ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಟ್ಟ ಮೊದಲ ಮಹಿಳಾ ಮುಖ್ಯಮಂತ್ರಿ ನಿರೀಕ್ಷೆಯಲ್ಲಿ ಮೇಘಾಲಯ

By Mahesh
|
Google Oneindia Kannada News

ಶಿಲ್ಲಾಂಗ್, ಮಾರ್ಚ್ 05: ಮೇಘಗಳ ನಾಡು ಮೇಘಾಲಯದಲ್ಲಿ ಈ ಬಾರಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಸ್ಥಾಪಕ ಪಿ.ಎ ಸಂಗ್ಮಾ ಅವರ ಕುಟುಂಬಕ್ಕೆ ಈ ಬಾರಿ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಾತ್ರಿಯಾಗಿದೆ.

ಪಿ.ಎ ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಹಾಗೂ ಪುತ್ರ ಜೇಮ್ಸ್ ಸಂಗ್ಮಾ ಇಬ್ಬರು ಕ್ರಮವಾಗಿ ಡೌತ್ ಟುರಾ ಹಾಗೂ ಡಡೆಂಗ್ರೆ ಕ್ಷೇತ್ರಗಳಿಂದ ಈ ಬಾರಿ ಜಯಭೇರಿ ಬಾರಿಸಿದ್ದಾರೆ.

ಕಳೆದ ಬಾರಿ 2 ಸ್ಥಾನ ಮಾತ್ರ ಗೆದ್ದಿದ್ದ ಕೊನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಈ ಬಾರಿ 19 ಸ್ಥಾನ ಗಳಿಸಿದ್ದು, ಬಿಜೆಪಿ ಬೆಂಬಲದಿಂದ ಇತರೆ ಪಕ್ಷಗಳು ಹಾಗೂ ಪಕ್ಷೇತರರ ನೆರವಿನಿಂದ ಸರ್ಕಾರ ರಚನೆಗೆ ಮುಂದಾಗಿದೆ.

When can Meghalaya get its first woman chief minister?

2003ರಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದು, 2010ರಿಂದ ಮುಕುಲ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದಾರೆ. 2013ರಲ್ಲಿ ಕಾಂಗ್ರೆಸ್ 28, ಎನ್ ಪಿಪಿ 2 ಸ್ಥಾನಗಳಿಸಿತ್ತು.

ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಯ ಕೊನ್ರಾಡ್ ಸಂಗ್ಮಾ ಅವರು ರಾಜ್ಯಪಾಲರ ಬಳಿ ತೆರಳಿ ನೀಡಿರುವ ಬೆಂಬಲಿತರ ಪಟ್ಟಿ ಪ್ರಕಾರ, ಎನ್ ಪಿಪಿ(19) + ಯುಡಿಪಿ (6) + ಪಿಡಿಎಫ್ (4) + ಬಿಜೆಪಿ (2) + ಎಚ್ ಎಸ್ ಪಿ ಡಿಪಿ (2) + ಪಕ್ಷೇತರ (1) =34, 59 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 30 ಸ್ಥಾನ ಪಡೆದ ಪಕ್ಷ ಅಧಿಕಾರ ಸ್ಥಾಪನೆಗೆ ಮುಂದಾಗಬಹುದಾಗಿದೆ.

English summary
When can Meghalaya get its first woman chief minister? matrilineal state of Meghalaya wish to have new CM from Sangma family. Agatha Sangma sister of designated CM Conrad Sangma is the race for CM Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X