ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಫೇಕ್ ನ್ಯೂಸ್ ತಡೆಯಲು ವಾಟ್ಸಾಪ್ ಹೊಸ ಮಾರ್ಗ

|
Google Oneindia Kannada News

ನವದೆಹಲಿ, ಏಪ್ರಿಲ್ 3: ಚುನಾವಣೆಯ ಹೊಸ್ತಿಲಿನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ತಡೆಯಲು ಸಂದೇಶ ವಾಹಕ ವಾಟ್ಸಾಪ್ 'ಚೆಕ್‌ಪಾಯಿಂಟ್ ಟಿಪ್‌ಲೈನ್'ಅನ್ನು ಮಂಗಳವಾರ ಆರಂಭಿಸಿದೆ.

ಇದರಲ್ಲಿ ಜನರು ಸಂದೇಶದಲ್ಲಿ ಪಡೆದುಕೊಂಡ ಮಾಹಿತಿಯ ಅಧಿಕೃತತೆಯನ್ನು ಪರಿಶೀಲಿಸಬಹುದಾಗಿದೆ.

ವಾಟ್ಸಾಪ್‌ನಲ್ಲಿ ದೇಶವಿರೋಧಿ ಮೆಸೇಜ್: ಆರೋಪಿಗಳಿಗೆ ಜಾಮೀನು ನಿರಾಕರಣೆ ವಾಟ್ಸಾಪ್‌ನಲ್ಲಿ ದೇಶವಿರೋಧಿ ಮೆಸೇಜ್: ಆರೋಪಿಗಳಿಗೆ ಜಾಮೀನು ನಿರಾಕರಣೆ

ಭಾರತ ಮೂಲದ ಮಾಧ್ಯಮ ಕೌಶಲ ಸ್ಟಾರ್ಟ್‌ಅಪ್ 'ಪ್ರೋಟೊ' ಈ ಟಿಪ್‌ಲೈನ್ಅನ್ನು ಆರಂಭಿಸಿದೆ. ಚುನಾವಣೆಯ ಸಂದರ್ಭದಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳು, ವದಂತಿಗಳ ಬಗ್ಗೆ ಅಧ್ಯಯನ ನಡೆಸಲು ಡಾಟಾಬೇಸ್ ಸೃಷ್ಟಿಸಲು ಟಿಪ್‌ಲೈನ್ ಸಹಾಯ ಮಾಡಲಿದೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಂಸ್ಥೆಯ 'ಚೆಕ್‌ಪಾಯಿಂಟ್' ಯೋಜನೆಗಾಗಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.

WhatsApp unveils Checkpoint tipline to tackle fake news lok sabha elections 2019

ತಾವು ಸ್ವೀಕರಿಸುವ ತಪ್ಪು ಮಾಹಿತಿ ಅಥವಾ ಗಾಳಿಸುದ್ದಿಗಳನ್ನು ಭಾರತದ ವಾಟ್ಸಾಪ್ ಬಳಕೆದಾರರು ಚೆಕ್‌ಪಾಯಿಂಟ್ ಟಿಪ್‌ಲೈನ್‌ನ ಸಂಖ್ಯೆಗೆ (+91 9643 000 888) ರವಾನಿಸಬಹುದು. ವಾಟ್ಸಾಪ್ ಬಳಗೆದಾರರು ಟಿಪ್‌ಲೈನ್‌ನಲ್ಲಿ ಒಮ್ಮೆ ಅನುಮಾನಾಸ್ಪದ ಸಂದೇಶವನ್ನು ಹಂಚಿಕೊಂಡರೆ ಫ್ರೋಟೊದ ಪ್ರಮಾಣೀಕರಣ ಕೇಂದ್ರವು ಸಂದೇಶದಲ್ಲಿ ಇರುವ ಮಾಹಿತಿ ಪ್ರಮಾಣೀಕೃತವೇ ಅಥವಾ ಅಲ್ಲವೇ ಎಂದು ಪ್ರತಿಕ್ರಿಯೆ ನೀಡಲಿದೆ.

ನೀಡಲಾಗಿರುವ ಮಾಹಿತಿ ಸತ್ಯವೇ, ಸುಳ್ಳೇ, ತಪ್ಪು ಹಾದಿಗೆ ಕರೆದೊಯ್ಯುತ್ತದೆಯೇ, ವಿವಾದಿತವೇ, ಯಾವುದೇ ಮಹತ್ವ ಹೊಂದಿಲ್ಲವೇ ಅಥವಾ ಅದಕ್ಕೆ ಸಂಬಂಧಿಸಿದ ಯಾವುದಾದರೂ ಮಾಹಿತಿ ಲಭ್ಯವಿದೆಯೇ ಎಂಬುದನ್ನು ಒದಗಿಸಲಿದೆ.

ವಾಟ್ಸ್ ಆಪ್ ಸಂದೇಶ ಜೈಲು ತಲುಪಿಸಬಹುದು, ಎಚ್ಚರ! ವಾಟ್ಸ್ ಆಪ್ ಸಂದೇಶ ಜೈಲು ತಲುಪಿಸಬಹುದು, ಎಚ್ಚರ!

ಈ ಕೇಂದ್ರವು ಚಿತ್ರ, ವಿಡಿಯೋ ಕೊಂಡಿಗಳು ಅಥವಾ ಅಕ್ಷರಗಳ ರೂಪದಲ್ಲಿ ಮಾಹಿತಿಯನ್ನು ಪರಾಮರ್ಶೆಗೆ ಒಳಪಡಿಸಲಿದೆ. ಸದ್ಯ ಇದು ಇಂಗ್ಲಿಷ್, ಹಿಂದಿ, ತೆಲುಗು, ಬಂಗಾಳಿ ಮತ್ತು ಮಲಯಾಳಂ ಭಾಷೆಗಳನ್ನು ಒಳಗೊಳ್ಳಲಿದೆ.

ಪತ್ರಕರ್ತೆ ಬರ್ಖಾ ದತ್ ಗೆ ಆನ್ಲೈನ್ ನಲ್ಲಿ ಕಿರುಕುಳ, 4 ಮಂದಿ ಬಂಧನ ಪತ್ರಕರ್ತೆ ಬರ್ಖಾ ದತ್ ಗೆ ಆನ್ಲೈನ್ ನಲ್ಲಿ ಕಿರುಕುಳ, 4 ಮಂದಿ ಬಂಧನ

ಚುನಾವಣೆ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ಹರಿದಾಡುವ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವ ತಳಮಟ್ಟದ ಸಂಸ್ಥೆಗಳೊಂದಿಗೆ ಕೂಡ ಪ್ರೋಟೊ ಕೆಲಸ ಮಾಡುತ್ತಿದೆ.

English summary
lok sabha elections 2019 : WhatsApp on Tuesday unveiled its 'Checkpoint Tipline', where people can check the authenticity of information received as the messaging giant looks to crack down on fake news ahead of the general election in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X