.

ಸಿಐಎ 1940ರಿಂದ ಈಚೆಗಿನ 9,30,000 ಪುಟಗಳ ದಾಖಲೆ ಮತ್ತು ತನಿಖಾ ವರದಿಯನ್ನು ತನ್ನ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಸಾಯಿಬಾಬಾರ ಕುರಿತ 16 ಪುಟಗಳ ಗುಪ್ತಚರ ವರದಿಯಲ್ಲಿಯೂ ಇದೆ.

ಸಾಯಿಬಾಬಾ ಪ್ರಭಾವಿಯಾಗಿದ್ದರು. ವಿವಿಧ ಪವಾಡ ಮತ್ತು ಚಮತ್ಕಾರ ನಡೆಸುವ ಮೂಲಕ ಅಪಾರ ಭಕ್ತರನ್ನು ಹೊಂದಿದ್ದರು ಎಂದು ವರದಿ ಹೇಳಿದ್ದು, ಅವರ ಕುರಿತು ಸಿಐಎ ವಿಶೇಷವಾಗಿ ಗಮನಹರಿಸಿತ್ತು ಎಂದಿದೆ. ಹಲವು ಧಾರ್ವಿುಕ ಮುಖಂಡರು ಹಾಗೂ ನಾಯಕರ ಮೇಲೂ ಸಿಐಎ ಕಣ್ಣಿತ್ತು ಎನ್ನಲಾಗಿದೆ. ಈ ವರದಿಯನ್ನು ಸಂಪೂರ್ಣವಾಗಿ ಇಲ್ಲಿ ಓದಬಹುದು.

English summary
Among the 13 million declassified documents by the Central Intelligence Agency is one relating to philanthropist and guru, Sathya Sai Baba. One report titled Cultural Trends Study: India's Sai Baba Movement was marked as 'secret' and was not meant to be released to any foreign national.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X