ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ: 200 ಎಕರೆ ಪ್ರದೇಶದ ಗೋಧಿ ಬೆಳೆ ಅಗ್ನಿಗಾಹುತಿ, ರೈತರ ಅಳಲು

|
Google Oneindia Kannada News

ಕರ್ನಾಲ್, ಏಪ್ರಿಲ್ 11: ಹರಿಯಾಣದ ಕರ್ನಾಲ್ ಜಿಲ್ಲೆಯ ಕಚ್ವಾ ಗ್ರಾಮದ ಜಮೀನಿನಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, 200 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ ಬೆಳೆ ನಾಶವಾಗಿದೆ. ಸುಮಾರು 200 ಎಕರೆಯಲ್ಲಿ ಹರಡಿರುವ ಗೋಧಿ ಬೆಳೆ ಬೂದಿಯಾಗಿದೆ.

ಬೆಳೆ ಕಟಾವು ಮಾಡಿದ ನಂತರ ಹೊಲವನ್ನು ಸಮ ಮಾಡಲು ಕೆಲಸ ಮಾಡುತ್ತಿದ್ದ ರೀಪರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸಂತ್ರಸ್ತ ರೈತರು ತಿಳಿಸಿದ್ದಾರೆ. 1 ಕೋಟಿ ಮೌಲ್ಯದ ಬೆಳೆ ಹಾಗೂ ಮೇವು ನಾಶವಾಗಿದೆ ಎಂದು ರೈತರು ತಿಳಿಸಿದರು.

ಉಕ್ರೇನ್‌ ಯುದ್ಧ: ಹಲವು ದೇಶಗಳಿಗೆ ಗೋಧಿ ರಫ್ತಿನತ್ತ ಭಾರತದ ಚಿತ್ತಉಕ್ರೇನ್‌ ಯುದ್ಧ: ಹಲವು ದೇಶಗಳಿಗೆ ಗೋಧಿ ರಫ್ತಿನತ್ತ ಭಾರತದ ಚಿತ್ತ

"ಫಿರೋಜ್‌ಪುರ ಗ್ರಾಮದಲ್ಲಿ ರೀಪರ್‌ನಿಂದ ಬೆಂಕಿ ಕಾಣಿಸಿಕೊಂಡಿತು, ಇದು ಐದು ಕಿಲೋಮೀಟರ್ ಪ್ರದೇಶವನ್ನು ನಾಶಪಡಿಸಿತು. ಅಗ್ನಿಶಾಮಕ ದಳವಿಲ್ಲದೆ ಬೆಂಕಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು. ಸುಮಾರು 200 ಎಕರೆ ಗೋಧಿ ಬೆಳೆ ನಾಶವಾಯಿತು," ಎಂದು ಸಂತ್ರಸ್ತ ರೈತ ರಾಮನ್ ಕುಮಾರ್ ಎಎನ್‌ಐಗೆ ತಿಳಿಸಿದರು.

Wheat crop on 200 acres destroyed in fire in Haryanas Karnal

ಒಂದು ಗಂಟೆ ತಡವಾಗಿ ತಲುಪಿದ ಅಗ್ನಿಶಾಮಕ ದಳ ಸಿಬ್ಬಂದಿಗಳು

"ನನ್ನ ಬಳಿ ಇದ್ದ ಆರು ಎಕರೆ ಜಮೀನು ಈಗ ಪಾಳುಬಿದ್ದಿದೆ, ತಿನ್ನಲು ಆಹಾರವಿಲ್ಲ, ಪ್ರಾಣಿಗಳಿಗೆ ಮೇವೂ ಇಲ್ಲ," ಎಂದು ಮತ್ತೊಬ್ಬ ರೈತ ಹೇಳಿದರು. ಅಗ್ನಿಶಾಮಕ ದಳ ಒಂದು ಗಂಟೆ ತಡವಾಗಿ ತಲುಪಿತು ಎಂದು ರೈತರು ತಿಳಿಸಿದ್ದಾರೆ. ಆದರೆ, ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಯಲ್ಲಿ ಬೆಂಕಿ ನಂದಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಕೂಡಲೇ ಮಹಿಳೆಯರು ಸೇರಿದಂತೆ ರೈತರು ಹೊಲದ ಬಳಿ ಜಮಾಯಿಸಿ ಬೆಂಕಿಯನ್ನು ನಂದಿಸುವ ಯತ್ನವನ್ನು ಮಾಡಿದ್ದಾರೆ. ಆದರೆ ಐದು ಅಗ್ನಿಶಾಮಕದಳ ವಾಹನವು ಸುಮಾರು ಗಂಟೆಗಳ ಸ್ಥಳಕ್ಕೆ ಆಗಮಿಸಿದೆ ಎಂದು ರೈತರು ಆರೋಪ ಮಾಡಿದ್ದಾರೆ.

ಪಿಎಂ ಕಿಸಾನ್‌ ಇ-ಕೆವೈಸಿ ಗಡುವು ವಿಸ್ತರಣೆ: ಇ-ಕೆವೈಸಿ ಮಾಡುವುದು ಹೇಗೆ?ಪಿಎಂ ಕಿಸಾನ್‌ ಇ-ಕೆವೈಸಿ ಗಡುವು ವಿಸ್ತರಣೆ: ಇ-ಕೆವೈಸಿ ಮಾಡುವುದು ಹೇಗೆ?

ರೀಪರ್ ಯಂತ್ರದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿತು ಮತ್ತು ಕೆಲವೇ ನಿಮಿಷಗಳಲ್ಲಿ ಹಲವಾರು ಎಕರೆಗಳಿಗೆ ವ್ಯಾಪಿಸಿತು. ನೊಂದ ರೈತ ಮಹೇಂದರ್ ಸಿಂಗ್, ಬೆಳೆ ಕಟಾವಿಗೆ ಸಿದ್ಧವಾಗಿದ್ದು, ಕಟಾವು ಯಂತ್ರಕ್ಕಾಗಿ ಕಾಯುತ್ತಿದ್ದೇನೆ. ಆದರೆ ಈಗ ಬೆಂಕಿಯಿಂದ 10 ಎಕರೆಯಲ್ಲಿದ್ದ ನನ್ನ ಬೆಳೆ ಬೂದಿಯಾಯಿತು ಎಂದು ಅಳಲುತೋಡಿಕೊಂಡಿದ್ದಾರೆ. ಕಚ್ವಾ ಗ್ರಾಮದ ಮತ್ತೊಬ್ಬ ರೈತ ಫೂಲ್ ಸಿಂಗ್ ಆರು ಎಕರೆಯಲ್ಲಿನ ಬೆಳೆ ನಾಶವಾಗಿದೆ. ರೈತರಿಗೆ ಸಹಾಯ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹ ಮಾಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೇಳುವುದು ಏನು?

"ಕಟಾವಿಗೆ ಬಂದ ಗೋಧಿ ಬೆಳೆಗಳ ಅಡಿಯಲ್ಲಿ ಬೆಂಕಿ ದೊಡ್ಡ ಪ್ರದೇಶಕ್ಕೆ ವ್ಯಾಪಿಸಿದ್ದರಿಂದ ರೈತರ ಸಹಾಯದಿಂದ ಬೆಂಕಿಯನ್ನು ನಿಯಂತ್ರಿಸಲು ಐದು ಟೆಂಡರ್‌ಗಳನ್ನು ಬಳಸಲಾಯಿತು," ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.. ಆದರೆ ತಡವಾಗಿ ಘಟನಾ ಪ್ರದೇಶಕ್ಕೆ ಬಂದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Recommended Video

ಅಸಲಿಗೆ Pontingಗೆ ಅಷ್ಟೊಂದು ಕೋಪ ಬಂದಿದ್ದೇಕೆ ? | Oneindia Kannada

ಇನ್ನು ನೊಂದ ರೈತರಿಗೆ ಪರಿಹಾರದ ಬೇಡಿಕೆಯ ಕುರಿತು ಮಾತನಾಡಿದ ಕರ್ನಾಲ್ ಜಿಲ್ಲಾಧಿಕಾರಿ ಅನೀಶ್ ಯಾದವ್, ಜಿಲ್ಲಾಡಳಿತವು ಸೂಕ್ತ ಕ್ರಮಕ್ಕಾಗಿ ಹಣಕಾಸು ಆಯುಕ್ತರ (ಕಂದಾಯ) ಕಚೇರಿಗೆ ವರದಿಯನ್ನು ಕಳುಹಿಸುತ್ತದೆ ಎಂದು ಹೇಳಿದರು.

English summary
Wheat crop on 200 acres destroyed in fire in Haryana's Karnal district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X